ETV Bharat / bharat

ರೋಮ್​ನ ವಿಶ್ವ ಶಾಂತಿ ಸಭೆಯಲ್ಲಿ ಭಾಗಿಯಾಗಲು ಕೇಂದ್ರ ನನಗೆ ಅನುಮತಿ ನೀಡಿಲ್ಲ : ಸಿಎಂ ಮಮತಾ ದೀದಿ ಆರೋಪ

author img

By

Published : Sep 25, 2021, 8:48 PM IST

ಒಂದು ರಾಜ್ಯದ ಮುಖ್ಯಮಂತ್ರಿ ಜೊತೆಗೆ ಕೇಂದ್ರ ಸರ್ಕಾರ ಈ ರೀತಿಯಾಗಿ ನಡೆದುಕೊಂಡಿರುವುದು ಸರಿಯಲ್ಲ. ಮುಖ್ಯಮಂತ್ರಿಗಳು, ಸಂಸದರು ಅಥವಾ ಶಾಸಕರು ಅಧಿಕೃತವಾಗಿ ವಿದೇಶಿ ಪ್ರವಾಸ ಕೈಗೊಂಡಾಗ ವಿದೇಶಾಂಗ ವ್ಯವಹಾರಗಳ ಸಚಿವಾಲಯದಿಂದ ಅನುಮತಿ ಪಡೆದುಕೊಳ್ಳಬೇಕು..

Mamata Banerjee
Mamata Banerjee

ಕೋಲ್ಕತ್ತಾ (ಪಶ್ಚಿಮಬಂಗಾಳ) : ಈ ಹಿಂದಿನಿಂದಲೂ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿರುವ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇದೀಗ ಮತ್ತೊಮ್ಮೆ ಹರಿಹಾಯ್ದಿದ್ದಾರೆ. ಭವಾನಿಪುರ ಉಪಚುನಾವಣೆಯಲ್ಲಿ ಕಣಕ್ಕಿಳಿದಿರುವ ಸಿಎಂ ಮಮತಾ ಬ್ಯಾನರ್ಜಿ, ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿದ್ದ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ತಮ್ಮ ಆಕ್ರೋಶ ಹೊರ ಹಾಕಿದ್ದಾರೆ.

ಮುಂದಿನ ತಿಂಗಳು ರೋಮ್​ನಲ್ಲಿ ನಿಗಿದಿಯಾಗಿರುವ ವಿಶ್ವ ಶಾಂತಿಯ ಕುರಿತ ಸಭೆಯಲ್ಲಿ ಭಾಗಿಯಾಗಲು ಕೇಂದ್ರ ಸರ್ಕಾರ ನನಗೆ ಅವಕಾಶ ನೀಡಿಲ್ಲ ಎಂದು ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.

ರೋಮ್​ನಲ್ಲಿ ವಿಶ್ವಶಾಂತಿ ಕುರಿತಾದ ಒಂದು ಸಭೆ ಆಯೋಜನೆಗೊಂಡಿದ್ದು, ನನಗೆ ಆಹ್ವಾನ ನೀಡಲಾಗಿದೆ. ಇದರ ಜೊತೆಗೆ ಇಟಲಿ ವಿಶೇಷ ಅನುಮತಿ ನೀಡಿದೆ. ಆದರೆ, ಕೇಂದ್ರ ಸರ್ಕಾರ ಇದಕ್ಕೆ ಅನುಮತಿ ನೀಡಲು ನಿರಾಕರಣೆ ಮಾಡಿದೆ ಎಂದು ದೀದಿ ಹೇಳಿಕೊಂಡಿದ್ದಾರೆ.

  • There was a meeting on world peace in Rome,where I was invited. German Chancellor, Pope (Francis) are also supposed to attend. Italy had given special permission for me to attend, yet Centre denied clearance, saying it wasn't right for CM: WB CM Mamata Banerjee in Kolkata pic.twitter.com/LFvePbBnr9

    — ANI (@ANI) September 25, 2021 " class="align-text-top noRightClick twitterSection" data=" ">

ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವಾಲಯ ನನಗೆ ಅನುಮತಿ ನೀಡಲು ನಿರಾಕರಣೆ ಮಾಡಿದ್ದು, ಕೇಂದ್ರ ಸರ್ಕಾರ ನನ್ನ ವಿರುದ್ಧ ಮತ್ತಷ್ಟು ಹುನ್ನಾರ ನಡೆಸಿದೆ ಎಂದು ವಾಗ್ದಾಳಿ ನಡೆಸಿದ್ದಾರೆ ಮಮತಾ ದೀದಿ.

ಇದನ್ನೂ ಓದಿರಿ: ಭಾರತವನ್ನು 'ತಾಲಿಬಾನ್' ಮಾಡಲು ಬಿಡುವುದಿಲ್ಲ: ಕೇಂದ್ರ ಸರ್ಕಾರದ ವಿರುದ್ಧ ಮಮತಾ ವಾಗ್ದಾಳಿ

ಒಂದು ರಾಜ್ಯದ ಮುಖ್ಯಮಂತ್ರಿ ಜೊತೆಗೆ ಕೇಂದ್ರ ಸರ್ಕಾರ ಈ ರೀತಿಯಾಗಿ ನಡೆದುಕೊಂಡಿರುವುದು ಸರಿಯಲ್ಲ. ಮುಖ್ಯಮಂತ್ರಿಗಳು, ಸಂಸದರು ಅಥವಾ ಶಾಸಕರು ಅಧಿಕೃತವಾಗಿ ವಿದೇಶಿ ಪ್ರವಾಸ ಕೈಗೊಂಡಾಗ ವಿದೇಶಾಂಗ ವ್ಯವಹಾರಗಳ ಸಚಿವಾಲಯದಿಂದ ಅನುಮತಿ ಪಡೆದುಕೊಳ್ಳಬೇಕು.

ಆದರೆ, ಮಮತಾ ಬ್ಯಾನರ್ಜಿಗೆ ಕೇಂದ್ರ ಅನುಮತಿ ನೀಡಿಲ್ಲ. ಲಭ್ಯವಾಗಿರುವ ಮಾಹಿತಿ ಪ್ರಕಾರ ಮಮತಾ ಅಕ್ಟೋಬರ್​​ 6 ಮತ್ತು 7ರಂದು ರೋಮ್​ನಲ್ಲಿ ನಡೆಯಲಿರುವ ವಿಶ್ವ ಶಾಂತಿ ಸಮಾವೇಶದಲ್ಲಿ ಭಾಗಿಯಾಗಬೇಕಾಗಿತ್ತು. ಆದರೆ, ಇದೀಗ ದೀದಿ ಈ ಪ್ರವಾಸ ರದ್ಧು ಮಾಡಿಕೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.