ETV Bharat / bharat

ಅಪಘಾತದಲ್ಲಿ ನಿಷ್ಕ್ರಿಯಗೊಂಡ ಮೆದುಳು: ಸಾಯುವ ಮೊದಲು 4 ಜನರಿಗೆ ಹೊಸ ಜೀವ ನೀಡಿದ ವ್ಯಕ್ತಿ ! - ಸಾಯುವ ಮೊದಲು ನಾಲ್ಕು ಜನರಿಗೆ ಹೊಸ ಜೀವ ನೀಡಿದ ವ್ಯಕ್ತಿ

ರಸ್ತೆ ಅಪಘಾತದಿಂದ ಗಾಯಗೊಂಡ ಸುನಿಲ್ ಸಾಯಿ ಎಂಬುವರನ್ನು ಸಿಕಾರ್‌ನ ಎಸ್‌ಕೆ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲು ಮಾಡಲಾಗಿತ್ತು. ಆದರೆ, ಆತನ ಆರೋಗ್ಯ ಸ್ಥಿತಿ ಗಂಭೀರವಾಗುತ್ತಿದ್ದಂತೆ ಜೈಪುರದ ಸವಾಯಿ ಮಾನ್‌ಸಿಂಗ್ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಆದರೆ, ಅವರ ಮೆದುಳು ಅಷ್ಟರಲ್ಲಾಗಲೇ ನಿಷ್ಕ್ರಿಯಗೊಂಡಿತ್ತು ಎಂದು ವೈದ್ಯರು ತಿಳಿಸಿದ್ದಾರೆ.

ಅಪಘಾತದಲ್ಲಿ ನಿಷ್ಕ್ರಿಯಗೊಂಡ ಮೆದುಳು
ಅಪಘಾತದಲ್ಲಿ ನಿಷ್ಕ್ರಿಯಗೊಂಡ ಮೆದುಳು
author img

By

Published : Feb 21, 2022, 9:00 PM IST

ಜೈಪುರ: ಫೆಬ್ರವರಿ 16 ರಂದು ಗಂಭೀರವಾದ ಏಟಿನಿಂದ ರಾಜಸ್ಥಾನದ ಸಿಕರ್‌ನ ಯುವಕನ ಮೆದುಳು ಡೆಡ್​ ಆಗಿತ್ತು. ಆದರೆ, ಆತ ಸಾವಿನಲ್ಲೂ ನಾಲ್ಕು ಜನರಿಗೆ ಹೊಸ ಜೀವನ ಕೊಟ್ಟು ಹೋಗಿದ್ದಾನೆ. ರಸ್ತೆ ಅಪಘಾತದಿಂದ ಗಾಯಗೊಂಡ ಸುನಿಲ್ ಸಾಯಿ ಎಂಬುವರನ್ನು ಸಿಕಾರ್‌ನ ಎಸ್‌ಕೆ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲು ಮಾಡಲಾಗಿತ್ತು.

ಆದರೆ, ಆತನ ಆರೋಗ್ಯ ಸ್ಥಿತಿ ಗಂಭೀರವಾಗುತ್ತಿದ್ದಂತೆ ಜೈಪುರದ ಸವಾಯಿ ಮಾನ್‌ಸಿಂಗ್ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಆದರೆ, ಆತನ ಮೆದುಳು ಅಷ್ಟರಲ್ಲಾಗಲೇ ಸತ್ತಿತ್ತು ಎಂದು ವೈದ್ಯರು ತಿಳಿಸಿದ್ದಾರೆ.

ಸಾಯಿ ಆರೋಗ್ಯ ಹದಗೆಟ್ಟ ನಂತರ ಅವರ ಕುಟುಂಬವನ್ನು ಸಂಪರ್ಕಿಸಿದ ಆಸ್ಪತ್ರೆಯ ಆಡಳಿತ, ಅಂಗಾಂಗ ದಾನ ಮಾಡುವಂತೆ ಮನವೊಲಿಸಿತು. ಕುಟುಂಬದ ಅನುಮತಿ ಹಿನ್ನೆಲೆ ಸವಾಯಿ ಮಾನ್ಸಿಂಗ್ ಆಸ್ಪತ್ರೆಯಲ್ಲಿ ಪ್ರಮುಖ ಅಂಗಗಳ ಹೊರತೆಗೆಯುವಿಕೆ ಪ್ರಾರಂಭವಾಯಿತು. ಆಸ್ಪತ್ರೆಯಲ್ಲಿ ಎರಡು ಮೂತ್ರಪಿಂಡಗಳನ್ನು ಕಸಿ ಮಾಡಲಾಗಿದ್ದು, ಹೃದಯವನ್ನು ಹಸಿರು ಕಾರಿಡಾರ್ ಬಳಸಿ ಎಟರ್ನಲ್​ ಆಸ್ಪತ್ರೆಗೆ ಸಾಗಿಸಲಾಗಿದೆ. ರೋಗಿಯ ಯಕೃತ್ತನ್ನು ಮಣಿಪಾಲ ಆಸ್ಪತ್ರೆಯಲ್ಲಿ ಕಸಿ ಮಾಡಲಾಗಿದೆ.

ಇದನ್ನೂ ಓದಿ: ಭಾರತೀಯ ನೌಕಾಪಡೆ ಫ್ಲೀಟ್ ಪರಿಶೀಲಿಸಿದ ರಾಮನಾಥ್ ಕೋವಿಂದ್

ಫೆಬ್ರವರಿ 16 ರಂದು ಸಾಯಿ ಸಿಕರ್‌ನ ಡುಜೋಡ್‌ನಲ್ಲಿ ಮನೆಗೆ ಹಿಂದಿರುಗುತ್ತಿದ್ದಾಗ ಅವರ ಕಾರಿಗೆ ಮತ್ತೊಂದು ಅಪರಿಚಿತ ಕಾರು ಡಿಕ್ಕಿ ಹೊಡೆದು ಗಂಭೀರಗೊಂಡಿದ್ದ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.