ಶ್ರೀನಗರ(ಜಮ್ಮು ಕಾಶ್ಮೀರ): ಪುಲ್ವಾಮಾ ಜಿಲ್ಲೆಯ ಪಾಂಪೋರ್ ಪಟ್ಟಣದ ಸೇನೆ ಮತ್ತು ಉಗ್ರರ ನಡುವೆ ಘರ್ಷಣೆ ಮುಂದುವರೆದಿದೆ. ಲಷ್ಕರ್ ಎ ತೋಯ್ಬಾದ ಕಮಾಂಡರ್ನನ್ನು ಸೆರೆ ಹಿಡಿದ ನಂತರವೂ ಭಾರತೀಯ ಸೇನೆ ಕಾರ್ಯಾಚರಣೆಯನ್ನು ಮುಂದುವರೆಸಿದೆ.
ನಿಖರ ಮಾಹಿತಿ ಆಧರಿಸಿ, ಪಾಂಪೋರ್ನ ದ್ರಾಂಗ್ಬಲ್ನಲ್ಲಿ ಸೇನೆ ಕಾರ್ಯಾಚರಣೆ ನಡೆಸಿತ್ತು. ಈ ವೇಳೆ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದ್ದಾರೆ. ಇದಕ್ಕೆ ಪ್ರತ್ಯುತ್ತರ ನೀಡಿದ ಸೇನೆ ತಾನೂ ಕೂಡಾ ಗುಂಡು ಹಾರಿಸಿದ್ದು, ಎಲ್ಇಟಿಯ ಉಮರ್ ಮುಸ್ತಾಖ್ ಖಾಂಡೆಯನ್ನು ಬಂಧಿಸಿದೆ.
ಮೂಲಗಳ ಪ್ರಕಾರ ಇನ್ನೂ ಎನ್ಕೌಂಟರ್ ಕಾರ್ಯಾಚರಣೆ ಮುಂದುವರೆದಿದೆ. ಇನ್ನೂ ಇಬ್ಬರು ಉಗ್ರರು ಕಟ್ಟಡದೊಳಗೆ ಅವಿತಿರುವ ಶಂಕೆ ವ್ಯಕ್ತವಾಗಿದ್ದು, ಶೋಧ ಕಾರ್ಯಾಚರಣೆ ಪ್ರಗತಿಯಲ್ಲಿದೆ.
ಇದನ್ನೂ ಓದಿ: ಪಾರ್ವತಿ ನದಿಯಲ್ಲಿ ಮುಳುಗಿ ಐವರು ಸಾವು.. ದುರ್ಗಾ ಮೂರ್ತಿ ನಿಮಜ್ಜನ ವೇಳೆ ದುರಂತ