ETV Bharat / bharat

ಅಬಕಾರಿ ನೀತಿಯಲ್ಲಿ ಬಹುಕೋಟಿ ಹಗರಣ ಪ್ರಕರಣ: ಕೆಸಿಆರ್ ಪುತ್ರಿ ಕವಿತಾಗೆ ಇಡಿ ನೋಟಿಸ್ - Delhi liquor policy case

ದೆಹಲಿ ಅಬಕಾರಿ ನೀತಿಯಲ್ಲಿನ ಬಹುಕೋಟಿ ಹಗರಣ ಕೇಸ್​ಗೆ ಸಂಬಂಧಿಸಿದಂತೆ ಕೆಸಿಆರ್ ಪುತ್ರಿ ಕವಿತಾ ಅವರಿಗೆ ಇಡಿ ನೋಟಿಸ್​ ಜಾರಿ ಮಾಡಿದೆ. ನಾಳೆ ವಿಚಾರಣೆಗೆ ಹಾಜರಾಗುವ ಸಾಧ್ಯತೆ ಇದೆ.

Kavitha
ಕವಿತಾಗೆ ಇಡಿ ನೋಟಿಸ್
author img

By

Published : Mar 8, 2023, 10:21 AM IST

Updated : Mar 8, 2023, 12:19 PM IST

ಹೈದರಾಬಾದ್: ದೆಹಲಿ ಸರ್ಕಾರದ ಅಬಕಾರಿ ನೀತಿಯಲ್ಲಿ ನಡೆದಿದೆ ಎನ್ನಲಾದ ಬಹುಕೋಟಿ ರೂಪಾಯಿ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕುಗೊಳಿಸಿರುವ ಜಾರಿ ನಿರ್ದೇಶನಾಲಯದ(ಇಡಿ) ಅಧಿಕಾರಿಗಳು ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರ ಪುತ್ರಿ ಹಾಗೂ ಬಿಆರ್‌ಎಸ್ ಪಕ್ಷದ ಎಂಎಲ್​ಎ ಕೆ.ಕವಿತಾ ಅವರಿಗೆ ನೋಟಿಸ್​ ಜಾರಿ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ನಾಳೆ (ಗುರುವಾರ) ಅವರು ವಿಚಾರಣೆಗೆ ಹಾಜರಾಗುವ ಸಾಧ್ಯತೆ ಇದೆ.

ಹೈದರಾಬಾದ್ ಮೂಲದ ಉದ್ಯಮಿ ಅರುಣ್ ರಾಮಚಂದ್ರ ಪಿಳ್ಳೈ ಅವರೊಂದಿಗೆ ಕವಿತಾ ಅವರನ್ನು ವಿಚಾರಣೆ ನಡೆಸಲಾಗುವುದು. ಎಎಪಿ ನಾಯಕರಿಗೆ 100 ಕೋಟಿ ರೂ ಆಫರ್ ನೀಡಿದ ಸೌತ್ ಗ್ರೂಪ್‌ನ ಇಂಡೋ ಸ್ಪಿರಿಟ್ಸ್‌ನಲ್ಲಿ ಕವಿತಾ ಪರವಾಗಿ ಅರುಣ್ ಪಾಲುದಾರರಾಗಿದ್ದಾರೆ ಎಂದು ಹೇಳಲಾಗಿದೆ. ಅಷ್ಟೇ ಅಲ್ಲದೆ, ಮಂಗಳವಾರ ಇಡಿಯು ರಾಮಚಂದ್ರ ಪಿಳ್ಳೈ ಅವರು ಎಂಎಲ್‌ಸಿ ಕವಿತಾ ಅವರ ಬೇನಾಮಿ ಎಂದು ಸಿಬಿಐ ವಿಶೇಷ ನ್ಯಾಯಾಲಯಕ್ಕೆ ತಿಳಿಸಿತ್ತು.

2022ರ ಅಕ್ಟೋಬರ್‌ನಲ್ಲಿ ಅರುಣ್ ಪಿಳ್ಳೈನ ಸಹವರ್ತಿ ಅಭಿಷೇಕ್ ಬೋಯಿನ್‌ಪಳ್ಳಿ ಎಂಬಾತನನ್ನು ಸಿಬಿಐ ಬಂಧಿಸಿತ್ತು. ಈ ನೀತಿಯಿಂದ ಲಾಭ ಪಡೆದ ಲಿಕ್ಕರ್ ಸಂಸ್ಥೆಗಳಿಂದ ಕಮಿಷನ್‌ ಸಂಗ್ರಹಿಸುವ ಸಲುವಾಗಿ ರಾಬಿನ್ ಡಿಸ್ಟ್ರಿಬ್ಯೂಷನ್ ಎಲ್‌ಎಲ್‌ಪಿ ಎಂಬ ನಕಲಿ ಕಂಪನಿಯನ್ನು ಸ್ಥಾಪಿಸಲಾಗಿತ್ತು. ಅದಕ್ಕೆ ಅಭಿಷೇಕ್ ನಿರ್ದೇಶಕರಾಗಿದ್ದರು. ಈ ಇಡೀ ಅವ್ಯವಹಾರದಲ್ಲಿ ಒಟ್ಟು ರೂ.296 ಕೋಟಿ ಲಪಟಾಯಿಸಲಾಗಿದೆ ಎಂದು ಅಂದಾಜಿಸಲಾಗಿದೆ.

ಇದನ್ನೂ ಓದಿ: ದೆಹಲಿ ಮದ್ಯ ಹಗರಣ ಕೇಸ್​: ಸಿಬಿಐ ವಿಚಾರಣೆಗೆ ಕಾಲಾವಕಾಶ ಕೇಳಿದ ಕೆಸಿಆರ್​ ಪುತ್ರಿ

ಇನ್ನೊಂದೆಡೆ, ದೆಹಲಿ ಮದ್ಯ ನೀತಿ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಮನೀಶ್​ ಸಿಸೋಡಿಯಾ ಅವರನ್ನು ಫೆಬ್ರವರಿ 26ರಂದು ಸಿಬಿಐ ಬಂಧಿಸಿದ್ದು,​ ದಿಲ್ಲಿಯ ರೋಸ್ ಅವೆನ್ಯೂ ಕೋರ್ಟ್ ವಿಚಾರಣೆ ನಡೆಸಿ ಮಾರ್ಚ್​ 20 ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ನಂತರ ದೆಹಲಿ ಉಪಮುಖ್ಯಮಂತ್ರಿ ಸ್ಥಾನಕ್ಕೆ ಅವರು ರಾಜೀನಾಮೆ ನೀಡಿದ್ದರು. ವಿಚಾರಣೆಗೆ ಸಿಸೋಡಿಯಾ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಸಿಬಿಐ ದೂರಿತ್ತು. ಇದಕ್ಕೆ ಪ್ರತಿಯಾಗಿ, ಸಿಸೋಡಿಯಾ ಅವರು ಅಧಿಕಾರಿಗಳು ಸುದೀರ್ಘ ಗಂಟೆಗಳ ಕಾಲ ಪುನರಾವರ್ತಿತ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ ಎಂದು ದೂರಿದ್ದರು.

ಇದು ಬೆದರಿಕೆಯ ತಂತ್ರ- ಕವಿತಾ: ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಕೆ.ಕವಿತಾ, "ದೆಹಲಿಯ ಅಬಕಾರಿ ನೀತಿಯಲ್ಲಿನ ಅಕ್ರಮಗಳಿಗೆ ಸಂಬಂಧಿಸಿದಂತೆ ಮಾರ್ಚ್ 9 ರಂದು ದೆಹಲಿಗೆ ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯವು ನನಗೆ ಸಮನ್ಸ್ ನೀಡಿದೆ. ಆದ್ರೆ, ಇದು ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್​ ರಾವ್ ಮತ್ತು ಬಿಆರ್‌ಎಸ್ ಪಕ್ಷದ ವಿರುದ್ಧ ಕೇಂದ್ರದ ಬೆದರಿಕೆಯ ತಂತ್ರ. ಇದಕ್ಕೆಲ್ಲಾ ನಾವು ಹೆದರುವುದಿಲ್ಲ. ಕೇಂದ್ರ ಸರ್ಕಾರದ ವೈಫಲ್ಯಗಳನ್ನು ಬಹಿರಂಗಪಡಿಸಲು ನಮ್ಮ ಪಕ್ಷ ಹೋರಾಟ ಮುಂದುವರಿಸುತ್ತದೆ. ಭಾರತದ ಉಜ್ವಲ ಭವಿಷ್ಯಕ್ಕಾಗಿ ಧ್ವನಿ ಎತ್ತುತ್ತೇನೆ" ಎಂದು ಹೇಳಿದ್ದಾರೆ.

ಇದನ್ನೂ ಓದಿ: ಅಬಕಾರಿ ನೀತಿ ಹಗರಣ: ಮಾ.20ರವರೆಗೆ ಸಿಸೋಡಿಯಾರನ್ನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ ಕೋರ್ಟ್​​

ಏನಿದು ಅಬಕಾರಿ ನೀತಿ ಹಗರಣ?: ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಮದ್ಯ ಮಾರಾಟದ ನಿಯಮಗಳನ್ನು ಬದಲಿಸುವ ಮಹತ್ವದ ನಿರ್ಧಾರವನ್ನು ಆಮ್ ಆದ್ಮಿ ಪಾರ್ಟಿ ನೇತೃತ್ವದ ಸರ್ಕಾರ ತೆಗೆದುಕೊಂಡಿತ್ತು. ಖಾಸಗಿ ಸಂಸ್ಥೆಗಳು ರಿಟೇಲ್ ಲಿಕ್ಕರ್ ವಲಯ ಪ್ರವೇಶಿಸಲು ಅನುಕೂಲ ಮಾಡಿ ಕೊಡಲು ದೆಹಲಿ ಅಬಕಾರಿ ನೀತಿ 2021-22 ಅನ್ನು ಅನುಷ್ಠಾನಗೊಳಿಸಲಾಗಿತ್ತು. ಇದರಲ್ಲಿ ಪರವಾನಗಿ ನೀಡುವುದು, ಪರವಾನಗಿ ಶುಲ್ಕ ಮನ್ನಾ ಮತ್ತು ಕಡಿತ ಹಾಗೂ ಎಲ್-1 ಪರವಾನಗಿ ಅನುಮೋದನೆಯನ್ನು ಇಲ್ಲದೇ ವಿಸ್ತರಿಸುವ ಮೂಲಕ ಲಂಚ ಪಡೆದು ಕಂಪನಿಗಳಿಗೆ ಅನುಕೂಲ ಮಾಡಿಕೊಡಲಾಗಿದೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ.

Last Updated : Mar 8, 2023, 12:19 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.