ನವದೆಹಲಿ: 2020-21ರಿಂದ ಆರಂಭವಾಗುವ ಹೊಸ ಶೈಕ್ಷಣಿಕ ವರ್ಷದಿಂದ ಕನ್ನಡ ಸೇರಿದಂತೆ 8 ಪ್ರಾದೇಶಿಕ ಭಾಷೆಗಳಲ್ಲಿ ಎಂಜಿನಿಯರಿಂಗ್ ಪದವಿಯನ್ನು ನೀಡಲು ಕಾಲೇಜುಗಳಿಗೆ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (AICTE) ಅನುಮತಿ ನೀಡಿದೆ.
ವಿಶೇಷವಾಗಿ ಗ್ರಾಮೀಣ ಮತ್ತು ಬುಡಕಟ್ಟು ಪ್ರದೇಶಗಳ ವಿದ್ಯಾರ್ಥಿಗಳು ತಮ್ಮ ಕನಸುಗಳನ್ನು ನನಸಾಗಿಸಿಕೊಳ್ಳಲು ಈ ಹೊಸ ನೀತಿ ಸಹಾಯ ಮಾಡಲಿದ್ದು ಹಿಂದಿ, ಬಂಗಾಳಿ, ತೆಲುಗು, ತಮಿಳು, ಗುಜರಾತಿ, ಮರಾಠಿ ಮತ್ತು ಮಲಯಾಳಂ ಭಾಷೆಗಳಲ್ಲಿಯೂ ಎಂಜಿನಿಯರಿಂಗ್ ಪದವಿ ಪಡೆಯಹುದಾಗಿದೆ.
ಈ ಸುದ್ದಿಯನ್ನೂ ಓದಿ: Yaas Cyclone: ಸಂಕಷ್ಟದಲ್ಲಿ ಬಂಗಾಳದ 1 ಕೋಟಿ ಜನ, ಮೂರು ಲಕ್ಷ ಮನೆಗಳಿಗೆ ಹಾನಿ-ಸಿಎಂ ಮಮತಾ
ಎಂಜಿನಿಯರಿಂಗ್ ಪದವಿ ಆಸೆ ಹೊತ್ತ ವಿದ್ಯಾರ್ಥಿಗಳು ಇಂಗ್ಲಿಷ್ ಭಯದಿಂದಾಗಿ ಈ ಕೋರ್ಸ್‌ಗಳಿಂದ ದೂರವಿರುತ್ತಿದ್ದರು. ಜರ್ಮನಿ, ಫ್ರಾನ್ಸ್, ರಷ್ಯಾ, ಜಪಾನ್ ಮತ್ತು ಚೀನಾದಂತಹ ಅನೇಕ ಮುಂದುವರಿದ ದೇಶಗಳು ತಮ್ಮ ದೇಶೀಯ ಭಾಷೆಗಳಲ್ಲಿ ಸಂಪೂರ್ಣ ಶಿಕ್ಷಣವನ್ನು ನೀಡುತ್ತಿದ್ದು, ಈಗ ಭಾರತವೂ ಸೇರ್ಪಡೆಗೊಂಡಿದೆ.