ಜೈಪುರ(ರಾಜಸ್ಥಾನ): ರಾಜಸ್ಥಾನದ ನಗರಗಳಾದ ಜೈಪುರ, ಶ್ರೀ ಗಂಗಾನಗರ, ಬಿಕಾನೇರ್, ಟೋಂಕ್, ಜಲೋರ್ ಮತ್ತು ಬುಂದಿಯಲ್ಲಿ ಭೂ ಕಂಪನದ ಅನುಭವವಾಗಿದೆ. ಆದ್ರೆ ಯಾವುದೇ ಪ್ರಾಣ ಹಾನಿ ಬಗ್ಗೆ ವರದಿಯಾಗಿಲ್ಲ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.
ಭಾನುವಾರ ರಾತ್ರಿ ಅನೇಕ ನಗರಗಳಲ್ಲಿ ಭೂಮಿ ಕಂಪಿಸಿದ್ದು, ಬಾಗಿಲು ಮತ್ತು ಕಿಟಕಿಗಳು ಸದ್ದು ಮಾಡಿವೆ. ಇದರಿಂದ ಜನರು ಭಯದಿಂದ ಮನೆಗಳಿಂದ ಹೊರಗೆ ಓಡಿ ಬಂದಿದ್ದಾರೆ. ಭೂಕಂಪದ ಕೇಂದ್ರ ಬಿಂದು ಜೈಪುರ ಮತ್ತು ಗಂಗಾನಗರ ಜಿಲ್ಲೆಗಳಲ್ಲಿ ಭೂಮಿಯಿಂದ ಹಲವಾರು ಕಿಲೋಮೀಟರ್ ಆಳದಲ್ಲಿದೆ.
ಮಾಹಿತಿಯ ಪ್ರಕಾರ, ಶ್ರೀ ಗಂಗಾನಗರದ ಅನುಪ್ಗಢದಲ್ಲಿ ಮೊದಲ ಭೂಕಂಪನ ವರದಿಯಾಗಿದೆ. ಇದರ ಕೇಂದ್ರಬಿಂದು ಪಾಕಿಸ್ತಾನದ ಗಡಿಗೆ ಬಹಳ ಸಮೀಪದಲ್ಲಿತ್ತು ಮತ್ತು ನೆಲದಿಂದ 10 ಕಿ.ಮೀ. ಆಳದಲ್ಲಿದೆ. 12.27 ರ ಸುಮಾರಿಗೆ ಮೊದಲ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 3.7 ತೀವ್ರತೆ ದಾಖಲಾಗಿದೆ.
8 ನಿಮಿಷಗಳ ನಂತರ ಜೈಪುರದಲ್ಲೂ ಕಂಪನದ ಅನುಭವವಾಯಿತು. ಈ ಬಾರಿ ರಿಕ್ಟರ್ ಮಾಪಕದಲ್ಲಿ 3.6 ತೀವ್ರತೆ ದಾಖಲಾಗಿದೆ. ಈ ಭೂಕಂಪದ ಕೇಂದ್ರಬಿಂದು ಜೈಪುರದ ಫಾಗಿ ಮತ್ತು ಚಕ್ಸು ನಡುವೆ ಕಂಡಿದೆ. ಇದು ಭೂಮಿಯಿಂದ ಸುಮಾರು 10 ಕಿಲೋಮೀಟರ್ ಆಳದಲ್ಲಿ ಕಂಡಿದೆ ಎಂದು ಭೂಕಂಪನದ ರಾಷ್ಟ್ರೀಯ ಕೇಂದ್ರವು ಮಾಹಿತಿ ನೀಡಿದೆ.
ಓದಿ: ಶಿರಾಳಕೊಪ್ಪದಲ್ಲಿ ಕಂಪಿಸಿದ ಭೂಮಿ: ನಿದ್ದೆಯಿಂದ ಎದ್ದು ಹೊರಗೆ ಓಡಿ ಬಂದ ಜನ