ETV Bharat / bharat

'ಹೋಳಿ ಅವತಾರ್' ಸ್ಟಿಕ್ಕರ್‌ಗಳನ್ನು ಬಿಡುಗಡೆ ಮಾಡಿದ ಫೇಸ್‌ಬುಕ್

author img

By

Published : Mar 27, 2021, 4:03 PM IST

ಕಳೆದ ಎರಡು ವಾರಗಳಲ್ಲಿ ಭಾರತದಲ್ಲಿ 4 ದಶಲಕ್ಷಕ್ಕೂ ಹೆಚ್ಚು ಜನರು ಫೇಸ್‌ಬುಕ್‌ನಲ್ಲಿ ಹೋಳಿಯ ಬಗ್ಗೆ 6.6 ಮಿಲಿಯನ್‌ಗಿಂತಲೂ ಹೆಚ್ಚು ಪೋಸ್ಟ್‌ ಮತ್ತು ಕಾಮೆಂಟ್‌ಗಳನ್ನು ಮಾಡಿದ್ದಾರೆ. ಹೀಗಾಗಿ, ಬಳಕೆದಾರರಿಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಲು ಹೆಚ್ಚಿನ ಆಯ್ಕೆಗಳನ್ನು ನೀಡಲು ನಾವು 'ಹೋಳಿ ಅವತಾರ್' ಸ್ಟಿಕ್ಕರ್‌ಗಳನ್ನು ಬಿಡುಗಡೆ ಮಾಡಲಾಗಿದೆ..

Tech-emojis
'ಹೋಳಿ ಅವತಾರ್' ಸ್ಟಿಕ್ಕರ್‌ಗಳನ್ನು ಬಿಡುಗಡೆ ಮಾಡಿದ ಫೇಸ್‌ಬುಕ್

ನವದೆಹಲಿ : ಬಣ್ಣದ ಹಬ್ಬದ ಪ್ರಯುಕ್ತ ಫೇಸ್‌ಬುಕ್ ಹೋಳಿ ಥೀಮ್​ ಇರುವ ಅವತಾರ್ ಸ್ಟಿಕ್ಕರ್‌ಗಳನ್ನು ಬಿಡುಗಡೆ ಮಾಡಿ ಬಳಕೆದಾರರ ಗಮನ ಸೆಳೆದಿದೆ. ಈ ಹೊಸ ಅವತಾರ್ ಸ್ಟಿಕ್ಕರ್‌ಗಳನ್ನು ರಚಿಸಲು ಬಳಕೆದಾರರು ಫೇಸ್‌ಬುಕ್ ಅಥವಾ ಮೆಸೆಂಜರ್ ಕಾಮೆಂಟ್ ಕಾಂಪೋಸರ್​ಗೆ ಹೋಗಿ ಮೊದಲು 'ಸ್ಮೈಲಿ' (smiley) ಬಟನ್ ಕ್ಲಿಕ್ ಮಾಡಬೇಕು.

ಸ್ಟಿಕ್ಕರ್ ಟ್ಯಾಬ್ ಓಪನ್​ ಆದ ಬಳಿಕ 'ನಿಮ್ಮ ಅವತಾರ್ ರಚಿಸಿ' (Create Your Avatar) ಎನ್ನುವುದರ ಮೇಲೆ ಕ್ಲಿಕ್​ ಮಾಡಬೇಕು. ಅಥವಾ ನಿಮ್ಮ ಫೇಸ್‌ಬುಕ್ ಅಪ್ಲಿಕೇಶನ್‌ನಲ್ಲಿ ಬುಕ್‌ಮಾರ್ಕ್‌ಗಳ ವಿಭಾಗದಲ್ಲಿ ಅವತಾರ್ ಕ್ರಿಯೇಟರ್​ ಹುಡುಕಬಹುದು.

ಇದನ್ನೂ ಓದಿ: ಮಕ್ಕಳೂ ಇನ್ಮುಂದೆ ಇನ್‌ಸ್ಟಾಗ್ರಾಂ ಬಳಕೆ ಮಾಡಬಹುದು..

ನಂತರ ನೀವು ಫೇಸ್‌ಬುಕ್​ನಲ್ಲಿ ಪೋಸ್ಟ್​ಗಳನ್ನು ಮಾಡುವಾಗ ಅಥವಾ ಕಾಮೆಂಟ್ ಮಾಡುವಾಗ ಅಥವಾ ಮೆಸೆಂಜರ್ ಬಳಸುವಾಗ ಹೊಸ ಹೋಳಿ ಸ್ಟಿಕ್ಕರ್‌ಗಳು ಸ್ಟಿಕ್ಕರ್ ಲೈಬ್ರರಿಯಲ್ಲಿ ಕಾಣಿಸುತ್ತದೆ.

ಕಳೆದ ಎರಡು ವಾರಗಳಲ್ಲಿ ಭಾರತದಲ್ಲಿ 4 ದಶಲಕ್ಷಕ್ಕೂ ಹೆಚ್ಚು ಜನರು ಫೇಸ್‌ಬುಕ್‌ನಲ್ಲಿ ಹೋಳಿಯ ಬಗ್ಗೆ 6.6 ಮಿಲಿಯನ್‌ಗಿಂತಲೂ ಹೆಚ್ಚು ಪೋಸ್ಟ್‌ ಮತ್ತು ಕಾಮೆಂಟ್‌ಗಳನ್ನು ಮಾಡಿದ್ದಾರೆ. ಹೀಗಾಗಿ, ಬಳಕೆದಾರರಿಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಲು ಹೆಚ್ಚಿನ ಆಯ್ಕೆಗಳನ್ನು ನೀಡಲು ನಾವು 'ಹೋಳಿ ಅವತಾರ್' ಸ್ಟಿಕ್ಕರ್‌ಗಳನ್ನು ಬಿಡುಗಡೆ ಮಾಡಿದ್ದೇವೆ ಎಂದು ಫೇಸ್​ಬುಕ್​ ತಿಳಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.