ಅನಪ್ಪುರ್ (ಮಧ್ಯಪ್ರದೇಶ): ಜಿಲ್ಲೆಯ ಬೆಳಗಾವಿಯಲ್ಲಿ ಆನೆಗಳ ಹಾವಳಿ ಮಿತಿ ಮೀರಿದ್ದು, ಆನೆಗಳ ಹಿಂಡು ಒಂದೇ ಕುಟುಂಬದ ಮೂವರನ್ನು ತುಳಿದು ಸಾಯಿಸಿವೆ. ದಂಪತಿ ಹಾಗೂ ಮೊಮ್ಮಗ ಗಜಪಡೆ ಕಾಲ್ತುಳಿತಕ್ಕೆ ಬಲಿಯಾಗಿದ್ದಾರೆ.
ಮೃತರ ಕುಟುಂಬವು ಶೋಕಸಾಗರದಲ್ಲಿ ಮುಳುಗಿದ್ದು, ಸ್ಥಳಕ್ಕೆ ಪೊಲೀಸರು, ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮನೇಂದ್ರಗಢ ಮತ್ತು ಕೆಲ್ಹಾರಿ ಪ್ರದೇಶಗಳಲ್ಲಿ ಆನೆಗಳ ಹಿಂಡು ತಿರುಗಾಡುತ್ತಿತ್ತು. ಅವುಗಳನ್ನು ಓಡಿಸಲು ಜನ ಪಟಾಕಿ ಸಿಡಿಸಿದ್ದರಿಂದ, ಉದ್ರಿಕ್ತಗೊಂಡ ಆನೆಗಳು ಮೂವರನ್ನು ತುಳಿದು ಸಾಯಿಸಿವೆ. ಅಲ್ಲದೆ, ಅನೇಕ ಮನೆಗಳನ್ನೂ ಧ್ವಂಸ ಮಾಡಿವೆ.
ಕಳೆದ ಮೂರು ದಿನಗಳಿಂದ ಜಿಲ್ಲೆಯ ಭರತಪುರ ಬ್ಲಾಕ್‌ನಲ್ಲಿ ಏಳು ಆನೆಗಳಿರುವ ಗುಂಪು ತಿರುಗಾಡುತ್ತಿದೆ. ಅರಣ್ಯ ಇಲಾಖೆಯಿಂದ ಬಂದ ಮಾಹಿತಿಯ ಪ್ರಕಾರ, ಈ ಆನೆಗಳ ಗುಂಪು ಹಿಂದೆ ಬಾರ್ವಾರ್ ಬೀಟ್ ಸುತ್ತಲೂ ಓಡಾಡುತ್ತಿದ್ದವು. ಅರಣ್ಯ ಇಲಾಖೆ ಅಧಿಕಾರಿಗಳು ಗ್ರಾಮಗಳಲ್ಲಿ ಬೀಡು ಬಿಟ್ಟಿದ್ದು, ಜನರು ಆನೆಗಳ ಬಳಿ ಹೋಗುವುದನ್ನು ನಿಷೇಧಿಸಲಾಗಿದೆ. ಆದರೂ, ಗ್ರಾಮಸ್ಥರು ಆನೆಗಳ ಹಿಂಡನ್ನು ಓಡಿಸಲು ತಮ್ಮದೇ ಮಾರ್ಗ ಅನುಸರಿಸುತ್ತಿದ್ದಾರೆ.
ಜಿಲ್ಲೆಯಲ್ಲಿ ಆನೆಗಳ ಹಿಂಡಿನಿಂದ ಇತ್ತೀಚೆಗೆ ಸಂಭವಿಸಿರುವ ಅನಾಹುತಗಳು
- ಕೊರಿಯಾದಲ್ಲಿ 3 ಮನೆಗಳು ಧ್ವಂಸ ಮತ್ತು 7 ರೈತರ ಬೆಳೆಗಳು ನಾಶ
- ಆನೆ ಕಾಲ್ತುಳಿತಕ್ಕೆ ಬಯಲು ವಿಸರ್ಜನೆಗೆ ತೆರಳುತ್ತಿದ್ದ ವ್ಯಕ್ತಿ ಬಲಿ
- ಬೈಕ್ನಲ್ಲಿ ಹೋಗುತ್ತಿದ್ದ ಮಹಿಳೆಯನ್ನು ಎಳೆದು ಕೊಂದ ಗಜಪಡೆ
- ಕತ್ಘೋರಾ ಅರಣ್ಯ ವಿಭಾಗದಲ್ಲಿ ಆನೆ ದಾಳಿಯಿಂದ ಓರ್ವ ವ್ಯಕ್ತಿ ಸಾವು