ETV Bharat / bharat

ನಿಯಮ ಉಲ್ಲಂಘನೆ: ಬಾಲಕಿ ಕುರಿತು ರಾಹುಲ್​ಗಾಂಧಿ ಹಾಕಿದ್ದ ಪೋಸ್ಟ್ ತೆಗೆದು ಹಾಕಿದ FB, Insta - ಇನ್​ಸ್ಟಾ

ಎಫ್​ಬಿ, ಇನ್​​ಸ್ಟಾ ನಿಯಮಗಳನ್ನು ಉಲ್ಲಂಘಿಸಿ ರಾಹುಲ್​ಗಾಂಧಿ ಹಾಕಿದ್ದ ಪೋಸ್ಟ್​ ಅನ್ನು ಇನ್​ಸ್ಟಾ, ಎಫ್​ಬಿ ತೆಗೆದುಹಾಕಿವೆ.

Rahul Gandhi
Rahul Gandhi
author img

By

Published : Aug 20, 2021, 5:40 PM IST

ನವದೆಹಲಿ: ಅತ್ಯಾಚಾರಕ್ಕೊಳಗಾಗಿ ಕೊಲೆಯಾದ ಮತ್ತು ಬಲವಂತವಾಗಿ ಅಂತ್ಯಸಂಸ್ಕಾರ ಮಾಡಿದ ಒಂಬತ್ತು ವರ್ಷದ ದಲಿತ ಬಾಲಕಿ ಚಿತ್ರಗಳನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಫೇಸ್​​ಬುಕ್​ನಲ್ಲಿ ಪೋಸ್ಟ್ ಮಾಡಿದ್ದರು. ಆದರೆ, ಈ ಪೋಸ್ಟ್​ ಎಫ್​ಬಿ ಹಾಗೂ ಇನ್​ಸ್ಟಾದ ನೀತಿಗಳನ್ನು ಉಲ್ಲಂಘಿಸಿದ್ದರಿಂದ ಜಾಲತಾಣಗಳು ಈ ಪೋಸ್ಟ್ ತೆಗೆದುಹಾಕಿವೆ.

ನಿನ್ನೆಯಷ್ಟೇ ಫೇಸ್‌ಬುಕ್, ರಾಹುಲ್ ಗಾಂಧಿಗೆ ಈ ಬಗ್ಗೆ ತಿಳಿಸಿದ್ದು ಪೋಸ್ಟ್​ ತೆಗೆದುಹಾಕುವಂತೆ ಎಚ್ಚರಿಕೆ ನೀಡಿತ್ತು. ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದಿಂದ (NCPCR) ಸಮನ್ಸ್ ಸ್ವೀಕರಿಸಿದ ಒಂದು ವಾರದ ನಂತರ ಫೇಸ್​ಬುಕ್ ಈ ಕ್ರಮ ಕೈಗೊಂಡಿತ್ತು.

ಎನ್‌ಸಿಪಿಸಿಆರ್‌ನ ಆಗಸ್ಟ್ 10, 2021 ರ ಸೂಚನೆ ಪ್ರಕಾರ ನಿಮ್ಮ ಇನ್‌ಸ್ಟಾಗ್ರಾಮ್ ಖಾತೆಯ ಮೂಲಕ ನೀವು ಅಪ್ಲೋಡ್​ ಮಾಡಿದ ಪೋಸ್ಟ್, ಬಾಲನ್ಯಾಯ ಕಾಯ್ದೆ 2015 ರ ಸೆಕ್ಷನ್ 74 ರ ಅಡಿ ಪೊಕ್ಸೊ, 2012 ರ ಸೆಕ್ಷನ್ 23 ಮತ್ತು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 288 ಎ ಅಡಿ ಕಾನೂನುಬಾಹಿರವಾಗಿದೆ. ಎನ್‌ಸಿಪಿಸಿಆರ್‌ನ ಸೂಚನೆಗೆ ಅನುಸಾರವಾಗಿ, ಈ ಪೋಸ್ಟ್ ಅನ್ನು ತ್ವರಿತವಾಗಿ ತೆಗೆದುಹಾಕಲು ನಿಮ್ಮನ್ನು ವಿನಂತಿಸಲಾಗಿದೆ, ಎಂದು ಫೇಸ್​​​ಬುಕ್ ರಾಹುಲ್ ಗಾಂಧಿಗೆ ಇಮೇಲ್ ಕಳುಹಿಸಿತ್ತು.

ಎನ್‌ಸಿಪಿಸಿಆರ್ ಈ ಹಿಂದೆ ಫೇಸ್‌ಬುಕ್‌ಗೆ ಪತ್ರ ಬರೆದು, ರಾಹುಲ್​ ಗಾಂಧಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಎಫ್​ಬಿಗೆ ತಿಳಿಸಿತ್ತು. ಫೇಸ್​ಬುಕ್​ ಯಾವುದೇ ಪ್ರತಿಕ್ರಿಯೆ ನೀಡದ ಹಿನ್ನೆಲೆ ಆಗಸ್ಟ್​ 13 ರಂದು ತನ್ನ (ಎಫ್​ಬಿ) ಪ್ರತಿನಿಧಿಗಳನ್ನು ಖುದ್ದಾಗಿ ಹಾಜರಾಗುವಂತೆ ಎನ್‌ಸಿಪಿಸಿಆರ್ ಸಮನ್ಸ್ ಜಾರಿ ಮಾಡಿತ್ತು.

ಇದನ್ನೂ ಓದಿ: ಮೋದಿ ಸರ್ಕಾರಕ್ಕೆ ಠಕ್ಕರ್ ಕೊಡಲು ವಿಪಕ್ಷಗಳು ಸಜ್ಜು.. ಸೋನಿಯಾ ನೇತೃತ್ವದಲ್ಲಿ ಮೀಟಿಂಗ್

ಫೇಸ್‌ಬುಕ್, ರಾಹುಲ್‌ಗೆ ಪತ್ರ ಬರೆದು ಎನ್‌ಸಿಪಿಸಿಆರ್‌ಗೆ ಪತ್ರದ ಪ್ರತಿಯನ್ನು ನೀಡಿದ ನಂತರ, ಮಕ್ಕಳ ಹಕ್ಕುಗಳ ಸಮಿತಿಯು ಎಫ್​ಬಿಗೆ ಸಮನ್ಸ್‌ನಿಂದ ವಿನಾಯಿತಿ ನೀಡಿತ್ತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.