ನವದೆಹಲಿ: ಕಡಿಮೆ ವ್ಯಾಪ್ತಿಯ ಪದಾತಿ ದಳ, ಫಿರಂಗಿ ಮತ್ತು ಶಸ್ತ್ರಾಸ್ತ್ರ ಹೊಂದಿದ ವಾಹನಗಳನ್ನು ಗುರಿಯಾಗಿಸಿ ನಾಶಪಡಿಸಬಲ್ಲ ಸಾಮರ್ಥ್ಯ ಹೊಂದಿರುವ ಪಿನಾಕಾ ರಾಕೆಟ್ ಉಡ್ಡಯನ ಒಡಿಶಾದಲ್ಲೂ ಯಶಸ್ವಿಯಾಗಿದೆ. ಡಿಆರ್‌ಡಿಒ 1980ರ ದಶಕದಲ್ಲಿ ಪಿನಾಕಾ ರಾಕೆಟ್ ಸಿಸ್ಟಮ್ ಅಭಿವೃದ್ಧಿಪಡಿಸಲು ಪ್ರಾರಂಭಿಸಿದ್ದು, ಎರಡು ಕಡೆಗಳಲ್ಲಿ ನಡೆದ ಪ್ರಯೋಗ ಯಶಸ್ಸು ಕಂಡಿದೆ. ಈ ಸಕ್ಸಸ್ನಿಂದಾಗಿ ಎದುರಾಳಿಗಳಲ್ಲಿ ನಡುಕ ಶುರುವಾಗಿದೆ.
ಸಂಪೂರ್ಣ ಸ್ವದೇಶಿ ನಿರ್ಮಿತ ಹಾಗೂ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಅಭಿವೃದ್ಧಿಪಡಿಸಿದ ಪಿನಾಕಾ ರಾಕೆಟ್‌ನ ಸಾಮರ್ಥ್ಯವನ್ನು ನಿರಂತರವಾಗಿ ಹೆಚ್ಚಿಸಲಾಗುತ್ತಿದೆ. ರಾಜಸ್ಥಾನದ ಪೋಖ್ರಾನ್ ಮತ್ತು ಒಡಿಶಾದ ಬಾಲಸೋರ್ನಲ್ಲಿ ಸ್ವದೇಶಿ ನಿರ್ಮಿತ ಪಿನಾಕಾ ವಿಸ್ತೃತ ಸರಣಿಯ ರಾಕೆಟ್‌ನ ಯಶಸ್ವಿ ಪ್ರಯೋಗವನ್ನು ಇಂದು ನಡೆಸಲಾಯಿತು. ಫೈರಿಂಗ್ ರೇಂಜ್‌ಗಳಲ್ಲಿ ನಡೆಸಲಾದ ಪ್ರಯೋಗ ನಿಖರತೆ ಸಾಧಿಸಿದೆ. ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಇದನ್ನು ಅಭಿವೃದ್ಧಿಪಡಿಸಿದೆ. 15 ಅಡಿ ಉದ್ದದ ರಾಕೆಟ್ ಇದಾಗಿದ್ದು, ಸುಮಾರು 280 ಕೆಜಿ ತೂಕವಿದೆ. 100 ಕೆಜಿವರೆಗೆ ಸಿಡಿತಲೆಗಳನ್ನು ಹೊತ್ತೊಯಬಲ್ಲ ಶಕ್ತಿ ಈ ರಾಕೆಟ್ಗಿದೆ.
ರಕ್ಷಣಾ ಕ್ಷೇತ್ರದಲ್ಲಿ ಮೇಕ್ ಇನ್ ಇಂಡಿಯಾ, ಮ್ಯೂನಿಷನ್ಸ್ ಇಂಡಿಯಾ ಲಿಮಿಟೆಡ್ ಮತ್ತು ಎಕನಾಮಿಕ್ ಎಕ್ಸ್‌ಪ್ಲೋಸಿವ್ಸ್ ಲಿಮಿಟೆಡ್ ಸೇರಿದಂತೆ ಇತರ ತಯಾರಕರು ಈ ಪರೀಕ್ಷೆಯನ್ನು ಪೂರ್ಣಗೊಳಿಸಲು ಮತ್ತು ಪಿನಾಕಾದ ಸಾಮರ್ಥ್ಯವನ್ನು ಹೆಚ್ಚಿಸುವಲ್ಲಿ ಅಪಾರ ಶ್ರಮ ವಹಿಸಿದ್ದಾರೆ.
Pinaka Mk-I ಒಂದು ನವೀಕರಿಸಿದ ರಾಕೆಟ್ ವ್ಯವಸ್ಥೆಯಾಗಿದ್ದು, ಇದನ್ನು ಈ ಹಿಂದೆ ಹಲವಾರು ಬಾರಿ ಯಶಸ್ವಿಯಾಗಿ ಪರೀಕ್ಷಾರ್ಥ ಉಡಾವಣೆ ಮಾಡಲಾಗಿದೆ. ಡಿಆರ್‌ಡಿಒ ತಂತ್ರಜ್ಞಾನದ ಆಧಾರದ ಮೇಲೆ ಈ ರಾಕೆಟ್ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸಲಾಗಿದೆ. ಪಿನಾಕಾ ಎಂಕೆ I ರಾಕೆಟ್ ಸಿಸ್ಟಮ್ ಸುಮಾರು 45 ಕಿ.ಮೀ., ಪಿನಾಕಾ-II ರಾಕೆಟ್ ಸಿಸ್ಟಮ್ 60 ಕಿ.ಮೀ. ದೂರಕ್ಕೆ ಚಿಮ್ಮುವ ಸಾಮರ್ಥವನ್ನು ಹೊಂದಿವೆ. ಈ ಎರಡು ರಾಕೆಟ್ ಸಿಸ್ಟಮ್ಗಳನ್ನು DRDO ಪ್ರಯೋಗಾಲಯಗಳು, ಆರ್ಡನೆನ್ಸ್ ಹೈ ಎನರ್ಜಿ ಮೆಟೀರಿಯಲ್ಸ್ ರಿಸರ್ಚ್ ಲ್ಯಾಬೊರೇಟರಿ (HEMRL) ಹಾಗೂ ಸಂಶೋಧನೆ ಮತ್ತು ಅಭಿವೃದ್ಧಿ ಸ್ಥಾಪನೆ (ARDE) ಜಂಟಿಯಾಗಿ ವಿನ್ಯಾಸಗೊಳಿಸಿವೆ.
1980ರ ದಶಕದಲ್ಲಿ ಅಭಿವೃದ್ಧಿ: ಪಿನಾಕಕ್ಕೆ ಹತ್ತಿರವಿರುವ ಶತ್ರು ಗುರಿಗಳನ್ನು ನಾಶಪಡಿಸುವ ಸಾಮರ್ಥ್ಯವನ್ನು ಹೊಂದಿದೆ. ಇದು ಕಡಿಮೆ ವ್ಯಾಪ್ತಿಯ ಪದಾತಿ ದಳ, ಫಿರಂಗಿ ಮತ್ತು ಶಸ್ತ್ರಾಸ್ತ್ರ ಹೊಂದಿದ ವಾಹನಗಳನ್ನು ಗುರಿಯಾಗಿಸುತ್ತದೆ. ಡಿಆರ್‌ಡಿಒ 1980ರ ದಶಕದಲ್ಲಿ ಪಿನಾಕಾ ರಾಕೆಟ್ ಸಿಸ್ಟಮ್ನ್ನು ಅಭಿವೃದ್ಧಿಪಡಿಸಲು ಪ್ರಾರಂಭಿಸಿತು. ಇದರ ನಂತರ, 1990 ರ ದಶಕದ ಉತ್ತರಾರ್ಧದಲ್ಲಿ ಪಿನಾಕಾ ಮಾರ್ಕ್-ಒನ್ ಯಶಸ್ವಿ ಪರೀಕ್ಷೆಯು ಭಾರತೀಯ ಸೇನೆಗೆ ಹೆಚ್ಚಿನ ಶಕ್ತಿಯನ್ನು ನೀಡಿತು. ಪಿನಾಕಾ-II ಅನ್ನು ಮಾರ್ಗದರ್ಶಿ ಕ್ಷಿಪಣಿಯಾಗಿ ವಿನ್ಯಾಸಗೊಳಿಸಲಾಗಿದೆ.
1999 ರ ಕಾರ್ಗಿಲ್ ಯುದ್ಧದ ಸಮಯದಲ್ಲಿ ಭಾರತೀಯ ಸೇನೆಯು ಪಿನಾಕಾ ಮಾರ್ಕ್-I ರೂಪಾಂತರವನ್ನು ಬಳಸಿತು. ಇದು ಪರ್ವತದ ಪೋಸ್ಟ್‌ಗಳಲ್ಲಿ ಪಾಕಿಸ್ತಾನದ ಸ್ಥಾನಗಳನ್ನು ನಿಖರವಾಗಿ ಗುರಿಯಾಗಿಸಿತು ಮತ್ತು ಯುದ್ಧದಲ್ಲಿ ಶತ್ರುಗಳು ಹಿಮ್ಮೆಟ್ಟುವಂತೆ ಮಾಡಿತು.
ಓದಿ: ಸ್ವದೇಶಿ ನಿರ್ಮಿತ ಪಿನಾಕಾ ವಿಸ್ತೃತ ರಾಕೆಟ್ ಪೋಖ್ರಾನ್ನಲ್ಲಿ ಪ್ರಯೋಗ.. ವಿಡಿಯೋ