ETV Bharat / bharat

ಜಮ್ಮು ಕಾಶ್ಮೀರದಲ್ಲಿ ಇಬ್ಬರು ಉಗ್ರರ ಹೊಡೆದುರುಳಿಸಿದ ಭಾರತೀಯ ಸೇನೆ - ಭದ್ರತಾ ಪಡೆ ಮತ್ತು ಉಗ್ರರ ನಡುವೆ ಎನ್ಕೌಂಟರ್

ಜಮ್ಮು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಸೋಪೋರ್​ನಲ್ಲಿ ಗುಂಡಿನ ಕಾಳಗ ನಡೆಯುತ್ತಿದ್ದು, ಇಬ್ಬರು ಉಗ್ರರನ್ನು ಸೇನೆ ಹತ್ಯೆ ಮಾಡಿದೆ.

Encounter underway between security forces, militants in Baramulla
ಜಮ್ಮು ಕಾಶ್ಮೀರದಲ್ಲಿ ಓರ್ವ ಉಗ್ರನ ಹತ್ಯೆ: ಎನ್​ಕೌಂಟರ್ ಮುಂದುವರಿಕೆ
author img

By

Published : Aug 24, 2021, 9:29 AM IST

Updated : Aug 24, 2021, 1:26 PM IST

ಶ್ರೀನಗರ(ಜಮ್ಮು ಕಾಶ್ಮೀರ): ಕಣಿವೆನಾಡಿನಲ್ಲಿ ಉಗ್ರರು ಮತ್ತು ಸೇನಾಪಡೆ ನಡುವೆ ನಡೆದ ಎನ್​​ಕೌಂಟರ್​ನಲ್ಲಿ ಇಬ್ಬರು ಉಗ್ರರನ್ನು ಹತ್ಯೆ ಮಾಡಲಾಗಿದೆ.

ಬಾರಾಮುಲ್ಲಾ ಜಿಲ್ಲೆಯ ಸೋಪೋರ್​​ನಲ್ಲಿ ಈ ಕಾರ್ಯಾಚರಣೆ ನಡೆಯುತ್ತಿದೆ. ಉಗ್ರರ ಬಗ್ಗೆ ನಿಖರ ಮಾಹಿತಿ ಆಧರಿಸಿ ಪೆಥ್​ಸೀರ್​ ಅಡಗುದಾಣದ ಮೇಲೆ ದಾಳಿ ನಡೆಸಿದ ಭದ್ರತಾ ಪಡೆಗಳು ಉಗ್ರರನ್ನು ಗುಂಡಿಕ್ಕಿ ಕೊಂದಿವೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಸೋಮವಾರವಷ್ಟೇ ಶ್ರೀನಗರದ ಅಲೋಚಿ ಬಾಗ್‌ನಲ್ಲಿ ಅವಿತಿದ್ದ ಇಬ್ಬರು ಉಗ್ರರನ್ನು ಭದ್ರತಾ ಪಡೆ ಹತ್ಯೆ ಮಾಡಿತ್ತು. ಈ ಕುರಿತು ಕಾಶ್ಮೀರ ಪೊಲೀಸ್ ವಲಯ ಕೂಡ ಟ್ವೀಟ್ ಮಾಡಿತ್ತು. ಹತ್ಯೆಗೊಳಗಾದ ಇಬ್ಬರೂ ಉಗ್ರರು ಶ್ರೀನಗರ ಮೂಲದ ನಿಷೇಧಿತ ಸಂಘಟನೆಗೆ ಸೇರಿದ್ದರು.

ಲಷ್ಕರ್-ಏ-ತೊಯ್ಬಾದ ಅಬ್ಬಾಸ್ ಶೇಖ್ ಮತ್ತು ಸಾಕಿಬ್ ಮಂಜೂರ್ ಹತ್ಯೆಗೊಳಗಾಗಿದ್ದು, ಇಬ್ಬರೂ ಕೂಡಾ ಮೋಸ್ಟ್ ವಾಂಟೆಡ್ ಉಗ್ರರಾಗಿದ್ದರು ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಶ್ರೀನಗರದಲ್ಲಿ ಎನ್​ಕೌಂಟರ್: ಟಾಪ್​ ಕಮಾಂಡರ್​ ಸೇರಿ ಇಬ್ಬರು 'ಮೋಸ್ಟ್​ ವಾಂಟೆಡ್​' ಉಗ್ರರ ಹತ್ಯೆ

Last Updated : Aug 24, 2021, 1:26 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.