ನವದೆಹಲಿ : ಪಿಎಫ್ ಹಿಂಪಡೆಯಲು ಯೂನಿವರ್ಸಲ್ ಅಕೌಂಟ್ ನಂಬರ್-ಯುಎಎನ್‌ಗೆ ಆಧಾರ್ ಜೋಡಣೆಯ ಅವಧಿಯಲ್ಲಿ 2021ರ ಡಿಸೆಂಬರ್ 31ರವರೆಗೆ ವಿಸ್ತರಿಸಿ ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ-ಇಪಿಎಫ್‌ಒ ಆದೇಶ ಹೊರಡಿಸಿದೆ. ಈಶಾನ್ಯದ ಎಲ್ಲಾ ಏಳು ರಾಜ್ಯಗಳು ಹಾಗೂ ಕೈಗಾರಿಕೆಗಳ ಕೆಲ ಕಟ್ಟಡ, ನಿರ್ಮಾಣ ಹಾಗೂ ತೋಟಗಳಲ್ಲಿ ಕೆಲಸ ಮಾಡುವವರಿಗೂ ಇದು ಅನ್ವಯಿಸುತ್ತದೆ.
ಉದ್ಯೋಗಿಗಳು ತಾವು ಕೆಲಸ ಮಾಡುವ ಕಂಪನಿಗಳನಲ್ಲಿ ಪಿಎಫ್‌ಗಾಗಿ ಆಧಾರ್ ನೊಂದಿಗೆ ಯುಎಎನ್‌ಗೆ ಲಿಂಕ್ ಮಾಡಲು ಹೆಚ್ಚಿನ ಸಮಯ ಸಿಕ್ಕಂತಾಗಿದೆ. ಯುಎಎನ್‌ಗಳೊಂದಿಗೆ ಆಧಾರ್ ಸಂಖ್ಯೆ ಲಿಂಕ್ ಮಾಡುವ ಗಡುವುವನ್ನು 2021ರ ಜೂನ್ 1 ರಿಂದ 2021ರ ಸೆಪ್ಟೆಂಬರ್ 1ರವರೆಗೆ ಇಪಿಎಫ್ ವಿಸ್ತರಿಸಿತ್ತು.
ಪ್ರದೇಶ ಹಾಗೂ ಕೆಲವು ಕೈಗಾರಿಕೆಗಳಿಗೆ ನೀಡುತ್ತಿರುವ ಎರಡನೇ ಗಡುವು ಇದಾಗಿದೆ. ಆಧಾರ್ ಪರಿಶೀಲಿಸಿದ ಯುಎಎನ್‌ನೊಂದಿಗೆ ಇಸಿಆರ್ (ಎಲೆಕ್ಟ್ರಾನಿಕ್ ಚಲನ್ ಕಮ್ ರಶೀದಿ ಅಥವಾ ಪಿಎಫ್ ರಿಟರ್ನ್) ಸಲ್ಲಿಸುವ ಅವಧಿಯನ್ನು 2021ರ ಡಿಸೆಂಬರ್ 31ರವರೆಗೆ ವಿಸ್ತರಿಸಿತ್ತು. ಈಶಾನ್ಯ ರಾಜ್ಯಗಳಾದ ಅಸ್ಸೋಂ, ಅರುಣಾಚಲ ಪ್ರದೇಶ, ಮಣಿಪುರ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್ ಮತ್ತು ತ್ರಿಪುರಾಗೆ ಅನ್ವಯಿಸಲಿದೆ.
ತೋಟದ ಕೈಗಾರಿಕೆಗಳಾದ ಚಹಾ, ಕಾಫಿ, ಏಲಕ್ಕಿ, ಮೆಣಸು, ಸೆಣಬು, ಸಿಂಚೋನಾ, ಗೋಡಂಬಿ ಇತ್ಯಾದಿ ಸ್ಥಳಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗೂ ಕೂಡ 2021ರ ಡಿಸೆಂಬರ್ 31ರೊಳಗೆ ಯುಎಎನ್‌ಗೆ ಆಧಾರ್ ಜೋಡಣೆಯ ಅವಧಿಯನ್ನು ವಿಸ್ತರಿಸಲಾಗಿದೆ.
ಇದನ್ನೂ ಓದಿ: Aadhaar-EPF Link ಕಡ್ಡಾಯ: ಭಾರಿ ಹಣದ ನಷ್ಟ ತಪ್ಪಿಸಲು ಆಧಾರ್-ಪಿಎಫ್ ಖಾತೆ ಜೋಡಣೆ ವಿಧಾನ ಇಲ್ಲಿದೆ...