ETV Bharat / bharat

ಟ್ರ್ಯಾಕ್ಟರ್​ ಸ್ಟಂಟ್ ಮಾಡಲು ಹೋಗಿ ಗಾಯಗೊಂಡಿದ್ದ ರೈತ ಸಾವು

parade
ಸಾವು
author img

By

Published : Jan 26, 2021, 1:42 PM IST

Updated : Jan 26, 2021, 2:50 PM IST

13:39 January 26

ಟ್ರ್ಯಾಕ್ಟರ್‌ನಲ್ಲಿ ಸ್ಟಂಟ್​ ಮಾಡಲು ಹೋಗಿ ಗಾಯಗೊಂಡಿದ್ದ ರೈತ ಮೃತಪಟ್ಟಿದ್ದಾರೆ.

ಟ್ರ್ಯಾಕ್ಟರ್​ ಸ್ಟಂಟ್ ಮಾಡಲು ಹೋಗಿ ಗಾಯಗೊಂಡಿದ್ದ ರೈತ ಸಾವು..!

ದೆಹಲಿ: ಟ್ರ್ಯಾಕ್ಟರ್‌ನಲ್ಲಿ ಸ್ಟಂಟ್​ ಮಾಡಲು ಹೋಗಿ ಗಾಯಗೊಂಡಿದ್ದ ರೈತ ಮೃತಪಟ್ಟಿದ್ದಾರೆ. ಕೇಂದ್ರದ ಕೃಷಿ ಕಾನೂನುಗಳ ವಿರುದ್ಧದ ಹೋರಾಟದ ನಿಮಿತ್ತ ದೆಹಲಿ-ನೋಯ್ಡಾ ಗಡಿಭಾಗವಾದ ಚಿಲ್ಲಾ ಗಡಿಯಲ್ಲಿ ರೈತರು ಟ್ರ್ಯಾಕ್ಟರ್ ರ‍್ಯಾಲಿ ನಡೆಸುತ್ತಿದ್ದಾರೆ. ಈ ವೇಳೆ ರೈತರಿಬ್ಬರು ಟ್ರ್ಯಾಕ್ಟರ್‌ನಲ್ಲಿ ಸ್ಟಂಟ್​ ಮಾಡಲು ಹೋದಾಗ ಟ್ರ್ಯಾಕ್ಟರ್‌ ಪಲ್ಟಿಯಾಗಿದೆ.

ದೆಹಲಿಯಲ್ಲಿ ನಡೆಯುತ್ತಿದ್ದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದೆ. ಟ್ರ್ಯಾಕ್ಟರ್​ ಪರೇಡ್​​ ವೇಳೆ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ನಡೆದ ಘರ್ಷಣೆಯಲ್ಲಿ ಓರ್ವ ಪೊಲೀಸ್ ಅಸ್ವಸ್ಥಗೊಂಡಿದ್ದಾರೆ.

ಇದನ್ನೂ ಓದಿ:ಖಡ್ಗ ಎತ್ತಿ ಪೊಲೀಸರ ಮೇಲೆ ಹಲ್ಲೆಗೆ ಮುಂದಾದ ರೈತರು - ವಿಡಿಯೋ ನೋಡಿ

ಗಡಿಯಲ್ಲಿ ಪ್ರತಿಭಟನೆ ಮತ್ತಷ್ಟು ತೀವ್ರಗೊಳ್ಳುತ್ತಿದ್ದು, ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ಸಂಘರ್ಷ ಏರ್ಪಟ್ಟಿದೆ. ರೈತರು ರಾಜಧಾನಿ ಪ್ರವೇಶಿಸದಂತೆ ತಡೆಯಲು ಪೊಲೀಸರು ನಾಕಾಬಂಧಿ ಹಾಕಿದ್ದಾರೆ. ಹಲವೆಡೆ ಬ್ಯಾರಿಕೇಡ್​​ಗಳನ್ನು ತುಳಿದು ರೈತರು ಮುನ್ನುಗ್ಗುತ್ತಿದ್ದಾರೆ. ಪ್ರತಿಭಟನಾಕಾರರನ್ನು ಹತ್ತಿಕ್ಕಲು ಪೊಲೀಸರು ಹರಸಾಹಸ ಪಡುವಂತಾಗಿದೆ.

Last Updated : Jan 26, 2021, 2:50 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.