ಪಾಟ್ನಾ: ಮೆಡಿಸಿನ್ ಓವರ್ಡೋಸ್ ಆಗಿ ಆರ್‌ಜೆಡಿ ಮುಖ್ಯಸ್ಥ ಹಾಗೂ ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ ಅವರ ಆರೋಗ್ಯ ಹದಗೆಟ್ಟಿದೆ. ಈ ಬಗ್ಗೆ ಲಾಲು ಪ್ರಸಾದ್ ಯಾದವ್ ಅವರ ಕಿರಿಯ ಪುತ್ರ ತೇಜಸ್ವಿ ಪ್ರಸಾದ್ ಯಾದವ್ ಮಾಹಿತಿ ನೀಡಿದ್ದಾರೆ. ಬುಧವಾರ ಸಂಜೆ ಅವರನ್ನು ದೆಹಲಿ ಏಮ್ಸ್‌ಗೆ ವಿಮಾನದಲ್ಲಿ ಕರೆದೊಯ್ಯಲಾಗಿದೆ. ಪಾಟ್ನಾದ ಪರಾಸ್ ಆಸ್ಪತ್ರೆ ಹಾಗೂ ದೆಹಲಿ ಏಮ್ಸ್‌ನಲ್ಲಿ ಚಿಕಿತ್ಸೆ ನೀಡಿದ ವೈದ್ಯರ ಪ್ರಕಾರ, ಲಾಲು ಸದ್ಯಕ್ಕೆ ತೀವ್ರ ನಿಗಾಘಟಕದಲ್ಲೇ ಚಿಕಿತ್ಸೆ ಪಡೆಯಬೇಕಾಗುತ್ತದೆ ಎಂಬ ಮಾಹಿತಿ ದೊರೆತಿದೆ.
ಲಾಲು ಪ್ರಸಾದ್ ದೇಹದಲ್ಲಿ ಯಾವುದೇ ಚಲನವಲನವಿಲ್ಲ. AIIMS ನ ವೈದ್ಯರಿಗೆ ಅವರ ವೈದ್ಯಕೀಯ ಇತಿಹಾಸ ಚೆನ್ನಾಗಿ ತಿಳಿದಿರುವ ಕಾರಣ ನಾವು ಅವರನ್ನು ಉತ್ತಮ ಚಿಕಿತ್ಸೆಗಾಗಿ ದೆಹಲಿಗೆ ಕರೆ ತಂದಿದ್ದೇವೆ. ಅದು ಕಾರ್ಡಿಯಾಕ್ ಅಥವಾ ನೆಫ್ರೋಪತಿ ಆಗಿರಲಿ, ಅವರಿಗೆ ಲಾಲು ಜಿ ಅವರ ಆರೋಗ್ಯ ಸಮಸ್ಯೆಗಳ ಬಗ್ಗೆ ಎಲ್ಲವೂ ತಿಳಿದಿದೆ. ಅವರ ಕಿಡ್ನಿ, ಹೃದಯ ಅಥವಾ ಇತರ ಯಾವುದೇ ಅಂಗಗಳಿಗೆ ಹಾನಿಯಾಗದಂತೆ ಚಿಕಿತ್ಸೆ ಕೊಡಿಸಲು ನಾವು ಅವರನ್ನು ದೆಹಲಿ ಏಮ್ಸ್‌ಗೆ ಕರೆತಂದಿದ್ದೇವೆ ಎಂದು ತೇಜಸ್ವಿ ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ: ಭುಜದ ಮೂಳೆ ಮುರಿತ: ಆರ್‌ಜೆಡಿ ಮುಖಂಡ ಲಾಲು ಯಾದವ್ ಆಸ್ಪತ್ರೆಯಿಂದ ಡಿಸ್ಚಾರ್ಜ್
ಎಐಐಎಂಎಸ್‌ನ ವೈದ್ಯರು ಸಂಪೂರ್ಣ ದೇಹ ತಪಾಸಣೆ ನಡೆಸಿದ್ದಾರೆ. ಅವರು ಕಳೆದ ಕೆಲವು ದಿನಗಳಿಂದ ಜ್ವರದಿಂದ ಬಳಲುತ್ತಿದ್ದರು. ಹೀಗಾಗಿ ಕೆಲವು ಔಷಧಗಳನ್ನು ಹೆಚ್ಚಾಗಿ ಸೇವಿಸಿದ್ದರಿಂದಾಗಿ ತೊಂದರೆಯಾಗಿದೆ. ಇದು ನಿಜವಾಗಿಯೂ ಅಪಾಯಕಾರಿಯಾಗಿದೆ, ಇದರಿಂದಾಗಿ ನಾವು ಬೆಳಗ್ಗೆ 3:30 ರ ಸುಮಾರಿಗೆ ತುರ್ತು ಪರಿಸ್ಥಿತಿಯಲ್ಲಿ ವೈದ್ಯರ ಬಳಿಗೆ ಧಾವಿಸಬೇಕಾಯಿತು ಎಂದು ತೇಜಸ್ವಿ ಹೇಳಿದರು.