ETV Bharat / bharat

ಮೂರು ಬಾರಿ ಶಾಸಕ, ಸ್ವಂತ ಮನೆಯೂ ಇಲ್ಲ, ಪ್ರಯಾಣವೆಲ್ಲವೂ ಸಾರಿಗೆ ಬಸ್​ನಲ್ಲೇ.. ಇವರ ಜೀವನ ನಮಗೆ ಆದರ್ಶ! - ಅಖಂಡ ಆಂಧ್ರಪ್ರದೇಶ ರಾಜ್ಯ ಹತ್ತಿ ರೈತರ ಕ್ಷೇಮಾಭಿವೃದ್ಧಿ

ಕಮ್ಯುನಿಸ್ಟ್ ಪಕ್ಷದ ಸಿದ್ದಾಂತವನ್ನು ಅಳವಡಿಸಿಕೊಂಡಿದ್ದ ತೆಲಂಗಾಣದ ಶಾಸಕರೊಬ್ಬರು 15 ವರ್ಷಗಳ ಕಾಲ ಜನರ ಮಧ್ಯೆಯೇ ಇದ್ದು ಅವರಿಗಾಗಿಯೇ ದುಡಿದಿದ್ದಾರೆ. ಬದುಕಿರುವವರಿಗೂ ಅವರಿಗೆ ಒಂದು ಸ್ವಂತ ಮನೆಯೂ ಇಲ್ಲ.. ಅವರ ಸಾಮಾನ್ಯ ಎಂಎಲ್​ಎ ಅಂತೆ ಸ್ವಂತ ವಾಹನದಲ್ಲಿ ಓಡಾಟ ನಡೆಸದೇ ತಮ್ಮ ಜೀವನ ಪ್ರಯಾಣವೆಲ್ಲವೂ ಸಾರಿಗೆ ಬಸ್​ನಲ್ಲೇ ಕಳೆದಿದ್ರೂ.. ಅವರ ಬಗೆಗಿನ ಇಂಟ್ರೆಸ್ಟಿಂಗ್​ ಮಾಹಿತಿ ನಿಮಗಾಗಿ..

Exclusive story of former MLA Gurram  story of former MLA Gurram Yadagiri Reddy  MLA Gurram Yadagiri Reddy news  ಮೂರು ಬಾರಿ ಶಾಸಕ  ಸ್ವಂತ ಮನೆಯೂ ಇಲ್ಲ  ಪ್ರಯಾಣವೆಲ್ಲವೂ ಸಾರಿಗೆ ಬಸ್​ನಲ್ಲೇ  ಇವರ ಜೀವನ ನಮಗೆ ಆದರ್ಶ  15 ವರ್ಷಗಳ ಕಾಲ ಜನರಿಗಾಗಿ ದುಡಿದಿದ್ದಾರೆ  ಬದುಕಿರುವವರಿಗೂ ಅವರಿಗೆ ಒಂದು ಸ್ವಂತ ಮನೆಯೂ ಇಲ್ಲ  ಪ್ರಯಾಣವೆಲ್ಲವೂ ಸಾರಿಗೆ ಬಸ್​ನಲ್ಲೇ ಸಾಗುತ್ತಿತ್ತು  ಗುರ್ರಂ ಯಾದಗಿರಿರೆಡ್ಡಿ ಜೀವನ ಮತ್ತು ರಾಜಕೀಯ ಪ್ರಯಾಣ  ಅಖಂಡ ಆಂಧ್ರಪ್ರದೇಶ ರಾಜ್ಯ ಹತ್ತಿ ರೈತರ ಕ್ಷೇಮಾಭಿವೃದ್ಧಿ  ರಾಮಣ್ಣಪೇಟೆ ಶಾಸಕರಾಗಿ ಯಾದಗಿರಿರೆಡ್ಡಿ
ಇವರ ಜೀವನ ನಮಗೆ ಆದರ್ಶ
author img

By ETV Bharat Karnataka Team

Published : Oct 27, 2023, 12:28 PM IST

Updated : Oct 27, 2023, 1:46 PM IST

ಯಾದಾದ್ರಿ ಭುವನಗಿರಿ, ತೆಲಂಗಾಣ: ಯಾದಾದ್ರಿ ಭುವನಗಿರಿ ಜಿಲ್ಲೆಯ ಗುಂಡಾಲ ತಾಲೂಕಿನ ಸುದ್ದಲ ಗ್ರಾಮದ ಗುರ್ರಂ ಯಾದಗಿರಿರೆಡ್ಡಿ ಅವರು ರಾಮಣ್ಣಪೇಟೆ ಶಾಸಕರಾಗಿ 15 ವರ್ಷಗಳ ಕಾಲ ಜನರಿಗಾಗಿ ದುಡಿದಿದ್ದಾರೆ. ಜನರ ಮಧ್ಯೆ ಇದ್ದು ಅವರ ಕಷ್ಟ ಸುಖಗಳನ್ನು ಗಮನಿಸುತ್ತಾ ಆದರ್ಶ ಜೀವನ ನಡೆಸಿದ್ದರು. ಆಸ್ತಿ ಸಂಪಾದಿಸದೇ ಇಂದಿನ ಪೀಳಿಗೆಗೆ ಮಾರ್ಗದರ್ಶಕರಾಗಿರುವ ಇವರ ಬಗ್ಗೆ ಎಷ್ಟೇ ಹೇಳಿದ್ರೂ ಕಡಿಮೆ ಅನಿಸುತ್ತದೆ.

13ನೇ ವಯಸ್ಸಿನಲ್ಲಿ ತೆಲಂಗಾಣ ಸಶಸ್ತ್ರ ಹೋರಾಟಕ್ಕೆ ಆಕರ್ಷಿತರಾಗಿ ಬಾಲಸಂಘಕ್ಕೆ ಸೇರಿದ ಗುರ್ರಂ ಯಾದಗಿರಿರೆಡ್ಡಿ ಅವರು 75 ವರ್ಷಗಳ ಕಾಲ ಕಮ್ಯುನಿಸ್ಟ್ ಪಕ್ಷದಲ್ಲಿ ವಿವಿಧ ಹುದ್ದೆಗಳನ್ನು ಅಲಂಕರಿಸಿದ್ದರು. ಅವರು ಟಿಡಿಪಿಯ ಮಿತ್ರಪಕ್ಷದ ಬೆಂಬಲದೊಂದಿಗೆ ರಾಮಣ್ಣಪೇಟೆ ವಿಧಾನಸಭಾ ಕ್ಷೇತ್ರದಿಂದ ಸತತ ಮೂರು ಬಾರಿ ಶಾಸಕರಾಗಿ ಗೆಲುವು ಸಾಧಿಸಿದ್ದರು.

ಗುರ್ರಂ ಯಾದಗಿರಿರೆಡ್ಡಿ ಜೀವನ ಮತ್ತು ರಾಜಕೀಯ ಪ್ರಯಾಣ..: ಚಿಕ್ಕ ವಯಸ್ಸಿನಿಂದಲೂ ಅನೇಕ ಹೋರಾಟದಲ್ಲಿ ಭಾಗಿಯಾಗಿರುವ ಗುರ್ರಂ ಯಾದಗಿರಿರೆಡ್ಡಿ ಅವರು ಗೆರಿಲ್ಲಾ ತರಬೇತಿ ಪಡೆದಿದ್ದರು. 1948ರಲ್ಲಿ ಅಮ್ಮನಬೋಳು, ಮೋತ್ಕೂರು ಮತ್ತು ಮುಸ್ತಲಪಲ್ಲಿ ಪೊಲೀಸ್ ಠಾಣೆಗಳ ಮೇಲೆ ದಾಳಿ ನಡೆಸಿದವರಲ್ಲಿ ಇವರೂ ಒಬ್ಬರು.

ಆಂಧ್ರಪ್ರದೇಶ ರಾಜ್ಯ ಹತ್ತಿ ರೈತರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾಗಿ ರೈತರ ಪರವಾಗಿ ಹಲವು ಚಳವಳಿಗಳನ್ನು ಹಮ್ಮಿಕೊಂಡಿದ್ದರು. ಅಖಂಡ ನಲ್ಗೊಂಡ ಜಿಲ್ಲಾ ರೈತ ಸಂಘದ ಅಧ್ಯಕ್ಷರಾಗಿ, ಪ್ರಧಾನ ಕಾರ್ಯದರ್ಶಿಯಾಗಿ ರೈತರ ಸಮಸ್ಯೆಗಳ ಕುರಿತು ಹಲವು ಹೋರಾಟಗಳನ್ನು ನಡೆಸಿದ್ದರು.

1977ರ ಸಾರ್ವತ್ರಿಕ ಚುನಾವಣೆಯಲ್ಲಿ ರಾಮಣ್ಣಪೇಟೆ ಶಾಸಕರಾಗಿ ಮೊದಲ ಬಾರಿಗೆ ಸ್ಪರ್ಧಿಸಿ ಕಾಂಗ್ರೆಸ್ ಅಭ್ಯರ್ಥಿ ಕೊಮ್ಮು ಪಾಪಯ್ಯ ವಿರುದ್ಧ 5067 ಮತಗಳ ಅಂತರದಿಂದ ಸೋಲನ್ನಪ್ಪಿದ್ದರು. 1985ರಲ್ಲಿ ಮಿತ್ರ ಪಕ್ಷವಾದ ಟಿಡಿಪಿ ಜತೆಗೂಡಿ ಅದೇ ಕೊಮ್ಮು ಪಾಪಯ್ಯ ಅವರನ್ನು 35,076 ಮತಗಳ ಅಂತರದಿಂದ ಸೋಲಿಸಿ ರಾಮಣ್ಣಪೇಟೆ ಶಾಸಕರಾಗಿ ಗೆದ್ದರು. 1989 ಮತ್ತು 1994ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಉಪ್ಪನುತಾಳ ಪುರುಷೋತ್ತಮ ರೆಡ್ಡಿ ವಿರುದ್ಧ ಯಾದಗಿರಿ ರೆಡ್ಡಿ ಗೆಲುವು ಸಾಧಿಸಿದ್ದರು. ಹೀಗೆ ಸತತವಾಗಿ ಮೂರು ಬಾರಿ ಶಾಸಕರಾಗಿ ಆಯ್ಕೆ ಆಗಿದ್ದರು.

ರಾಮಣ್ಣಪೇಟೆ ಶಾಸಕರಾಗಿ ಯಾದಗಿರಿರೆಡ್ಡಿ ಅವರು ಅಂದಿನ ಗೃಹ ಸಚಿವ ಎಲಿಮಿನಾಟಿ ಮಾಧವರೆಡ್ಡಿ ಅವರ ಬೆಂಬಲದೊಂದಿಗೆ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ್ದರು. ಕ್ಷೇತ್ರದಲ್ಲಿ ವಿದ್ಯುತ್ ಸೌಲಭ್ಯಕ್ಕಾಗಿ ಹಲವು ಉಪಕೇಂದ್ರಗಳ ನಿರ್ಮಾಣ ಕೈಗೆತ್ತಿಕೊಳ್ಳಲಾಗಿತ್ತು. ಗ್ರಾಮೀಣ ರಸ್ತೆಗಳನ್ನು ಅಭಿವೃದ್ಧಿಪಡಿಸಿದ್ದರು. ಸ್ವಗ್ರಾಮ ಸುದ್ದಲದಲ್ಲಿ ವಿದ್ಯುತ್ ಉಪಕೇಂದ್ರ, ಪಶು ಚಿಕಿತ್ಸಾಲಯ, ಪಿಎಚ್‌ಸಿ ಆರೋಗ್ಯ ಉಪಕೇಂದ್ರ, ಪ್ರಾಥಮಿಕ ಮತ್ತು ಪ್ರೌಢಶಾಲೆಗಳನ್ನು ಸ್ಥಾಪಿಸಲು ನೆರವು ನೀಡಿದ್ದರು. ಮೋತ್ಕೂರಿನ ಬಿಕ್ಕೇರು ಸೇತುವೆ ಹಾಗೂ ಅಮ್ಮನಬೋಳಲ್ಲಿ ಮೂಸಿನದಿಯ ಮೇಲಿನ ಸೇತುವೆ ಇವರ ಆಳ್ವಿಕೆಯಲ್ಲಿ ನಿರ್ಮಾಣವಾಗಿದ್ದವು ಎನ್ನುವುದು ಗಮನಾರ್ಹ .

ಮೂರು ಬಾರಿ ಶಾಸಕರಾಗಿ ಗೆದ್ದಿದ್ದರೂ ಯಾದಗಿರಿರೆಡ್ಡಿ ಅವರಿಗೆ ಹೈದರಾಬಾದ್‌ನಲ್ಲಿ ಸ್ವಂತ ಮನೆ ಹೊಂದಿರಲಿಲ್ಲ. ಅವರು ತಮ್ಮ ಮಕ್ಕಳ ಮನೆಯಲ್ಲಿ ಉಳಿದುಕೊಂಡು ತಮ್ಮ ಕೊನೆಯ ಜೀವನವನ್ನು ಸಾಗಿಸಿದ್ದರು. ಸ್ವಗ್ರಾಮ ಸುದ್ದರಲ್ಲಿ ಕೇವಲ ಮೂರು ಎಕರೆ ಪಿತ್ರಾರ್ಜಿತ ಆಸ್ತಿ ಮಾತ್ರ ಇತ್ತು. ಅವರ ಬಳಿ ಯಾವುದೇ ಕಾರು ಅಥವಾ ಇತರ ವಾಹನಗಳಿರಲಿಲ್ಲ. ಎಲ್ಲಿಗೆ ಹೋಗಬೇಕೆಂದರೂ ಸಾಮಾನ್ಯ ಜನರೊಂದಿಗೆ ಸರ್ಕಾರಿ ಬಸ್​​​ನಲ್ಲಿ ಪ್ರಯಾಣಿಸುತ್ತಿದ್ದರು.

ಶಾಸಕರಾಗಿ ದುಡಿದ ತನಕ ಯಾವುದೇ ಮುಲಾಜಿಲ್ಲದೇ ಆದರ್ಶಪ್ರಾಯವಾಗಿ ಬದುಕಿದ್ದರು. ಯಾದಗಿರಿ ರೆಡ್ಡಿ ಅವರಿಗೆ ಗೆರಿಲ್ಲಾ ಪಡೆಯಲ್ಲಿ ಸೇವೆ ಸಲ್ಲಿಸಿದ್ದರಿಂದ ಪಿಂಚಣಿ ಕೂಡ ಸಿಕ್ಕಿರಲಿಲ್ಲ. ಹಲವರಿಗೆ ಸ್ಪೂರ್ತಿಯಾಗಿದ್ದ ಗುರ್ರಂ ಯಾದಗಿರಿ ರೆಡ್ಡಿ ಅವರು ನವೆಂಬರ್ 22, 2019 ರಂದು ಹೃದಯಾಘಾತದಿಂದ ನಿಧನರಾಗಿದ್ದರು.

ಓದಿ: 'ಭೂಗಳ್ಳ' ಎಂದ ಬಿಜೆಪಿ ಅಭ್ಯರ್ಥಿ ಕುತ್ತಿಗೆಗೆ ಕೈ ಹಾಕಿದ ಬಿಆರ್​ಎಸ್​ ಶಾಸಕ: ನೇರ ಪ್ರಸಾರ ಕಾರ್ಯಕ್ರಮ ಅಲ್ಲೋಲ ಕಲ್ಲೋಲ

Last Updated : Oct 27, 2023, 1:46 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.