ETV Bharat / bharat

ಅಫ್ಘಾನಿಸ್ತಾನದಲ್ಲಿ ಭೂಕಂಪ: ಉತ್ತರ ಭಾರತದಲ್ಲಿ ನಡುಕ

author img

By ETV Bharat Karnataka Team

Published : Jan 11, 2024, 3:36 PM IST

Updated : Jan 11, 2024, 5:55 PM IST

Delhi Earthquake: ಅಫ್ಘಾನಿಸ್ತಾನದ ಹಿಂದೂಕುಶ್ ಪ್ರದೇಶದಲ್ಲಿ 6.1 ತೀವ್ರತೆಯ ಭೂಕಂಪ ಸಂಭವಿಸಿದ್ದು, ಇದರ ಪರಿಣಾಮ ದೆಹಲಿ ಸೇರಿ ಉತ್ತರ ಭಾರತದ ಕೆಲವು ಭಾಗಗಳಲ್ಲಿ ಗುರುವಾರ ಕಂಪನದ ಅನುಭವವಾಗಿದೆ.

Earthquake tremors felt in Delhi-NCR Details awaited

ನವದೆಹಲಿ: ಅಫ್ಘಾನಿಸ್ತಾನದಲ್ಲಿ ಭೂಕಂಪ ಸಂಭವಿಸಿದ್ದು ಅದರ ಕಂಪನಗಳು ಭಾರತದ ದೆಹಲಿ ಸೇರಿದಂತೆ ಇತರ ನಗರಗಳಲ್ಲಿ ಕಂಡು ಬಂದಿದೆ ಎಂದು ವರದಿಯಾಗಿದೆ. ಗುರುವಾರ ಮಧ್ಯಾಹ್ನ 2.50ಕ್ಕೆ ಅಫ್ಘಾನಿಸ್ತಾನದಲ್ಲಿ ಭೂಕಂಪ ಸಂಭವಿಸಿದ್ದು, ಅದರ ಕಂಪನಗಳು ರಾಷ್ಟ್ರ ರಾಜಧಾನಿ ದೆಹಲಿ, ಗಾಜಿಯಾಬಾದ್, ನೋಯ್ಡಾ, ಫರಿದಾಬಾದ್, ಗುರುಗ್ರಾಮ್, ಪಂಜಾಬ್​, ಚಂಡೀಗಢ ಮತ್ತು ಕಾಶ್ಮೀರ ಕಣಿವೆಯಲ್ಲಿ ಅನುಭವವಾಗಿದೆ. ಮನೆಯಲ್ಲಿರುವ ಪೀಠೋಪಕರಣಗಳು ಅಲುಗಾಡಿರುವುದು ಕೂಡ ವರದಿಯಾಗಿದೆ.

ಆಫ್ಘನ್​ ಮತ್ತು ಭಾರತದ ಹೊರತಾಗಿ ಲಾಹೋರ್, ಇಸ್ಲಾಮಾಬಾದ್, ಖೈಬರ್ ಪಖ್ತುಂಖ್ವಾ ಸೇರಿ ಪಾಕಿಸ್ತಾನದ ಇತರ ನಗರಗಳಲ್ಲಿಯೂ ಭೂಕಂಪದ ಅನುಭವವಾಗಿದೆ ಎಂದು ವರದಿಯಾಗಿದೆ. ಅಫ್ಘಾನಿಸ್ತಾನದಲ್ಲಿ ರಿಕ್ಟರ್ ಮಾಪಕದಲ್ಲಿ ಭೂಕಂಪದ ತೀವ್ರತೆ 6.1ರಷ್ಟು ದಾಖಲಾಗಿದೆ. ಭೂಕಂಪ ಸಂಭವಿಸಿದ ತಕ್ಷಣ ಮನೆ, ಕಚೇರಿಯಿಂದ ಜನರು ಹೊರಗಡೆ ಓಡಿ ಬಂದಿದ್ದಾರೆ. ಸದ್ಯದ ಮಾಹಿತಿ ಪ್ರಕಾರ ಯಾವುದೇ ಪ್ರಾಣ - ಹಾನಿ ಆದ ಬಗ್ಗೆ ವರದಿ ಆಗಿಲ್ಲ. ಅಧಿಕಾರಿಗಳು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ನಾಗರಿಕರು ಜಾಗೃತರಾಗುವಂತೆ ಮನವಿ ಮಾಡಿದ್ದಾರೆ. ಆರಂಭಿಕ ಭೂಕಂಪದ ಆಳವು, ಅವುಗಳ ಪ್ರಭಾವ ಕಡಿಮೆಗೊಳಿಸಬಹುದಾದರೂ, ನಂತರ ಹೆಚ್ಚಾಗಬಹುದು. ಇಲ್ಲಿಯವರೆಗೆ, ಯಾವುದೇ ಸಾವು - ನೋವುಗಳ ಬಗ್ಗೆ ವರದಿಗಳಿಲ್ಲ. ಆದರೂ, ಪರಿಸ್ಥಿತಿ ಅರಿಯುವ ಕೆಲಸ ಮಾಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದೇಶದ ಹವಾಮಾನ ಇಲಾಖೆ ಪ್ರಕಾರ, ಪಾಕಿಸ್ತಾನದ ಕೆಲವು ಭಾಗಗಳಲ್ಲಿ 6.0 ತೀವ್ರತೆಯ ಭೂಕಂಪ ಸಂಭವಿಸಿದೆ. ಅಫ್ಘಾನಿಸ್ತಾನದ ಹಿಂದೂಕುಶ್ ಪ್ರದೇಶದಲ್ಲಿ ಭೂಕಂಪದ ಕೇಂದ್ರ ಬಿಂದುವಾಗಿದೆ ಎಂದು ಪಾಕಿಸ್ತಾನದ ಹವಾಮಾನ ಇಲಾಖೆ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದೆ.

ಇದನ್ನೂ ಓದಿ: Earthquake shocks: ಉತ್ತರಪ್ರದೇಶದ 50 ಜಿಲ್ಲೆಗಳಲ್ಲಿ ನಡುಗಿದ ಭೂಮಿ.. ಮನೆ ಬಿಟ್ಟು ಓಡಿ ಬಂದ ಜನರು

ಇತ್ತೀಚೆಗಷ್ಟೇ (ನ. 3ರ) ಉತ್ತರಪ್ರದೇಶದ ರಾಜಧಾನಿ ಲಖನೌ ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ಭೂಕಂಪ ಸಂಭವಿಸಿತ್ತು. ಈ ಭೂಕಂಪದ ಕೇಂದ್ರಬಿಂದು ನೇಪಾಳದಲ್ಲಿದ್ದು, ಭೂಮಿಯ 10 ಕಿಲೋಮೀಟರ್ ಆಳದಲ್ಲಿ ಕಂಡು ಬಂದಿತ್ತು. ಭೂಕಂಪನದಿಂದಾಗಿ ಜನರಲ್ಲಿ ಸಾಕಷ್ಟು ಭೀತಿ ಉಂಟಾಗಿದೆ. ಕಂಪನದ ಅನುಭವವಾದ ನಂತರ ನಾಗರಿಕರು ಮನೆಯಿಂದ ಹೊರ ಓಡಿ ಬಂದಿದ್ದರು. ಕಠ್ಮಂಡುವಿನಲ್ಲಿ ಸಂಭವಿಸಿದ ಭೂಕಂಪದ ತೀವ್ರತೆಯನ್ನು ರಿಕ್ಟರ್ ಮಾಪಕದಲ್ಲಿ 6.4 ಎಂದು ಅಳೆಯಲಾಗಿತ್ತು. ಲಖನೌ, ಲಖಿಂಪುರ, ಸೀತಾಪುರ, ಬರೇಲಿ, ಮೀರತ್, ಹರ್ದೋಯಿ, ಗೋರಖ್‌ಪುರ, ಜೌನ್‌ಪುರ ಸೇರಿದಂತೆ 50ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಭೂಕಂಪನದ ಅನುಭವವಾಗಿತ್ತು.

ಸಾಮಾನ್ಯವಾಗಿ, ಭೂಕಂಪಗಳು ಏಷ್ಯಾ ಖಂಡದಲ್ಲಿ ಹೆಚ್ಚಾಗಿ ಸಂಭವಿಸುತ್ತವೆ. ಅದರಲ್ಲಿ, ಭಾರತದ ಜಮ್ಮು ಮತ್ತು ಕಾಶ್ಮೀರ, ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ತಜಕಿಸ್ತಾನ ಹಾಗೂ ಹಿಂದ್ ಕುಶ್ ಹಿಮಾಲಯ ವಲಯದ ಸುತ್ತ ಮುತ್ತ ಆಗಾಗ ಭೂಕಂಪಗಳು ಸಂಭವಿಸುತ್ತಲೇ ಇರುತ್ತದೆ. ಅಕ್ಟೋಬರ್ 2005 ರಲ್ಲಿ ಪಾಕಿಸ್ತಾನದಲ್ಲಿ ಸಂಭವಿಸಿದ ಭೂಕಂಪದಲ್ಲಿ 74,000ಕ್ಕೂ ಹೆಚ್ಚು ಜನರು ಸಾವನ್ನಪ್ಪಿದರು. ಮತ್ತೊಂದೆಡೆ, ಅಕ್ಟೋಬರ್ 2023 ರಲ್ಲಿ ಅಫ್ಘಾನಿಸ್ತಾನದಲ್ಲಿ ಸಂಭವಿಸಿದ ಭಾರೀ ಭೂಕಂಪದಲ್ಲಿ 2,000 ಜನರು ಸಾವನ್ನಪ್ಪಿದ್ದರು. 9,000 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.

Last Updated : Jan 11, 2024, 5:55 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.