ಬೇಗುಸರಾಯ್(ಬಿಹಾರ): ಬೀದಿ ನಾಯಿಗಳ ದಾಳಿಯಿಂದ ತಪ್ಪಿಸಿಕೊಳ್ಳಲು ಹೋಗಿ ಮೂವರು ಬಾವಿಯಲ್ಲಿ ಬಿದ್ದಿರುವ ಘಟನೆ ಬಿಹಾರದ ಬೇಗುಸರಾಯ್ನಲ್ಲಿ ನಡೆದಿದೆ. ಇದರಲ್ಲಿ ಓರ್ವ ಬಾಲಕಿ ಸಾವನ್ನಪ್ಪಿದ್ದಾಳೆ. ಇಬ್ಬರನ್ನ ರಕ್ಷಣೆ ಮಾಡಲಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ.
ಬೇಗುಸರಾಯ್ನ ಮೂವರು ಅಪ್ರಾಪ್ತರು ಜಮೀನಿಗೆ ಹೂವು ಕೀಳಲು ಹೋಗಿದ್ದರು. ಈ ವೇಳೆ, ಅವರ ಮೇಲೆ ಬೀದಿ ನಾಯಿಗಳ ಹಿಂಡು ಏಕಾಏಕಿ ದಾಳಿ ನಡೆಸಿದೆ. ಜೀವ ಭಯದಲ್ಲಿ ಮೂವರು ಓಡಾಡಿದ್ದು, ಈ ವೇಳೆ ಬಾವಿಯಲ್ಲಿ ಬಿದ್ದಿದ್ದಾರೆ. ಒಬ್ಬ ಬಾಲಕಿ ಸಾವನ್ನಪ್ಪಿದ್ದು, ಇಬ್ಬರನ್ನ ರಕ್ಷಣೆ ಮಾಡಲಾಗಿದೆ. ಘಟನೆಗೆ ಸಂಬಂಧಿಸಿದಂತೆ ನವಕೋಠಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪೊಲೀಸರು ನೀಡಿರುವ ಮಾಹಿತಿ ಪ್ರಕಾರ ಮೂವರು ಪೂಜೆಗೆ ಹೂ ಕೀಳಲು ಇಂದು ಬೆಳಗ್ಗೆ ತೆರಳಿದ್ದರು. ಹೂ ಕೀಳುತ್ತಿದ್ದಾಗ ಮೂವರ ಮೇಲೆ ನಾಯಿಗಳ ಹಿಂಡು ದಾಳಿ ನಡೆಸಿವೆ. ನಂತರ ಪ್ರಾಣ ಉಳಿಸಿಕೊಳ್ಳಲು ಅಲ್ಲಿ ಇಲ್ಲಿ ಓಡಲು ಆರಂಭಿಸಿದ್ದು, ಬಾವಿಯಲ್ಲಿ ಬಿದ್ದಿದ್ದಾರೆ. ಮಕ್ಕಳು ಬಾವಿಗೆ ಬಿದ್ದಿರುವುದನ್ನು ಸ್ಥಳೀಯರು ನೋಡಿದ್ದಾರೆ. ಬಳಿಕ ಬಾವಿಗೆ ಇಳಿದು ಅವರ ರಕ್ಷಣೆಗೆ ಮುಂದಾಗಿದ್ದಾರೆ. ಅಷ್ಟರಲ್ಲಿ ಓರ್ವ ಬಾಲಕಿ ಪ್ರಾಣ ಕಳೆದುಕೊಂಡಿದ್ದಾಳೆ. ಇಬ್ಬರಿಗೆ ಅಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ.
ಇದನ್ನೂ ಓದಿರಿ: ಆಧಾರ್ ಜೊತೆ ವೋಟರ್ ಐಡಿ ಲಿಂಕ್: ಹೈಕೋರ್ಟ್ಗೆ ಹೋಗುವಂತೆ ಸುರ್ಜೆವಾಲ್ಗೆ ಸುಪ್ರೀಂ ಸೂಚನೆ
ನೀಲಂ (15), ರೀಟಾ(12) ಮತ್ತು ರಾಮಪ್ರೀತ್ ಹೂವು ಕೀಳಲು ಹೋಗಿದ್ದರು. ಇದರಲ್ಲಿ ನೀಲಂ ಮೃತಪಟ್ಟಿದ್ದು, ರಾಮಪ್ರೀತ್ ಸ್ಥಿತಿ ಚಿಂತಾಜನಕವಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದರು.