ETV Bharat / bharat

ಉಗ್ರರು - ಯೋಧರ ನಡುವೆ ಗುಂಡಿನ ಕಾಳಗ.. ಸಿಕ್ಕಿಬಿದ್ದ ಭಯೋತ್ಪಾದಕರಿಗೆ ಶರಣಾಗಲು ಸೂಚನೆ - ಉಗ್ರರ ಅಟ್ಟಹಾಸ

ಭಯೋತ್ಪಾದಕರ ವಿರುದ್ಧದ ಕಾರ್ಯಾಚರಣೆ ವೇಳೆ ಸಿಕ್ಕಿಬಿದ್ದಿರುವ ಉಗ್ರರಿಗೆ ಶರಣಾಗುವಂತೆ ಸೂಚನೆ ನೀಡಿರುವ ಘಟನೆ ಜಮ್ಮು - ಕಾಶ್ಮೀರದ ಶೋಪಿಯಾನ್​ ಪ್ರದೇಶದಲ್ಲಿ ನಡೆದಿದೆ.

Encounter
Encounter
author img

By

Published : Oct 11, 2021, 8:53 PM IST

ಶ್ರೀನಗರ: ಕಳೆದ ಕೆಲ ದಿನಗಳಿಂದ ಕಣಿವೆ ಪ್ರದೇಶ ಜಮ್ಮು-ಕಾಶ್ಮೀರದ ವಿವಿಧ ಭಾಗಗಳಲ್ಲಿ ಉಗ್ರರ ಅಟ್ಟಹಾಸ ಜೋರಾಗಿದ್ದು, ಅವರ ವಿರುದ್ಧ ಕಾರ್ಯಾಚರಣೆ ನಡೆಸುತ್ತಿರುವ ಭಾರತೀಯ ಯೋಧರು ಭಯೋತ್ಪಾದಕರ ಹೆಡೆಮುರಿ ಕಟ್ಟುವ ಕೆಲಸ ಮಾಡ್ತಿದ್ದಾರೆ.

  • #WATCH | J&K Police in Shopian appeals to the trapped terrorists, asking them to surrender. An encounter broke out here at Tulran, Imamsahab area of Shopian.

    (Source: J&K Police)
    (Visuals deferred by unspecified time) pic.twitter.com/rTs8ue8yar

    — ANI (@ANI) October 11, 2021 " class="align-text-top noRightClick twitterSection" data=" ">

ಇಂದು ಬೆಳಗ್ಗೆ ಪೂಂಚ್​ ಪ್ರದೇಶದಲ್ಲಿ ಉಗ್ರರ ವಿರುದ್ಧದ ಕಾರ್ಯಾಚರಣೆ ವೇಳೆ ಐವರು ಯೋಧರು ಹುತಾತ್ಮರಾಗಿರುವ ಘಟನೆ ನಡೆದಿದ್ದು, ಇದರ ಬೆನ್ನಲ್ಲೇ ಶೋಪಿಯಾನ್​​ ಪ್ರದೇಶದಲ್ಲಿ ಉಗ್ರರು - ಜಮ್ಮು ಕಾಶ್ಮೀರ ಪೊಲೀಸರ ನಡುವೆ ಗುಂಡಿನ ಕಾಳಗ ನಡೆದಿದೆ.

ಈ ವೇಳೆ, ಮನೆಯೊಂದರಲ್ಲಿ ಸಿಕ್ಕಿಬಿದ್ದಿರುವ ಭಯೋತ್ಪಾದಕರು ಶರಣಾಗುವಂತೆ ಸೂಚನೆ ನೀಡಲಾಗಿದೆ. ಶೋಪಿಯಾನ್​​ನ ಇಮಾಮ್​​ಸಾಬ್​ ಪ್ರದೇಶದಲ್ಲಿ ಎನ್​ಕೌಂಟರ್ ನಡೆದಿದ್ದು, ಈ ವೇಳೆ ಉಗ್ರರು ಮನೆಯಲ್ಲಿ ಅಡಗಿ ಕುಳಿತಿದ್ದು, ಅವರನ್ನ ಸುತ್ತುವರೆದಿರುವ ಪೊಲೀಸರು ಶರಣಾಗುವಂತೆ ತಿಳಿಸಿದ್ದಾರೆ.

ಇದನ್ನೂ ಓದಿರಿ: ಉಗ್ರರ ವಿರುದ್ಧದ ಕಾರ್ಯಾಚರಣೆ: ಸೇನಾಧಿಕಾರಿ​​, ನಾಲ್ವರು ಯೋಧರು ಹುತಾತ್ಮ

ಲಭ್ಯವಾಗಿರುವ ಮಾಹಿತಿ ಪ್ರಕಾರ 348 ರಾಷ್ಟ್ರೀಯ ರೈಫಲ್ಸ್​​​, 178 ಸಿಆರ್​​ಪಿಎಫ್​​​ ಹಾಗೂ ಜಮ್ಮು - ಕಾಶ್ಮೀರ ಪೊಲೀಸರು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.