ಚಂದೌಲಿ (ಉತ್ತರ ಪ್ರದೇಶ): ಇಲ್ಲಿನ ಕೊಟ್ವಾಲಿ ಪ್ರದೇಶದ ಹೆದ್ದಾರಿಯಲ್ಲಿ ಟ್ರ್ಯಾಕ್ಟರ್ ಹಾಗೂ ಟ್ಯಾಂಕರ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಟ್ಯಾಂಕರ್ ಚಾಲಕ ಸಜೀವ ದಹನವಾಗಿದ್ದಾನೆ.
ಎರಡು ವಾಹನಗಗಳ ನಡುವೆ ಅಪಘಾತ ಸಂಭವಿಸಿದ ತಕ್ಷಣ ಬೆಂಕಿ ಹೊತ್ತಿಕೊಂಡಿದೆ. ಆದರೆ, ಟ್ಯಾಂಕರ್ನಿಂದ ಚಾಲಕ ಹೊರ ಬರಲಾಗದೆ ಸಜೀವ ದಹನವಾಗಿದ್ದಾನೆ. ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.