ಕಾಮರೆಡ್ಡಿ(ತೆಲಂಗಾಣ) : ತನ್ನ ಜಮೀನಿನಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತನ ಶವ ಮೂರು ದಿನದಿಂದ ಮರದಲ್ಲೇ ನೇತಾಡುತ್ತಿದೆ. ಕಾಮರೆಡ್ಡಿ ಜಿಲ್ಲೆಯ ಪೆದ್ದ ಮಲ್ಲಾರೆಡ್ಡಿ ಬಿಕ್ಕನೂರು ಮಂಡಲದಲ್ಲಿ ಈ ಘಟನೆ ನಡೆದಿದೆ.
ರೈತ ಸಿದ್ದರಾಮುಲು ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಜಮೀನು ವಿವಾದದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದು, ನ್ಯಾಯ ಸಿಗುವವರೆಗೂ ಶವ ಕೆಳಗಿಳಿಸದಂತೆ ಪ್ರತಿಭಟನೆ ನಡೆಸುತ್ತಿದ್ದಾರೆ. ಭಾನುವಾರದಿಂದ ರೈತನ ಶವ ಮರದಲ್ಲೇ ನೇತಾಡುತ್ತಿದೆ.
ಇದನ್ನೂ ಓದಿ: ಕಾಗೆಗಳ ರಿವೇಂಜ್.. ಈ ಊರಿನಲ್ಲಿ ನಡೆದು ಹೋಗುವಾಗಲೂ ತಲೆಗೆ ಹಾಕಿಕೊಳ್ಬೇಕು ಹೆಲ್ಮೆಟ್..!
ಜಮೀನಿನ ಗಡಿಗೆ ಕಲ್ಲು ತೂರುತ್ತಿದ್ದ ವ್ಯಕ್ತಿಯೊಬ್ಬರಿಗೆ ಸಿದ್ದರಾಮುಲು ಆಕ್ಷೇಪ ವ್ಯಕ್ತಪಡಿಸಿದ್ದರಂತೆ. ಇದಕ್ಕೆ ಆ ವ್ಯಕ್ತಿ ಪೊಲೀಸರಿಗೆ ದೂರು ನೀಡಿದ್ದನಂತೆ. ಪರಿಣಾಮ ಸಿದ್ಧರಾಮುಲುನನ್ನು ಪೊಲೀಸರು ಎರಡು ಬಾರಿ ಠಾಣೆಗೆ ಕರೆಸಿ ವಿಚಾರಣೆ ನಡೆಸಿದ್ದರು ಎನ್ನಲಾಗಿದೆ. ಇದರಿಂದ ಮನನೊಂದ ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಸಂಬಂಧಿಕರು ಆರೋಪಿಸಿದ್ದಾರೆ. ನ್ಯಾಯ ಸಿಗುವವರೆಗೂ ಶವವನ್ನು ಕೆಳಗಿಳಿಸದಂತೆ ಪ್ರತಿಭಟನೆ ನಡೆಸುತ್ತಿದ್ದಾರೆ.