ETV Bharat / bharat

ನೀವು ಶ್ವಾನ ಪ್ರಿಯರೇ.. ಹಾಗಾದರೆ ಇಲ್ಲಿದೆ Dog Hostel... ಏನಿದರ ವಿಶೇಷತೆ? - ನಾಯಿ ಹಾಸ್ಟೆಲ್

ಪಾಟ್ನಾದಲ್ಲಿ ಡಾಗ್​​ ಹಾಸ್ಟೆಲ್ ಟ್ರೆಂಡ್ ಶುರುವಾಗಿದೆ. ಇಲ್ಲಿ ಸಾಕು ನಾಯಿಗಳನ್ನು ಇರಿಸಿ ಆರೈಕೆ ಮಾಡಲಾಗುತ್ತದೆ. ನಮಗೆ ಕೆಲಸದ ವೇಳೆ ನಾಯಿಗಳನ್ನು ಅಲ್ಲಿ ಬಿಟ್ಟು ನಂತರ ವಾಪಸ್​ ಕರೆದುಕೊಂಡು ಬರುವ ವ್ಯವಸ್ಥೆಯಿದೆ.

Dog Hostel In Patna
ಪಾಟ್ನಾ ಡಾಗ್​ ಹಾಸ್ಟೆಲ್
author img

By

Published : Dec 17, 2021, 8:06 PM IST

ಪಾಟ್ನಾ (ಬಿಹಾರ): ಬಹುತೇಕ ಜನರು ಶ್ವಾನಗಳನ್ನು ಬಹಳಾನೇ ಇಷ್ಟ ಪಡುತ್ತಾರೆ. ಮನೆಯಲ್ಲಿ ಓರ್ವ ಸದಸ್ಯನಂತೆ ನಾಯಿಗಳನ್ನು ಕಂಡು ಅವುಗಳನ್ನು ಪೋಷಿಸುತ್ತಾರೆ. ಆದರೆ, ಜನರು ಹೊರಹೋಗ ಬಯಸಿದಲ್ಲಿ ತಮ್ಮ ನಾಯಿಗಳನ್ನು ಎಲ್ಲಿ ಬಿಡುವುದು ಎಂಬ ಚಿಂತೆ ಕೆಲವರದ್ದಾದರೆ, ಕೆಲಸಕ್ಕೆ ಹೋಗುವ ಮಂದಿ ತಮ್ಮ ಕೆಲಸದ ಅವಧಿಯಲ್ಲಿ ನಾಯಿಯನ್ನು ಹೇಗೆ ಮನೆಯಲ್ಲಿ ಬಿಡುವುದು ಎಂಬ ಚಿಂತೆಯಲ್ಲಿರುತ್ತಾರೆ.

ಈ ಕಾರಣಕ್ಕಾಗಿ ಅದೆಷ್ಟೋ ಮಂದಿಗೆ ಶ್ವಾನಗಳನ್ನು ಸಾಕುವ ಆಸೆ ಇದ್ದರೂ ಸಾಕಲಾಗುತ್ತಿಲ್ಲ. ಈ ಸಮಸ್ಯೆಗೆ ಪರಿಹಾರವಾಗಿ ಪಾಟ್ನಾದಲ್ಲಿ ಡಾಗ್​ ಹಾಸ್ಟೆಲ್​ ಪ್ರಾರಂಭಿಸಲಾಗಿದೆ.

Dog Hostel In Patna:

ಪಾಟ್ನಾದಲ್ಲಿ ನಾಯಿ ಹಾಸ್ಟೆಲ್ ಟ್ರೆಂಡ್ ಶುರುವಾಗಿದೆ. ನೀವು ಅನಾರೋಗ್ಯದಿಂದ ಬಳಲುತ್ತಿದ್ದರೆ ಮತ್ತು ಆಸ್ಪತ್ರೆಗೆ ದಾಖಲಾದರೆ, ನಿಮ್ಮ ಸಾಕು ನಾಯಿಯನ್ನು ಡಾಗ್​​ ಹಾಸ್ಟೆಲ್‌ನಲ್ಲಿ ಇರಿಸಬಹುದು. ಅಥವಾ ನೀವು ಯಾವುದೇ ಸಮಾರಂಭಗಳಲ್ಲಿ ಭಾಗವಹಿಸಲು ಹೋದ ವೇಳೆ ನಿಮ್ಮ ನಾಯಿಗಳನ್ನು ಈ ಹಾಸ್ಟೆಲ್‌ನಲ್ಲಿ ಇರಿಸಬಹುದು. ನಿಮ್ಮ ಸಾಕು ನಾಯಿಗಳನ್ನು ನಿಮ್ಮಂತೆಯೇ ನೋಡಿಕೊಳ್ಳಬೇಕೆಂದು ನೀವು ಬಯಸಿದರೆ, ಖಂಡಿತವಾಗಿಯೂ ನಿಮ್ಮ ಸಾಕು ನಾಯಿಯನ್ನು ಈ ನಾಯಿ ಹಾಸ್ಟೆಲ್‌ನಲ್ಲಿ ಇರಿಸಿ ನಿಮ್ಮ ಕೆಲಸಕ್ಕೆ ತೆರಳಬಹುದು.

ಪಾಟ್ನಾ ಡಾಗ್​ ಹಾಸ್ಟೆಲ್

ವಿವಿಧ ತಳಿಯ ಶ್ವಾನಗಳು ಈ ಶ್ವಾನ ವಸತಿ ನಿಲಯದಲ್ಲಿವೆ. ಕೇರ್ ಟೇಕರ್​ಗಳು ಅವುಗಳನ್ನು ನೋಡಿಕೊಳ್ಳುವುದು ಮಾತ್ರವಲ್ಲದೇ ಅವುಗಳೊಂದಿಗೆ ಆಟವಾಡುತ್ತಾರೆ. ಬೆಳಗ್ಗೆ ಆಫೀಸ್​ಗೆ ಹೋಗಿ ಸಂಜೆ ಬರುವವರು ತಮ್ಮ ನಾಯಿಗಳ ಆರೈಕೆಗಾಗಿ ಇಂತಹ ಡಾಗ್​ ಹಾಸ್ಟೆಲ್​​​ ಮೊರೆ ಹೋಗುತ್ತಾರೆ. ಅಲ್ಲಿಯವರೆಗೆ ಆರೈಕೆ ಮಾಡುವವರು ನಾಯಿಗಳಿಗೆ ಉತ್ತಮ ಕಾಳಜಿ ವಹಿಸಿ, ವಿವಿಧ ತರಬೇತಿಯನ್ನೂ ನೀಡುತ್ತಾರೆ. ಕರೊನಾ ಅವಧಿಯಲ್ಲಿ ಇಂತಹ ಹಾಸ್ಟೆಲ್‌ಗಳಿಗೆ ಈಗ ಬೇಡಿಕೆ ಹೆಚ್ಚಾಗಿದೆ.

ಶ್ವಾನ ಹಾಸ್ಟೆಲ್ ನಿರ್ವಾಹಕರು ಸಾಕು ನಾಯಿಯ ಬಗ್ಗೆ ಸಂಪೂರ್ಣ ಮಾಹಿತಿ ಪಡೆದಿರುತ್ತಾರೆ. ಮಾಂಸಾಹಾರಿ ನಾಯಿಯಾಗಿದ್ದರೆ ಕೋಳಿ ಮಾಂಸ, ಇಲ್ಲದಿದ್ದರೆ ಸಸ್ಯಾಹಾರಿ ನಾಯಿಗೆ ಹಾಲು, ಮೊಸರು, ರೊಟ್ಟಿ ಮತ್ತು ಅನ್ನವನ್ನು ನೀಡಲಾಗುತ್ತದೆಯಂತೆ.

ಅತಿ ದೊಡ್ಡ ಡಾಗ್ ಹಾಸ್ಟೆಲ್:

ಚೈನ್‌ಪುರ್ ಪಾಟ್ನಾದಲ್ಲಿ ಅತಿದೊಡ್ಡ ಡಾಗ್ ಹಾಸ್ಟೆಲ್ ಇದೆ. ರಾಜಧಾನಿ ಪಾಟ್ನಾದಿಂದ 15 ಕಿ.ಮೀ ದೂರದಲ್ಲಿದೆ. ಈ ಡಾಗ್ ಹಾಸ್ಟೆಲ್​ನಲ್ಲಿ 100ಕ್ಕೂ ಹೆಚ್ಚು ಸಾಕು ನಾಯಿಗಳನ್ನು ಸಾಕಲು ವ್ಯವಸ್ಥೆ ಮಾಡಲಾಗಿದೆ.

ಇದನ್ನೂ ಓದಿ: Shocking Video: ಕದ್ದ ಫೋನ್​ ಜೊತೆ ಮಹಿಳೆಯನ್ನೂ ರಸ್ತೆಯಲ್ಲಿ ಎಳೆದೊಯ್ದು ಬಿಸಾಡಿದ ದುರುಳರು!

ನಮ್ಮ ಹಾಸ್ಟೆಲ್​ನಲ್ಲಿ ಎಲ್ಲ ತಳಿಯ ಸಾಕು ನಾಯಿಗಳಿದ್ದು, ಅವುಗಳನ್ನು ಅತ್ಯಂತ ಪ್ರೀತಿಯಿಂದ ನೋಡಿಕೊಳ್ಳುತ್ತೇವೆ. ಸಮಯಕ್ಕೆ ಸರಿಯಾಗಿ ಆಹಾರ ನೀಡುತ್ತೇವೆ. ಅವುಗಳ ಸ್ವಚ್ಛತೆಯನ್ನೂ ನೋಡಿಕೊಳ್ಳುತ್ತೇವೆ. ನಾಯಿಗೆ ಸಂಬಂಧಿಸಿದ ಎಲ್ಲ ಮಾಹಿತಿಯನ್ನು ಅವುಗಳ ಮಾಲೀಕರಿಂದ ಪಡೆದು ಅವುಗಳನ್ನು ನೋಡಿಕೊಳ್ಳುತ್ತೇವೆ.

ಅವುಗಳ ದಿನಚರಿಯ ಆಧಾರದ ಮೇಲೆ ಕಾಳಜಿ ವಹಿಸಲಾಗುತ್ತದೆ. ನಾಯಿ ಅನಾರೋಗ್ಯಕ್ಕೆ ಒಳಗಾಗಿದ್ದರೆ, ನಾವು ಚಿಕಿತ್ಸೆ ನೀಡುತ್ತೇವೆ. ನಾಯಿಗೆ ಸಂಬಂಧಿಸಿದ ಎಲ್ಲಾ ವಸ್ತುಗಳು ನಮ್ಮ ಬಳಿ ಲಭ್ಯವಿದೆ. ನಾಯಿ ಸಾಕಲು ದಿನಕ್ಕೆ 400 ರೂಪಾಯಿ ಶುಲ್ಕ ವಿಧಿಸುತ್ತೇವೆ ಎಂದು ಡಾಗ್​ ಹಾಸ್ಟೆಲ್​ನ ಕೇರ್​ ಟೇಕರ್​ಗಳು ತಿಳಿಸಿದ್ದಾರೆ. ಇನ್ನೂ ಈ ಡಾಗ್​ ಹಾಸ್ಟೆಲ್​ಗಳಿಂದ ನಮಗೂ ಉಪಯೋಗಕರವಾಗಿದೆ ಎಂದು ಸ್ಥಳೀಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.