ಮೇಷ : ಈ ವಾರವು ನಿಮಗೆ ಯಶಸ್ವಿ ಎನಿಸಲಿದೆ. ವಿವಾಹಿತ ವ್ಯಕ್ತಿಗಳು ತಮ್ಮ ಕೌಟುಂಬಿಕ ಜೀವನವನ್ನು ಕಾಡುತ್ತಿರುವ ಒತ್ತಡದಿಂದ ಮುಕ್ತಿ ಪಡೆಯಲಿದ್ದಾರೆ. ಜೀವನ ಸಂಗಾತಿಯ ಜೊತೆಗೆ ಎಲ್ಲಾದರೂ ಹೋಗಲು ಅವರು ಯೋಜನೆ ರೂಪಿಸಬಹುದು. ಅವರೊಂದಿಗೆ ನೀವು ಶಾಪಿಂಗ್ ಗೆ ಹೋಗಬಹುದು. ಹೀಗಾಗಿ ವೈವಾಹಿಕ ಬದುಕಿನಲ್ಲಿ ಒಂದಷ್ಟು ಕಾಂತಿ ಮರಳಲಿದೆ. ಉದ್ಯೋಗದಲ್ಲಿರುವವರಿಗೆ ಈ ವಾರ ಉತ್ತಮ ಫಲ ದೊರೆಯಲಿದೆ. ಹೊಸ ವಾಹನದ ಖರೀದಿಯಲ್ಲಿ ಯಶಸ್ಸು ದೊರೆಯಲಿದೆ. ರಿಯಲ್ ಎಸ್ಟೇಟ್ ಗೆ ಸಂಬಂಧ ವಿಚಾರವು ಬಗೆಹರಿಯಲಿದ್ದು ಇದರಿಂದ ನಿಮಗೆ ಲಾಭ ದೊರೆಯಲಿದೆ. ನಿಮ್ಮ ಕೆಲಸದಲ್ಲಿ ವೃದ್ಧಿ ಉಂಟಾಗಲಿದೆ. ನಿಮಗೆ ಹೊಸ ಕೆಲಸವನ್ನು ನಿಯೋಜಿಸುವ ಸಾಧ್ಯತೆ ಇದೆ. ವ್ಯವಹಾರದಲ್ಲಿ ತೊಡಗಿಸಿಕೊಂಡಿರುವ ಜನರು ತಮ್ಮ ಕೆಲಸದಲ್ಲಿ ಲಾಭ ಗಳಿಸಲಿದ್ದಾರೆ. ವಿದ್ಯಾರ್ಥಿಗಳ ಕುರಿತು ಮಾತನಾಡುವುದಾದರೆ, ಅವರು ತಮ್ಮ ಅಧ್ಯಯನದಲ್ಲಿ ಕಠಿಣ ಶ್ರಮದಿಂದಿಗೆ ದಕ್ಷತೆಗೆ ಗಮನ ನೀಡಬೇಕು. ಈಗ ಅವರು ವಿಷಯವಾರು ಅಧ್ಯಯನಕ್ಕೆ ಸಿದ್ಧತೆ ಮಾಡಿಕೊಳ್ಳಬೇಕು. ಆರೋಗ್ಯದ ವಿಚಾರದಲ್ಲಿ ಹೇಳುವುದಾದರೆ, ನಿಮ್ಮ ಆರೋಗ್ಯ ಚೆನ್ನಾಗಿರಲಿದೆ.
ವೃಷಭ : ಈ ವಾರ ನಿಮಗೆ ಅತ್ಯುತ್ತಮ ಫಲ ದೊರೆಯಲಿದೆ. ಆದರೆ ವಿವಾಹಿತ ಜನರು ತಮ್ಮ ವೈವಾಹಿಕ ಜೀವನದಲ್ಲಿ ಸಂಘರ್ಷ ಎದುರಿಸಲಿದ್ದಾರೆ. ನೀವು ಮತ್ತು ನಿಮ್ಮ ಜೀವನ ಸಂಗಾತಿಯ ನಡುವೆ ಸಂಘರ್ಷ ಉಂಟಾಗಬಹುದು. ಆದರೆ ಪ್ರೇಮ ಸಂಬಂಧದಲ್ಲಿರುವ ಜನರಿಗೆ ಈ ವಾರವು ಅತ್ಯುತ್ತಮ. ನಿಮ್ಮ ಪ್ರೇಮಿಯು ನಿಮಗಾಗಿ ತಮ್ಮ ಬದುಕನ್ನು ಮುಡಿಪಾಗಿಸಲಿದ್ದಾರೆ ಹಾಗೂ ನೀವು ಸಹ ಅವರಿಗಾಗಿ ಓಡೋಡಿ ಬರಲಿದ್ದೀರಿ. ಮಾನಸಿಕ ಒತ್ತಡವು ಕಡಿಮೆಯಾಗಲಿದೆ. ಚೆನ್ನಾಗಿ ಮತ್ತು ಪ್ರಬಲವಾಗಿ ಕೆಲಸ ಮಾಡಲು ಇಚ್ಛೆ ತೋರಲಿದ್ದೀರಿ. ಇದರೊಂದಿಗೆ ನೀವು ಕೆಲಸದ ಕ್ಷೇತ್ರದಲ್ಲಿ ಒಳ್ಳೆಯ ಯಶಸ್ಸನ್ನು ನಿರೀಕ್ಷಿಸಬಹುದು. ನಿಮ್ಮ ದಕ್ಷತೆ ಮತ್ತು ಜಾಣ್ಮೆಯ ಆಧಾರದಲ್ಲಿ ಕೆಲವೊಂದು ಹೊಸ ಅವಕಾಶಗಳನ್ನು ಸೃಷ್ಟಿಸಲು ನಿಮಗೆ ಸಾಧ್ಯವಾಗಲಿದೆ. ವಿದ್ಯಾರ್ಥಿಗಳ ಕುರಿತು ಹೇಳುವುದಾದರೆ, ಅವರು ಈಗ ಅಧ್ಯಯನದಲ್ಲಿ ಉತ್ತಮ ಅಂಕಗಳನ್ನು ಗಳಿಸಲಿದ್ದಾರೆ. ನಿಮ್ಮ ಕಠಿಣ ಶ್ರಮಕ್ಕೆ ಯಶಸ್ಸು ದೊರೆಯಲಿದೆ. ಆರೋಗ್ಯದ ವಿಚಾರದಲ್ಲಿ ಹೇಳುವುದಾದರೆ, ನಿಮ್ಮ ಆರೋಗ್ಯ ಚೆನ್ನಾಗಿರಲಿದೆ.
ಮಿಥುನ : ಈ ವಾರ ನಿಮಗೆ ಅತ್ಯುತ್ತಮ ಫಲ ದೊರೆಯಲಿದೆ. ಈ ವಾರದಲ್ಲಿ ನಿಮ್ಮ ವೈವಾಹಿಕ ಬದುಕು ಚೆನ್ನಾಗಿರಲಿದ್ದು ನೀವು ಸಂತಸವನ್ನು ಪಡೆಯಲಿದ್ದೀರಿ. ಮಕ್ಕಳನ್ನು ಪಡೆಯುವ ಆಸೆಯು ಈಡೇರಲಿದೆ. ಪ್ರೇಮದ ಸಂಬಂಧದಲ್ಲಿರುವವರಿಗೆ ಈ ವಾರವು ಅನುಕೂಲಕರ. ಸದ್ಯಕ್ಕೆ ಪರಸ್ಪರ ಅರಿತುಕೊಳ್ಳಲು ನಿಮಗೆ ಸಾಧ್ಯವಾಗಲಿದೆ. ಅಲ್ಲದೆ ಕೆಲವೊಂದು ಸಮಸ್ಯೆಗಳಿಂದ ಮುಕ್ತಿ ದೊರೆಯಲಿದೆ. ಈಗ ನೀವು ಹಳೆಯ ಚಿಂತೆಗಳಿಂದ ಹೊರ ಬರಲಿದ್ದೀರಿ. ಕುಟುಂಬದ ವಾತಾವರಣವು ತೃಪ್ತಿಕರವಾಗಿರಲಿದೆ. ಆದರೆ ತಪ್ಪು ಸಮಯವನ್ನು ತಪ್ಪು ಮಾತನ್ನಾಡುವ ಮೂಲಕ ಯಾರಾದರೂ ವ್ಯಕ್ತಿಗಳ ಜೊತೆಗೆ ನೀವು ಸಂಘರ್ಷಕ್ಕೆ ಇಳಿಯಬಹುದು. ಈ ಕುರಿತು ನೀವು ಕಾಳಜಿ ವಹಿಸಬೇಕಾದೀತು. ನಿಮಗೆ ಒಂದಷ್ಟು ವೆಚ್ಚಗಳು ಉಂಟಾಗಬಹುದು. ನಿಮ್ಮ ಅನುಭವವು ನಿಮಗೆ ಮಾರ್ಗದರ್ಶನ ನೀಡಲಿದೆ. ವ್ಯವಹಾರದಲ್ಲಿ ತೊಡಗಿಸಿಕೊಂಡವರು ತಮ್ಮ ಕೆಲಸವನ್ನು ಮುಂದುವರಿಸಲು ಯಾರಾದರೂ ವ್ಯಕ್ತಿಯ ಅಗತ್ಯವಿದೆ. ವಿದ್ಯಾರ್ಥಿಗಳ ಕುರಿತು ಮಾತನಾಡುವುದಾದರೆ, ಅವರು ಈಗ ತಮ್ಮ ಅಧ್ಯಯನವನ್ನು ಆನಂದಿಸಲಿದ್ದಾರೆ. ಅವರು ಶೃದ್ಧೆಯಿಂದ ಅಧ್ಯಯನ ಮಾಡಲಿದ್ದಾರೆ ಹಾಗೂ ಉತ್ತಮ ಫಲಿತಾಂಶ ಪಡೆಯಲಿದ್ದಾರೆ. ನಿಮ್ಮ ಆರೋಗ್ಯದ ಕುರಿತು ಕಾಳಜಿ ವಹಿಸಿ.
ಕರ್ಕಾಟಕ : ಈ ವಾರ ನಿಮಗೆ ಉತ್ತಮ ಫಲ ದೊರೆಯಲಿದೆ. ವೈವಾಹಿಕ ಬದುಕಿನಲ್ಲಿ ಪ್ರೇಮ, ಪ್ರಣಯ ಮತ್ತು ಆಕರ್ಷಣೆಯ ಜೊತೆಗೆ ಸಣ್ಣಪುಟ್ಟ ವಾಗ್ವಾದ ಉಂಟಾಗುವ ಸಾಧ್ಯತೆಯೂ ಇದೆ. ಇದೇ ವೇಳೆ ಪ್ರೇಮ ಜೀವನದಲ್ಲಿ ಸಾಮರಸ್ಯ ನೆಲೆಸಲಿದೆ. ನೀವು ಪರಸ್ಪರ ಮುಕ್ತವಾಗಿ ಮಾತನಾಡಲಿದ್ದೀರಿ. ಇದು ಸಮಸ್ಯೆಗಳನ್ನು ತಗ್ಗಿಸಲಿದೆ. ಸದ್ಯಕ್ಕೆ ನಿಮ್ಮ ಆದಾಯದಲ್ಲಿ ಸಾಕಷ್ಟು ಹೆಚ್ಚಳ ಉಂಟಾಗಲಿದೆ. ಈ ಹಣ ಎಲ್ಲಿಂದ ಬಂತು ಎನ್ನುವುದೇ ನಿಮಗೆ ಅರ್ಥವಾಗುವುದಿಲ್ಲ. ಇದು ನಿಮ್ಮ ಸಂತಸವನ್ನು ದುಪ್ಪಟ್ಟುಗೊಳಿಸಲಿದೆ. ಖರ್ಚುವೆಚ್ಚಗಳಲ್ಲಿ ಇಳಿಕೆ ಉಂಟಾಗಲಿದೆ. ಇದರಿಂದಾಗಿ ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆ ಕಂಡು ಬರಲಿದೆ. ವ್ಯವಹಾರದಲ್ಲಿ ತೊಡಗಿಸಿಕೊಂಡಿರುವವರು ತಮ್ಮ ಕೆಲವು ಗೆಳೆಯರ ನೆರವನ್ನು ಪಡೆಯಲಿದ್ದಾರೆ. ಆರೋಗ್ಯದ ವಿಚಾರದಲ್ಲಿ ಹೇಳುವುದಾದರೆ, ನಿಮ್ಮ ಆರೋಗ್ಯದ ಕುರಿತು ನೀವು ಸ್ವಲ್ಪ ಕಾಳಜಿ ವಹಿಸಬೇಕು. ಗಾಯ ಅಥವಾ ಶಸ್ತ್ರಚಿಕಿತ್ಸೆ ಉಂಟಾಗಬಹುದು. ಇಂತಹ ಸನ್ನಿವೇಶದಲ್ಲಿ ನೀವು ಸಾಕಷ್ಟು ಎಚ್ಚರಿಕೆ ವಹಿಸಬೇಕು.
ಸಿಂಹ : ವಾರದ ಆರಂಭಿಕ ದಿನಗಳು ಒಂದಷ್ಟು ದುರ್ಬಲವಾಗಿರಬಹುದು. ವಿವಾಹಿತ ವ್ಯಕ್ತಿಗಳ ಕೌಟುಂಬಿಕ ಬದುಕು ಸಂತಸದಿಂದ ಕೂಡಿರಲಿದೆ. ಅವರು ತಮ್ಮ ಮನದಾಳದ ಭಾವನೆಯನ್ನು ತಮ್ಮ ಜೀವನ ಸಂಗಾತಿಯ ಜೊತೆಗೆ ಹಂಚಿಕೊಳ್ಳಲಿದ್ದಾರೆ. ಅವರ ಮನಸ್ಸಿನ ಭಾವನೆಗಳನ್ನು ಅರಿತುಕೊಳ್ಳಲು ಯತ್ನಿಸಲಿದ್ದು ಕೌಟುಂಬಿಕ ಬದುಕು ಸಾಂಗವಾಗಿ ಮುಂದೆ ಸಾಗಲಿದೆ. ಅದೃಷ್ಟವು ಸ್ವಲ್ಪ ದುರ್ಬಲವಾಗಿರಲಿದೆ. ಹೀಗಾಗಿ ಕೆಲಸವು ಬಾಕಿ ಉಳಿಯಬಹುದು. ಹೀಗಾಗಿ ದೊಡ್ಡ ಕೆಲಸಕ್ಕೆ ಕೈ ಹಾಕದೆ ಸ್ವಲ್ಪ ಸಮಯವನ್ನು ದೂಡಿ. ಉದ್ಯೋಗದಲ್ಲಿರುವವರಿಗೆ ಈ ವಾರ ಉತ್ತಮ ಫಲ ದೊರೆಯಲಿದೆ. ನಿಮ್ಮ ಕೆಲಸವನ್ನು ಚೆನ್ನಾಗಿ ನಿರ್ವಹಿಸಿ ಮುಂದೆ ಸಾಗಲು ನಿಮಗೆ ಸಾಧ್ಯವಾಗಲಿದೆ. ವಿದ್ಯಾರ್ಥಿಗಳ ಕುರಿತು ಮಾತನಾಡುವುದಾದರೆ, ಅವರು ಈಗ ತಮ್ಮ ಅಧ್ಯಯನವನ್ನು ಆನಂದಿಸಲಿದ್ದಾರೆ. ಏನಾದರೂ ಹೊಸತನ್ನು ಕಲಿಯಲು ಅವರಿಗೆ ಅವಕಾಶ ದೊರೆಯಲಿದೆ. ಸದ್ಯಕ್ಕೆ ನಿಮ್ಮ ಜ್ಞಾನದಲ್ಲಿ ಹೆಚ್ಚಳ ಉಂಟಾಗಲಿದೆ. ಹೀಗಾಗಿ ಇತರರಿಗಿಂತ ಹೆಚ್ಚಿನ ಅನುಕೂಲತೆ ನಿಮಗೆ ದೊರೆಯಲಿದೆ. ನೀವೀಗ ಮಾನಸಿಕ ದೌರ್ಬಲ್ಯಕ್ಕೆ ಒಳಗಾಗಬಹುದು.
ಕನ್ಯಾ : ಈ ವಾರವು ನಿಮ್ಮ ಮೊಗದಲ್ಲಿ ಸಂತಸವನ್ನು ತರಲಿದೆ. ನಿಮ್ಮ ಕುರಿತು ನೀವು ಯೋಚಿಸಲಿದ್ದೀರಿ. ಏನಾದರೂ ಹೊಸತನ್ನು ಮಾಡುವ ಇಚ್ಛೆ ಉಂಟಾಗಲಿದೆ. ವಿವಾಹಿತ ವ್ಯಕ್ತಿಗಳು ತಮ್ಮ ಕೌಟುಂಬಿಕ ಬದುಕಿನ ಒತ್ತಡದಿಂದ ಹೊರ ಬರಲಿದ್ದಾರೆ. ಅಲ್ಲದೆ ಜೀವನ ಸಂಗಾತಿಯ ಕುಟುಂಬದ ಸದಸ್ಯರ ಜೊತೆಗಿನ ಸಂಬಂಧವು ವೃದ್ಧಿಸಲಿದೆ. ನಿಮ್ಮ ಸಂಬಂಧಕ್ಕೆ ಇನ್ನೊಮ್ಮೆ ಮೆರುಗು ದೊರೆಯಲಿದೆ. ನಿಮಗೆ ಅದೃಷ್ಟದ ಸಂಪೂರ್ಣ ಬೆಂಬಲ ದೊರೆಯಬಹುದು. ಇದರಿಂದಾಗಿ ಅನೇಕ ಕೆಲಸಗಳು ಪೂರ್ಣಗೊಳ್ಳಿವೆ. ಅಲ್ಲದೆ ನಿಮ್ಮ ಸ್ಥಾನ ಗಟ್ಟಿಗೊಳ್ಳಲಿದೆ. ಉದ್ಯೋಗದಲ್ಲಿರುವ ವ್ಯಕ್ತಿಗಳಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸುವ ಅವಕಾಶ ಈ ವಾರದಲ್ಲಿ ದೊರೆಯಲಿದೆ. ನಿಮ್ಮ ದಕ್ಷತೆಯು ನಿಮಗೆ ಸಾಕಷ್ಟು ಅನುಕೂಲಕರ ಸನ್ನಿವೇಶವನ್ನು ಸೃಷ್ಟಿಸಲಿದೆ. ನಿಮ್ಮ ಎದುರಾಳಿಗಳನ್ನು ನೀವು ಹಿಂದಿಕ್ಕಲಿದ್ದೀರಿ. ನ್ಯಾಯಾಲಯದ ಪ್ರಕರಣಗಳಲ್ಲಿ ಯಶಸ್ಸು ದೊರೆಯಬಹುದು. ವಿದ್ಯಾರ್ಥಿಗಳ ವಿಚಾರದಲ್ಲಿ ಹೇಳುವುದಾದರೆ ಅವರ ಪಾಲಿಗೆ ಈ ವಾರವು ಒಳ್ಳೆಯದು. ಮೆಲ್ಲನೆ ಅವರು ಅಧ್ಯಯನದ ಮೇಲೆ ಗಮನ ಹರಿಸಲಿದ್ದಾರೆ. ನೀವು ಸ್ಪರ್ಧೆಗಳಲ್ಲಿ ಯಶಸ್ಸು ಸಾಧಿಸಲಿದ್ದೀರಿ. ಆರೋಗ್ಯದ ವಿಚಾರದಲ್ಲಿ ಹೇಳುವುದಾದರೆ, ಇದು ನಿಮ್ಮ ಪಾಲಿಗೆ ಒಳ್ಳೆಯ ಕಾಲ.
ತುಲಾ : ಈ ವಾರವು ಕೆಲವೊಂದು ಮಾನಸಿಕ ಸಮಸ್ಯೆಗಳನ್ನು ಉಂಟು ಮಾಡಬಹುದು. ವಿವಾಹಿತ ವ್ಯಕ್ತಿಗಳು ತಮ್ಮ ಕೌಟುಂಬಿಕ ಜೀವನವನ್ನು ಚೆನ್ನಾಗಿ ಆನಂದಿಸಲಿದ್ದಾರೆ. ಒಟ್ಟಿಗೆ ಎಲ್ಲಾದರೂ ಹೋಗುವ ಸಾಧ್ಯತೆ ಇದೆ. ಪ್ರೇಮದ ಸಂಬಂಧದಲ್ಲಿರುವವರಿಗೆ ಈ ಈ ವಾರವು ತುಂಬಾ ಅನುಕೂಲಕರ. ಆದರೆ ಪರಸ್ಪರ ವಾಗ್ವಾದ ನಡೆಸಬೇಡಿ. ಸದ್ಯಕ್ಕೆ ಕೆಲಸದಲ್ಲಿ ಮೋಜು ಲಭಿಸಲಿದೆ. ಆದರೂ ಕೆಲವೊಂದು ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಹೀಗಾಗಿ ಎಚ್ಚರಿಕೆಯಿಂದ ಕೆಲಸ ಮಾಡಿ. ಆದರೆ ಇಂತಹ ವಿಚಾರಗಳಿಗೆ ಅವಕಾಶ ನೀಡಬೇಡಿ. ಇಲ್ಲದಿದ್ದರೆ ಹಿರಿಯರು ನಿಮ್ಮ ವಿರುದ್ಧ ತಿರುಗಿ ಬೀಳಬಹುದು. ವ್ಯವಹಾರಕ್ಕೆ ಇದು ಸಕಾಲ. ಈ ವಾರದಲ್ಲಿ ಕೆಲವೊಂದು ಹೊಸ ಕೆಲಸವನ್ನು ಮಾಡಲು ನಿಮಗೆ ಅವಕಾಶ ಸಿಗಬಹುದು. ಹೂಡಿಕೆಯ ವಿಚಾರದಲ್ಲಿ ಇದು ಸಕಾಲವಲ್ಲ. ಹೀಗಾಗಿ ಸ್ವಲ್ಪ ಎಚ್ಚರಿಕೆ ವಹಿಸಿ. ವಿದ್ಯಾರ್ಥಿಗಳಿಗೆ ತಮ್ಮ ಅಧ್ಯಯನಕ್ಕೆ ಸಂಪೂರ್ಣ ಗಮನ ನೀಡಲು ಸಾಧ್ಯವಾಗುತ್ತದೆ. ಆರೋಗ್ಯದ ವಿಚಾರದಲ್ಲಿ ಹೇಳುವುದಾದರೆ, ನಿಮ್ಮ ಸ್ವಲ್ಪ ಎಚ್ಚರಿಕೆಯಿಂದ ಇರಬೇಕು. ಮಾನಸಿಕ ಸಮಸ್ಯೆಗಳನ್ನು ದೂರ ಮಾಡಲು ಯತ್ನಿಸಿ. ನಿಮಗೆ ಧ್ಯಾನದಿಂದ ಲಾಭ ದೊರೆಯಲಿದೆ.
ವೃಶ್ಚಿಕ : ಈ ವಾರ ನಿಮಗೆ ಸಾಮಾನ್ಯ ಫಲ ದೊರೆಯಲಿದೆ. ನಿಮ್ಮ ಜಾಣ್ಮೆಯ ಮೂಲಕ ಕೌಟುಂಬಿಕ ಬದುಕಿಗೆ ಮೆರುಗು ನೀಡಲು ನಿಮ್ಮೆಲ್ಲ ಪ್ರಯತ್ನಗಳನ್ನು ಮಾಡಲಿದ್ದೀರಿ. ಅದರಲ್ಲಿ ಯಶಸ್ಸು ದೊರೆಯಬಹುದು. ಜೀವನ ಸಂಗಾತಿಯ ಜೊತೆಗಿನ ಆಪ್ತತೆಯಲ್ಲಿ ಸುಧಾರಣೆ ಉಂಟಾಗಲಿದೆ. ನಿಮ್ಮ ಮನೆಯಲ್ಲಿ ಸಂತಸ ಕಾಣಿಸಿಕೊಳ್ಳಲಿದೆ. ಪ್ರೇಮ ಸಂಬಂಧದಲ್ಲಿರುವವರು ಸಂತಸದ ಕ್ಷಣಗಳನ್ನು ಅನುಭವಿಸಲಿದ್ದಾರೆ. ನಿಮ್ಮ ಪ್ರೇಮಿಯ ಜೊತೆಗಿನ ಅನ್ಯೋನ್ಯತೆಯು ಬೆಳೆಯಲಿದ್ದು ಇದು ನಿಮ್ಮ ಸಂಬಂಧವನ್ನು ಗಟ್ಟಿಗೊಳಿಸಲಿದೆ. ಉದ್ಯೋಗದಲ್ಲಿರುವವರಿಗೆ ಇದು ಉತ್ತಮ ಕಾಲ. ನಿಮ್ಮ ಭಡ್ತಿಯ ಸಮಯವು ನಡೆಯುತ್ತಿದೆ. ಇದರ ಅನುಕೂಲತೆಯನ್ನು ಪಡೆಯಿರಿ ಮತ್ತು ಚೆನ್ನಾಗಿ ಕೆಲಸ ಮಾಡಿ. ನಿಮ್ಮ ಜಾಣ್ಮೆ ಮತ್ತು ಕೌಶಲ್ಯವು ನಿಮ್ಮನ್ನು ಮುಂದಕ್ಕೆ ಕೊಂಡೊಯ್ಯಲಿದೆ. ವಿದ್ಯಾರ್ಥಿಗಳ ವಿಚಾರದಲ್ಲಿ ಹೇಳುವುದಾದರೆ ಅವರ ಪಾಲಿಗೆ ಸಮಯವು ಒಳ್ಳೆಯದು. ತಾಂತ್ರಿಕ ಅಧ್ಯಯನದಲ್ಲಿ ನಿಮಗೆ ಉತ್ತಮ ಫಲಿತಾಂಶ ದೊರೆಯಲಿದೆ. ಅಲ್ಲದೆ ಲಲಿತ ಕಲೆಗಳಲ್ಲಿ ಅಧ್ಯಯನ ನಡೆಸುವವರಿಗೆ ಉತ್ತಮ ಫಲಿತಾಂಶ ದೊರೆಯುತ್ತದೆ. ಆರೋಗ್ಯದ ವಿಚಾರದಲ್ಲಿ ಹೇಳುವುದಾದರೆ, ಇದು ನಿಮ್ಮ ಪಾಲಿಗೆ ಒಳ್ಳೆಯ ಕಾಲ.
ಧನು : ಈ ವಾರವು ನಿಮಗೆ ಪ್ರಗತಿಯನ್ನು ತಂದು ಕೊಡಲಿದೆ. ನಿಮ್ಮ ಕುಟುಂಬದಲ್ಲಿ ಸಂತಸ ಇರಲಿದೆ. ನೀವು ನಿಮ್ಮ ತಾಯಿಯ ಪ್ರೀತಿಯನ್ನು ನೋಡಲಿದ್ದೀರಿ. ವಿವಾಹಿತ ಜನರು ತಮ್ಮ ವೈವಾಹಿಕ ಜೀವನದಲ್ಲಿ ಸಮಸ್ಯೆ ಎದುರಿಸಲಿದ್ದಾರೆ. ನಿಮ್ಮ ಜೀವನ ಸಂಗಾತಿಯ ಜೊತೆಗೆ ವಾಗ್ವಾದ ಉಂಟಾಗಬಹುದು. ನಿಮ್ಮ ಕುಟುಂಬದಲ್ಲಿ ಯಾರಾದರೂ ವ್ಯಕ್ತಿಯು ವಿದೇಶಕ್ಕೆ ಹೋಗುವ ವಿಚಾರದಲ್ಲಿ ಯಶಸ್ಸನ್ನು ಗಳಿಸಲಿದ್ದಾರೆ. ವಿದ್ಯಾರ್ಥಿಗಳ ವಿಚಾರದಲ್ಲಿ ಹೇಳುವುದಾದರೆ ಅವರ ಪಾಲಿಗೆ ಈ ವಾರವು ಒಳ್ಳೆಯದು. ವಿದ್ಯಾರ್ಥಿಗಳು ತಮ್ಮ ಅಧ್ಯಯನದಲ್ಲಿ ಒಳ್ಳೆಯ ಫಲಿತಾಂಶ ಪಡೆಯಲಿದ್ದಾರೆ. ಅಧ್ಯಯನದಲ್ಲಿ ಉತ್ತಮ ಸಾಧನೆ ಮಾಡಲು ನಿಮಗೆ ಸಾಧ್ಯವಾಗಲಿದೆ. ಸ್ಪರ್ಧೆಯಲ್ಲಿ ಯಶಸ್ಸು ದೊರೆಯುವ ಸಾಧ್ಯತೆ ಇದೆ. ವ್ಯವಹಾರದಲ್ಲಿ ತೊಡಗಿಸಿಕೊಂಡಿರುವ ಜನರು ಒಂದಷ್ಟು ಎಚ್ಚರಿಕೆಯಿಂದ ಇರಬೇಕು. ಖರ್ಚಿನಲ್ಲಿ ಹೆಚ್ಚಳ ಉಂಟಾಗಬಹುದು. ಅಲ್ಲದೆ, ನಿಮ್ಮ ಕೆಲಸದಲ್ಲಿ ವೇಗವನ್ನು ಕಾಪಾಡಲು ಸಾಕಷ್ಟು ಪ್ರಯತ್ನ ಮಾಡಬೇಕು. ಆರೋಗ್ಯದ ವಿಚಾರದಲ್ಲಿ ಹೇಳುವುದಾದರೆ, ಇದು ನಿಮ್ಮ ಪಾಲಿಗೆ ಒಳ್ಳೆಯ ಕಾಲ.
ಮಕರ : ಈ ವಾರದಲ್ಲಿ ನೀವು ಜ್ಞಾನವನ್ನು ಗಳಿಸಲಿದ್ದೀರಿ. ಕೌಟುಂಬಿಕ ಬದುಕು ಚೆನ್ನಾಗಿರಲಿದೆ. ಪರಸ್ಪರ ಭಿನ್ನಾಭಿಪ್ರಾಯವು ನಿವಾರಣೆಯಾಗಲಿದೆ. ಪರಸ್ಪರ ಸಮರ್ಪಣಾ ಭಾವದಲ್ಲಿ ವೃದ್ಧಿ ಉಂಟಾಗಲಿದೆ. ಇದರಿಂದಾಗಿ ಮನೆಯಲ್ಲಿ ಸಂತಸ ನೆಲೆಸಲಿದೆ. ಆರ್ಥಿಕವಾಗಿ ಸಮಯವು ಪ್ರಗತಿದಾಯಕ ಎನಿಸಲಿದೆ. ವೈವಾಹಿಕ ಬದುಕು ಆಗಿರಲಿ ಅಥವಾ ಪ್ರೇಮ ಜೀವನ ಆಗಿರಲಿ, ಎರಡೂ ಕಡೆಗಳಲ್ಲಿ ನಿಮಗೆ ಉತ್ತಮ ಫಲಿತಾಂಶ ದೊರೆಯಲಿದೆ. ಈ ಸಂದರ್ಭದಲ್ಲಿ ನಿಮ್ಮ ಜಾಣ್ಮೆಯಲ್ಲಿ ವೃದ್ಧಿ ಉಂಟಾಗಲಿದೆ. ನಿಮ್ಮ ಮನಸ್ಸು ತೀಕ್ಷ್ಣವಾಗಿ ಪ್ರತಿಕ್ರಿಯಿಸಲಿದೆ. ಹೀಗಾಗಿ ನಿಮ್ಮ ಕೆಲಸದಲ್ಲಿ ನೀವು ಯಶಸ್ಸು ಗಳಿಸಲಿದ್ದೀರಿ. ಕೆಲಸದಲ್ಲಿನ ಪರಿಸ್ಥಿತಿಯು ಅನುಕೂಲಕರವಾಗಿದೆ. ವಿದ್ಯಾರ್ಥಿಗಳ ವಿಚಾರದಲ್ಲಿ ಮಾತನಾಡುವುದಾದರೆ, ನಿಮ್ಮ ಜಾಣ್ಮೆಯ ಲಾಭವನ್ನು ನೀವು ಗಳಿಸಲಿದ್ದೀರಿ. ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಗಳಿಸಲಿದ್ದೀರಿ. ಅಧ್ಯಯನದಲ್ಲಿ ನೀವು ಪಡುವ ಶ್ರಮವು ಭಿನ್ನವಾಗಿರಲಿದ್ದು, ಇದರಿಂದಾಗಿ ನೀವು ಒಳ್ಳೆಯ ಫಲಿತಾಂಶ ಪಡೆಯಲಿದ್ದೀರಿ. ಆರೋಗ್ಯದ ವಿಚಾರದಲ್ಲಿ ಹೇಳುವುದಾದರೆ, ಇದು ನಿಮ್ಮ ಪಾಲಿಗೆ ಒಳ್ಳೆಯ ಕಾಲ. ಯಾವುದೇ ದೊಡ್ಡ ಸಮಸ್ಯೆ ಎದುರಾಗದು.
ಕುಂಭ : ಈ ವಾರವು ನಿಮ್ಮ ಪಾಲಿಗೆ ಒಳ್ಳೆಯದು. ಇದಕ್ಕಾಗಿ ನೀವು ಏಕತಾನತೆಯ ಭಾವನೆಯಿಂದ ಹೊರ ಬರಬೇಕು. ಪ್ರೇಮದ ಬದುಕಿನಲ್ಲಿರುವವರಿಗೂ ಸಮಯವು ಅನುಕೂಲಕರವಾಗಿದೆ ಹಾಗೂ ನೀವು ಪರಸ್ಪರ ಸಾಕಷ್ಟು ಸಮಯವನ್ನು ಕಳೆಯಲಿದ್ದೀರಿ. ನಿಮ್ಮ ಪ್ರೇಮಿಯ ಜೊತೆ ನೀವು ವಾಕ್‌ಗೆ ಹೋಗಬಹುದು ಅಥವಾ ಶಾಪಿಂಗ್ ಗೆ ಹೋಗಬಹುದು. ವಾರದ ನಡುವೆ ನಿಮ್ಮ ಗೆಳೆಯರನ್ನು ನೀವು ಭೇಟಿಯಾಗಬಹುದು. ಸದ್ಯಕ್ಕೆ ನಿಮ್ಮ ಖರ್ಚುವೆಚ್ಚಗಳಲ್ಲಿ ಹೆಚ್ಚಳ ಉಂಟಾಗಲಿದೆ. ಆದರೆ ಚಿಂತಿಸಬೇಡಿ. ನಿಮ್ಮ ಆದಾಯದಲ್ಲಿ ಅದೇ ಅನುಪಾತದಲ್ಲಿ ಹೆಚ್ಚಳ ಉಂಟಾಗಲಿದೆ. ಈ ವೆಚ್ಚಗಳನ್ನು ನೀವು ಆನಂದಿಸಲಿದ್ದೀರಿ. ಏಕೆಂದರೆ ಈ ವೆಚ್ಚಗಳು ನಿಮಗೆ ಸಂತಸ ತರಲಿವೆ. ವ್ಯವಹಾರದಲ್ಲಿ ಯಶಸ್ಸು ದೊರೆಯಲಿದೆ. ನಿಮ್ಮ ಕಠಿಣ ಶ್ರಮಕ್ಕೆ ತಕ್ಕ ಫಲ ದೊರೆಯಲಿದೆ. ವಿದ್ಯಾರ್ಥಿಗಳ ವಿಚಾರದಲ್ಲಿ ಹೇಳುವುದಾದರೆ ಅವರ ಪಾಲಿಗೆ ಈ ವಾರವು ಒಳ್ಳೆಯದು. ವಿದ್ಯಾರ್ಥಿಗಳು ಅಧ್ಯಯನವನ್ನು ಆನಂದಿಸಲಿದ್ದಾರೆ. ಇದು ಉತ್ತಮ ಫಲಿತಾಂಶವನ್ನೂ ನೀಡಲಿದೆ. ಆರೋಗ್ಯದ ವಿಚಾರದಲ್ಲಿ ಹೇಳುವುದಾದರೆ, ಇದು ನಿಮ್ಮ ಪಾಲಿಗೆ ಒಳ್ಳೆಯ ಕಾಲ.
ಮೀನ : ಈ ವಾರ ನಿಮಗೆ ಸಾಮಾನ್ಯ ಫಲ ದೊರೆಯಲಿದೆ. ಈ ವಾರದಲ್ಲಿ ನೀವು ಕೌಟುಂಬಿಕ ಸಂಘರ್ಷವನ್ನು ನಿಭಾಯಿಸಬೇಕಾದೀತು. ಏಕೆಂದರೆ ಕೌಟುಂಬಿಕ ಸಮಸ್ಯೆಗಳು ಮುನ್ನೆಲೆಗೆ ಬರಲಿವೆ. ನಿಮ್ಮ ಕುಟುಂಬದ ಸದಸ್ಯರ ಜೊತೆಗಿನ ಸಂಭಾಷಣೆಯಲ್ಲಿ ಮೊನಚು ಕಾಣಿಸಿಕೊಳ್ಳಲಿದೆ. ಹೀಗಾಗಿ ಜನರು ಪರಸ್ಪರ ದೂರ ಸರಿಯಲಿದ್ದಾರೆ. ಈ ಸನ್ನಿವೇಶವನ್ನು ತಪ್ಪಿಸಲು ನೀವು ಪರಿಸ್ಥಿತಿಯನ್ನು ಚೆನ್ನಾಗಿ ನಿಭಾಯಿಸಬೇಕು. ಆಗ ಮಾತ್ರವೇ ಪರಿಸ್ಥಿತಿ ತಿಳಿಗೊಳ್ಳಬಹುದು. ಜೀವನ ಸಂಗಾತಿಯ ಪಾಲಿಗೆ ಈ ಸಮಯವು ಪ್ರಯೋಜನಕಾರಿ. ಪ್ರೇಮ ಸಂಬಂಧದಲ್ಲಿರುವ ಜನರು ಈ ಸಮಯವನ್ನು ಚೆನ್ನಾಗಿ ಬಳಸಿಕೊಳ್ಳಲಿದ್ದಾರೆ. ಒಟ್ಟಾರೆ ಈ ಸಮಯವು ನಿಮ್ಮ ಪಾಲಿಗೆ ಅನುಕೂಲಕರ. ಈಗ ನೀವು ನಿಮ್ಮ ಪ್ರೇಮಿಗೆ ಮದುವೆಯ ಪ್ರಸ್ತಾವನೆಯನ್ನು ಮಾಡಬಹುದು. ಉದ್ಯೋಗದಲ್ಲಿರುವವರು ತಮ್ಮ ಕೆಲಸದಿಂದ ಲಾಭ ಪಡೆಯಲಿದ್ದಾರೆ. ವಿದ್ಯಾರ್ಥಿಗಳ ವಿಚಾರದಲ್ಲಿ ಹೇಳುವುದಾದರೆ ಅವರ ಪಾಲಿಗೆ ಈ ವಾರವು ಒಳ್ಳೆಯದು. ನೀವು ಅಧ್ಯಯನದಲ್ಲಿ ಉತ್ತಮ ಫಲಿತಾಂಶ ಪಡೆಯಲಿದ್ದೀರಿ. ಆರೋಗ್ಯದ ವಿಚಾರದಲ್ಲಿ ಹೇಳುವುದಾದರೆ, ನಿಮ್ಮ ಆರೋಗ್ಯ ಚೆನ್ನಾಗಿರಲಿದೆ. ಏನಾದರೂ ತಪ್ಪಿ ತಿಂದರೆ ಗಂಟಲು ನೋವು ಕಾಣಿಸಿಕೊಳ್ಳಬಹುದು. ಪ್ರಯಾಣಿಸಲು ಅವಕಾಶ ದೊರೆಯಬಹುದು.