ETV Bharat / bharat

ಚಹಾ ಕುಡಿದು ಕಪ್​​ ತಿನ್ನಿ.. ಲಾಕ್​​ಡೌನ್ ವೇಳೆ ಯುವಕರ ಹೊಸ ಆವಿಷ್ಕಾರ - Magnet Edible Cutlery

ಪ್ರತಿನಿತ್ಯ ಪ್ಲಾಸ್ಟಿಕ್ ರೂಪದಲ್ಲಿ ಟನ್​​ಗಟ್ಟಲೇ ತ್ಯಾಜ್ಯ ಪರಿಸರಕ್ಕೆ ಸೇರಿಕೊಳ್ಳುತ್ತದೆ. ಅದೇ ರೀತಿ ಟೀ ಕಪ್​ಗಳು ಸಹ ಒಮ್ಮೆ ಬಳಕೆಯಾದರೆ ಮತ್ತೆ ಬಳಕೆಗೆ ಬರುವುದಿಲ್ಲ. ಇದೀಗ ಪ್ಲಾಸ್ಟಿಕ್ ಕಪ್​ಗಳ ಬದಲಿಗೆ ಬಿಸ್ಕತ್ ಕಪ್​​ ಆವಿಷ್ಕರಿಸಲಾಗಿದ್ದು, ಟೀ ಸವಿದ ಬಳಿಕ ಕಪ್ ಅನ್ನು ತಿಂಡಿಯಂತೆ ತಿನ್ನಬಹುದು.

drink-your-tea-and-eat-your-cup-too
ಚಹಾ ಕುಡಿದು ಕಪ್​​ ತಿನ್ನಿ
author img

By

Published : Mar 9, 2021, 7:04 AM IST

ಮುಂಬೈ: ಸಾಮಾನ್ಯವಾಗಿ ಟೀ, ಕಾಫಿ ಕುಡಿದ ಮೇಲೆ ಬಳಸಿದ ಕಪ್‌ಗಳನ್ನು ತೊಳೆದಿಡುತ್ತೇವೆ. ಪೇಪರ್​ ಅಥವಾ ಪ್ಲಾಸ್ಟಿಕ್​ ಕಪ್​ ಆಗಿದ್ದರೆ ಅದನ್ನು ಬಿಸಾಡ್ತೇವೆ. ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ನೀವು ಟೀ ಕುಡಿದರೆ ಅದರೊಟ್ಟಿಗೆ ಕಪ್​ ಅನ್ನೂ ತಿನ್ನಬಹುದು. ಈ ತಿನ್ನುವ​ ಕಪ್‌ಗಳನ್ನು ಬಿಸ್ಕತ್ತು​ ಕಪ್​ ಎಂದು ಕರೆಯಲಾಗುತ್ತದೆ. ದಿಗ್ವಿಜಯ್ ಗಾಯಕ್ವಾಡ್, ಆದೇಶ್ ಕರಂಡೆ ಮತ್ತು ರಾಜೇಶ್ ಖಮ್ಕರ್ ಎಂಬುವವರು ಈ ಕಪ್​ಗಳನ್ನು ತಯಾರಿಸಿದ್ದಾರೆ.

ಈ ಮೂವರು ಸೇರಿ "ಮ್ಯಾಗ್ನೆಟ್ ಎಡಿಬಲ್​ ಕಟ್ಲರಿ" ಎಂಬ ಬ್ರಾಂಡ್ ಅನ್ನು ಅಭಿವೃದ್ಧಿಪಡಿಸಿದ್ರು. ಹಿಟ್ಟಿನಿಂದ ತಯಾರಿಸಿದ ಬಿಸ್ಕತ್ತು ಕಪ್​ಗಳನ್ನು ಈ ಬ್ರ್ಯಾಂಡ್‌ನಡಿ ಉತ್ಪಾದಿಸುತ್ತಾರೆ. ಕಪ್ ತಿನ್ನಲು ತುಂಬಾ ರುಚಿಯಾಗಿದೆ ಎನ್ನುತ್ತಾರೆ ಗ್ರಾಹಕರು.

ಲಾಕ್​​ಡೌನ್ ವೇಳೆ ಯುವಕರ ಹೊಸ ಆವಿಷ್ಕಾರ

ಈ ಕುರಿತು ಪ್ರತಿಕ್ರಿಯಿಸಿರುವ ತಯಾರಿಕೆದಾರರು, ಎಡಿಬಲ್​ ಕಪ್‌ಗಳ ಪರಿಸರ ಪ್ರಯೋಜನಗಳ ಬಗ್ಗೆ ಮಾರಾಟಗಾರರಿಗೆ ಮನವರಿಕೆ ಮಾಡಲು ಪ್ರಯತ್ನಿಸುತ್ತಿದ್ದೇವೆ. ಇವುಗಳಿಗೆ ಪ್ಲಾಸ್ಟಿಕ್ ಕಪ್​ಗಳಿಗಿಂತ ಹೆಚ್ಚು ಬೇಡಿಕೆ ಇದೆ. ಇದರ ಬಳಕೆಯಿಂದ ಪರಿಸರಕ್ಕೂ ಪ್ರಯೋಜನವಿದೆ. ತ್ಯಾಜ್ಯ ಉತ್ಪಾದನೆ ನಿಯಂತ್ರಿಸಲು ಈ ಕಪ್ ಬಳಸುವುದು ಪ್ರಯೋಜನಕಾರಿ. ಜನರು ಕಪ್ ತಿನ್ನದಿದ್ದರೆ ಅದು ವ್ಯರ್ಥವಾಗುವುದಿಲ್ಲ. ಪ್ರಾಣಿಗಳು ಅದನ್ನು ತಿನ್ನಬಹುದು. ಆದ್ದರಿಂದ ಇದು ತ್ಯಾಜ್ಯ ನಿಯಂತ್ರಣಕ್ಕೂ ಸಹಾಯಕಾರಿ ಎಂದಿದ್ದಾರೆ.

ಸಚಿವ ಸತೇಜ್ ಪಾಟೀಲ ಮತ್ತು ಶಾಸಕ ರುತುರಾಜ್ ಪಾಟೀಲ ಇವರ ಕಾರ್ಯವನ್ನು ಶ್ಲಾಘಿಸಿದ್ದಾರೆ. ಜನರು ಈ ಕಪ್​ಗಳಲ್ಲಿ ಚಹಾ ಕುಡಿಯುವುದನ್ನು ಆನಂದಿಸುತ್ತಾರೆ. ಈ ಎಡಿಬಲ್​ ಕಟ್ಲರಿಗಳು ಪರಿಸರ ಸಂರಕ್ಷಣೆಗೆ ಉತ್ತಮ ಉಪಾಯಗಳಾಗಿವೆ ಎಂಬುದರಲ್ಲಿ ಎರಡು ಮಾತಿಲ್ಲ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.