ಪಶ್ಚಿಮ ಗೋದಾವರಿ(ಆಂಧ್ರಪ್ರದೇಶ): ಇಲ್ಲಿನ ಚೆರುಕುವಾಡದಲ್ಲಿ ನಾಯಿ ದಾಳಿಗೆ ಒಳಗಾಗಿ ಗಾಯಗೊಂಡಿದ್ದ ಕೋತಿಗೆ ಚಿಕಿತ್ಸೆ ನೀಡುತ್ತಿದ್ದ ವೇಳೆ ವೈದ್ಯರು ಅದರ ಭುಜದಲ್ಲಿ ಗುಂಡಿನಂತಿರುವ ವಸ್ತುವನ್ನು ಪತ್ತೆ ಮಾಡಿದ್ದಾರೆ.
ಚೆರುಕುವಾಡದಲ್ಲಿ ಕೋತಿಯ ಮೇಲೆ ನಾಯಿಗಳು ದಾಳಿ ನಡೆಸಿವೆ. ಪರಿಣಾಮ ತೀವ್ರವಾಗಿ ಗಾಯಗೊಂಡಿದ್ದ ಕೋತಿಯನ್ನು ಭೀಮಾವರಂನ ಪಶು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಚಿಕಿತ್ಸೆ ನೀಡುತ್ತಿರುವಾಗ ವೈದ್ಯ ಸಾಯಿತೇಜಾ ಎಂಬುವವರು ಕೋತಿಯ ಭುಜದಲ್ಲಿ ಗುಂಡಿನ ಗಾಯವನ್ನು ಗಮನಿಸಿದ್ದಾರೆ. ಕೂಡಲೇ ಕೋತಿಯ ದೇಹದಿಂದ ಗುಂಡನ್ನು ಹೊರತೆಗೆದು ಚಿಕಿತ್ಸೆ ನೀಡಿದ್ದಾರೆ.
ಪೊಲೀಸರಿಂದ ವಿಚಾರಣೆ: ಬುಲೆಟ್‌ಗೆ ಸಂಬಂಧಿಸಿದ ದೃಶ್ಯಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ಪೊಲೀಸರು ಆಸ್ಪತ್ರೆಗೆ ಬಂದು ಅದನ್ನು ಪರಿಶೀಲಿಸಿದರು. ನಂತರ ಇದು ಆಕ್ವಾ ಕೊಳಗಳಲ್ಲಿ ಪಕ್ಷಿಗಳನ್ನು ಬೇಟೆಯಾಡಲು ಬಳಸುವ ಫಿಲೆಟ್ ಎಂಬುದನ್ನು ಅವರು ಖಾತ್ರಿಪಡಿಸಿದ್ದಾರೆ.
ಓದಿ: ಕ್ಯಾಪ್ಸುಲ್ ನುಂಗಿ ಸ್ಮಗ್ಲಿಂಗ್.. ಹೊಟ್ಟೆಯಲ್ಲಿದ್ದಿದ್ದು ₹9 ಕೋಟಿ ಮೌಲ್ಯದ ಹೆರಾಯಿನ್!