ETV Bharat / bharat

ರಿಯಲ್​​ ಎಸ್ಟೇಟ್​​ ಬ್ಯುಸಿನೆಸ್​​ನಲ್ಲಿ ನಷ್ಟ.. ಇಬ್ಬರು ಮಕ್ಕಳೊಂದಿಗೆ ದಂಪತಿ ಆತ್ಮಹತ್ಯೆ.. - ತೆಲಂಗಾಣದಲ್ಲಿ ಕುಟುಂಬದ ದಂಪತಿ, ಇಬ್ಬರು ಮಕ್ಕಳು ಆತ್ಮಹತ್ಯೆ

ಮನೆಯಲ್ಲಿ ಗಂಡ ಪ್ರತಿದಿನ ಜಗಳ ಮಾಡ್ತಿದ್ದ ಕಾರಣ ಲಾವಣ್ಯ ತನ್ನಿಬ್ಬರು ಮಕ್ಕಳೊಂದಿಗೆ ನಿನ್ನೆ ರಾತ್ರಿ ಮನೆಬಿಟ್ಟು ಹೊರ ಹೋಗಿದ್ದಾರೆ. ಹೆಂಡತಿ ಹಾಗೂ ಮಕ್ಕಳು ಹೋಗಿರುವುದರಿಂದ ಆತ ಮನನೊಂದಿದ್ದಾರೆ. ಇದರ ಬೆನ್ನಲ್ಲೇ ಹೆಂಡತಿ ಹಾಗೂ ಮಕ್ಕಳು ಸಾವನ್ನಪ್ಪಿರುವ ಸುದ್ದಿ ಸಿಗುತ್ತಿದ್ದಂತೆ ಪತಿ ಸಾವಿಗೆ ಶರಣಾಗಿದ್ದಾರೆ..

Family Commits Suicide in telangana
Family Commits Suicide in telangana
author img

By

Published : Dec 3, 2021, 2:57 PM IST

ಸಂಗಾರೆಡ್ಡಿ(ತೆಲಂಗಾಣ) : ರಿಯಲ್​​ ಎಸ್ಟೇಟ್​​​ ಬ್ಯುಸಿನೆಸ್​​ನಲ್ಲಿ ಅಪಾರವಾದ ನಷ್ಟ ಅನುಭವಿಸಿದ್ದಕ್ಕಾಗಿ ಇಬ್ಬರು ಮಕ್ಕಳೊಂದಿಗೆ ದಂಪತಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ತೆಲಂಗಾಣದ ಸಂಗಾರೆಡ್ಡಿಯಲ್ಲಿ ಈ ಘಟನೆ ನಡೆದಿದೆ.

ಮೃತರನ್ನ ಚಂದ್ರಕಾಂತ್​(38), ಲಾವಣ್ಯ(32) ಹಾಗೂ ಇಬ್ಬರು ಮಕ್ಕಳಾದ ಪ್ರಥಮ್​(6), ಸರ್ವಜ್ಞಾ(3) ಎಂದು ಗುರುತಿಸಲಾಗಿದೆ. ಕಳೆದ ಅನೇಕ ವರ್ಷಗಳಿಂದ ಚಂದ್ರಕಾಂತ್​ ರಿಯಲ್​ ಎಸ್ಟೇಟ್​​ ಬ್ಯುಸಿನೆಸ್​ ಮಾಡ್ತಿದ್ದ.

ಆದರೆ, ದಿಢೀರ್​ ಆಗಿ ಅಪಾರ ಪ್ರಮಾಣದ ನಷ್ಟ ಅನುಭವಿಸಿರುವ ಕಾರಣ ಪ್ರತಿದಿನ ಹೆಂಡತಿ ಜೊತೆಗೆ ಜಗಳವಾಡುತ್ತಿದ್ದನಂತೆ. ಇದರ ಬೆನ್ನಲ್ಲೇ ಈ ನಿರ್ಧಾರ ಕೈಗೊಂಡಿದ್ದಾರೆ.

ಮನೆಯಲ್ಲಿ ಗಂಡ ಪ್ರತಿದಿನ ಜಗಳ ಮಾಡ್ತಿದ್ದ ಕಾರಣ ಲಾವಣ್ಯ ತನ್ನಿಬ್ಬರು ಮಕ್ಕಳೊಂದಿಗೆ ನಿನ್ನೆ ರಾತ್ರಿ ಮನೆಬಿಟ್ಟು ಹೊರ ಹೋಗಿದ್ದಾರೆ. ಹೆಂಡತಿ ಹಾಗೂ ಮಕ್ಕಳು ಹೋಗಿರುವುದರಿಂದ ಆತ ಮನನೊಂದಿದ್ದಾರೆ. ಇದರ ಬೆನ್ನಲ್ಲೇ ಹೆಂಡತಿ ಹಾಗೂ ಮಕ್ಕಳು ಸಾವನ್ನಪ್ಪಿರುವ ಸುದ್ದಿ ಸಿಗುತ್ತಿದ್ದಂತೆ ಪತಿ ಸಾವಿಗೆ ಶರಣಾಗಿದ್ದಾರೆ.

Family Commits Suicide in telangana
ಇಬ್ಬರು ಮಕ್ಕಳೊಂದಿಗೆ ದಂಪತಿ ಆತ್ಮಹತ್ಯೆ

ಇದನ್ನೂ ಓದಿರಿ: ಛತ್ತೀಸ್‌ಗಢ : ಕೊರೊನಾ ಲಸಿಕೆ ಪಡೆದ 700ಕ್ಕೂ ಹೆಚ್ಚು ನಕ್ಸಲರು

ಪ್ರಕರಣದ ಬಗ್ಗೆ ಮಾಹಿತಿ ಗೊತ್ತಾಗುತ್ತಿದ್ದಂತೆ ಘಟನಾ ಸ್ಥಳಕ್ಕೆ ತಲುಪಿರುವ ಪೊಲೀಸರು, ಈಗಾಗಲೇ ಎಲ್ಲ ಮೃತದೇಹ ವಶಕ್ಕೆ ಪಡೆದುಕೊಂಡು, ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ತನಿಖೆ ಆರಂಭಿಸಲಾಗಿದೆ ಎಂದು ಮಾಹಿತಿ ತಿಳಿದು ಬಂದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.