ETV Bharat / bharat

ಮಾಜಿ ಶಾಸಕನ ಮಗಳು ನೇಣಿಗೆ ಶರಣು.. ಎಂಬಿಬಿಎಸ್ ವಿದ್ಯಾರ್ಥಿನಿಯ ಸಾವಿನ ಕಾರಣ ನಿಗೂಢ!

author img

By

Published : Apr 14, 2022, 2:30 PM IST

ಮಾಜಿ ಶಾಸಕರೊಬ್ಬರ ಮಗಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ತೆಲಂಗಾಣದ ಭದ್ರಾದ್ರಿ ಕೊತಗುಡೆಂ ಜಿಲ್ಲೆಯಲ್ಲಿ ನಡೆದಿದೆ.

ex mla taati venkateshwarlu daughter suicide, MMBS student suicide in Telangana, Telangana crime news, ಮಾಜಿ ತೆಲಂಗಾಣದ ಮಾಜಿ ಶಾಸಕ ತಾಟಿ ವೆಂಕಟೇಶ್ವರ್ಲು ಮಗಳು ಆತ್ಮಹತ್ಯೆ, ತೆಲಂಗಾಣದಲ್ಲಿ ಎಂಬಿಬಿಎಸ್​ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣು, ತೆಲಂಗಾಣ ಅಪರಾಧ ಸುದ್ದಿ,
ಬೆಳ್ಳಂಬೆಳಗ್ಗೆ ಮಾಜಿ ಶಾಸಕನ ಮಗಳು ನೇಣಿಗೆ ಶರಣು

ಭದ್ರಾದ್ರಿ ಕೊತಗುಡೆಂ(ತೆಲಂಗಾಣ): ಅಶ್ವಾರಾವುಪೇಟೆಯ ಮಾಜಿ ಶಾಸಕ ತಾಟಿ ವೆಂಕಟೇಶ್ವರ್ಲು ಮಗಳು ಆತ್ಮಹತ್ಯೆ ಶರಣಾಗಿದ್ದಾರೆ. ಈ ಸುದ್ದಿ ತಿಳಿದಾಕ್ಷಣ ಮನೆಗೆ ದೌಡಾಯಿಸಿದ ತಂದೆ ಮೌನಕ್ಕೆ ಶರಣಾದರು.

ಎಂಬಿಬಿಎಸ್​ ವ್ಯಾಸಂಗ ಮುಗಿಸಿರುವ 26 ವರ್ಷದ ತಾಟಿ ಮಹಾಲಕ್ಷ್ಮಿ ಬೂರ್ಗಂಪಾಡು ತಾಲೂಕಿನ ಸಾರಾಪಾಕ ಗ್ರಾಮದಲ್ಲಿ ವಾಸಿಸುತ್ತಿದ್ದರು. ಮಹಾಲಕ್ಷ್ಮಿ ಮುಂದಿನ ವಿದ್ಯಾಭ್ಯಾಸಕ್ಕೆ ತಯಾರಿ ನಡೆಸುತ್ತಿದ್ದರು. ಏನಾಯ್ತೋ ಏನೋ ಇಂದು ಮುಂಜಾನೆ ಮಹಾಲಕ್ಷ್ಮಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಓದಿ: ಪ್ರತಿಭಟನೆ ನಡುವೆಯೇ ಗುತ್ತಿಗೆದಾರ ಸಂತೋಷ್​ ಪಾಟೀಲ್​ ಅಂತ್ಯಕ್ರಿಯೆ

ಈ ಸುದ್ದಿ ತಿಳಿದ ಕೂಡಲೇ ದಮ್ಮಪೇಟದ ಮನೆಯಲ್ಲಿದ್ದ ವೆಂಕಟೇಶ್ವರ್ಲು ಸಾರಪಾಕ ಗ್ರಾಮಕ್ಕೆ ಭೇಟಿ ನೀಡಿದರು. ಮಗಳ ಶವವನ್ನು ನೋಡಿದ ಅವರ ರೋದನೆ ಮುಗಿಲು ಮುಟ್ಟಿತ್ತು. ಬಳಿಕ ಸ್ಥಳಕ್ಕಾಗಿಮಿಸಿದ್ದ ಪೊಲೀಸರು ಮಹಾಲಕ್ಷ್ಮಿ ಶವವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನಿಸಿದರು.

ಈ ಘಟನೆ ಕುರಿತು ಬೂರ್ಗಂಪಾಡು ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆತ್ಮಹತ್ಯೆಗೆ ನಿಖರ ಕಾರಣ ಏನೆಂಬುದನ್ನು ತಿಳಿಯಲು ತನಿಖೆ ಕೈಗೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.