ಮಹಾರಾಷ್ಟ್ರ/ಅರುಣಾಚಲ ಪ್ರದೇಶ: ಮಹಾರಾಷ್ಟ್ರದ ನಾಸಿಕ್ ಬಳಿ ಇಂದು ಮುಂಜಾನೆ 04:04ರ ಸುಮಾರಿಗೆ ಲಘು ಭೂಕಂಪನದ ಅನುಭವವಾಗಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (ಎನ್‌ಸಿಎಸ್) ಮಾಹಿತಿ ನೀಡಿದೆ. ಎನ್‌ಸಿಎಸ್ ಪ್ರಕಾರ, ನಾಸಿಕ್‌ನಿಂದ ಪಶ್ಚಿಮಕ್ಕೆ 89 ಕಿಮೀ ದೂರದಲ್ಲಿ ಲಘು ಭೂಕಂಪನ ಉಂಟಾಗಿದೆ. ರಿಕ್ಟರ್ ಮಾಪಕದಲ್ಲಿ 3.6 ತೀವ್ರತೆ ದಾಖಲಾಗಿದೆ. ಭೂಕಂಪದ ಕೇಂದ್ರ ಬಿಂದು ನೆಲದಿಂದ 5 ಕಿ.ಮೀ ಆಳದಲ್ಲಿತ್ತು.
ಅರುಣಾಚಲ ಪ್ರದೇಶದ ಬಾಸರ್‌ನಿಂದ ವಾಯುವ್ಯಕ್ಕೆ 58 ಕಿ.ಮೀ ದೂರದಲ್ಲಿ ಬೆಳಿಗ್ಗೆ 07:01 ರ ಸುಮಾರಿಗೆ 3.8 ತೀವ್ರತೆಯ ಭೂಕಂಪನವಾಗಿದೆ. ಯಾವುದೇ ಪ್ರಾಣಹಾನಿ ಅಥವಾ ಆಸ್ತಿಪಾಸ್ತಿ ನಷ್ಟವಾಗಿಲ್ಲ. ಎನ್‌ಸಿಎಸ್ ಪ್ರಕಾರ, ಭೂಕಂಪದ ಕೇಂದ್ರ ಬಿಂದುವು ಭೂಮಿಯಿಂದ 10 ಕಿ.ಮೀ. ಆಳದಲ್ಲಿತ್ತು.
ಇದನ್ನೂ ಓದಿ: ಟರ್ಕಿ, ಮೆಕ್ಸಿಕೋದಲ್ಲಿ ಪ್ರಬಲ ಭೂಕಂಪನ