ETV Bharat / bharat

ಚಿಕಿತ್ಸೆ ನೀಡ್ತಿದ್ದ ವೈದ್ಯೆಯನ್ನೇ ಚಾಕುವಿನಿಂದ ಇರಿದು ಕೊಂದ ಕೇಸ್​ ಆರೋಪಿ!

ಚಿಕಿತ್ಸೆ ನೀಡುತ್ತಿದ್ದ ವೈದ್ಯೆಯ ಮೇಲೆ ಪ್ರಕರಣದ ಆರೋಪಿಯೊಬ್ಬ ಚಿಕಿತ್ಸೆಗೆ ಬಳಸುವ ಸರ್ಜಿಕಲ್​ ಬ್ಲೇಡ್​ನಿಂದ ಹಲ್ಲೆ ಮಾಡಿ ಕೊಲೆ ಮಾಡಿದ ಘಟನೆ ಕೇರಳದಲ್ಲಿ ಇಂದು ನಡೆದಿದೆ.

ವೈದ್ಯೆಯನ್ನೇ ಚಾಕುವಿನಿಂದ ಇರಿದು ಕೊಂದ ರೋಗಿ
ವೈದ್ಯೆಯನ್ನೇ ಚಾಕುವಿನಿಂದ ಇರಿದು ಕೊಂದ ರೋಗಿ
author img

By

Published : May 10, 2023, 11:13 AM IST

Updated : May 10, 2023, 1:07 PM IST

ತಿರುವನಂತಪುರಂ(ಕೇರಳ): ಪ್ರಕರಣದಲ್ಲಿ ಆರೋಪಿಯಾಗಿದ್ದ ವ್ಯಕ್ತಿಯನ್ನು ಬಂಧಿಸಿದ ಪೊಲೀಸರು ವೈದ್ಯಕೀಯ ತಪಾಸಣೆಗೆ ಆಸ್ಪತ್ರೆಗೆ ಕರೆತಂದ ವೇಳೆ ದಾಳಿ ನಡೆಸಿದ ಆತ ಯುವ ವೈದ್ಯೆಯನ್ನು ಸರ್ಜಿಕಲ್​ ಬ್ಲೇಡ್​ನಿಂದ ಹತ್ಯೆ ಮಾಡಿದ ಆಘಾತಕಾರಿ ಘಟನೆ ಕೇರಳದಲ್ಲಿ ಬುಧವಾರ ನಡೆದಿದೆ.

ಕೊಟ್ಟಾಯಂ ಮೂಲದ ಡಾ.ವಂದನಾ ದಾಸ್ ಮೃತರು. ಸಂದೀಪ್ ಕೊಲೆಗೈದ ಆರೋಪಿ. ಇಲ್ಲಿನ ಕೊಟ್ಟಾರಕರದ ಆಸ್ಪತ್ರೆಗೆ ಇಂದು ಮುಂಜಾನೆ ಗಾಯಗೊಂಡಿದ್ದ ಆರೋಪಿ ಸಂದೀಪ್​ನನ್ನು ಪೊಲೀಸರು ತಪಾಸಣೆಗೆ ಕರೆ ತಂದಿದ್ದರು. 22 ವರ್ಷದ ಮಹಿಳಾ ಸರ್ಜನ್​ ವಂದನಾ ಗಾಯಗೊಂಡ ಆರೋಪಿಗೆ ಚಿಕಿತ್ಸೆ ನೀಡುತ್ತಿದ್ದರು. ಈ ವೇಳೆ ಇದ್ದಕ್ಕಿದ್ದಂತೆ ಮಹಿಳಾ ವೈದ್ಯೆಯ ಮೇಲೆ ಆತ ಹಲ್ಲೆ ಮಾಡಿದ್ದಾನೆ.

  • #WATCH | Thiruvananthapuram | Kerala Governor Arif Mohammed Khan and CM Pinarayi Vijayan arrive at KIMS hospital where the body of Dr. Vandana Das is kept.

    She was stabbed by an accused who was brought for a medical check-up by Police at Kottarakkara Taluk Hospital and died… pic.twitter.com/BgRUB1WDMC

    — ANI (@ANI) May 10, 2023 " class="align-text-top noRightClick twitterSection" data=" ">

ಇದನ್ನೂ ಓದಿ:ಮಣಿಪುರ ಹಿಂಸಾಚಾರವನ್ನು ಮ್ಯಾನ್ಮಾರ್ ಮೂಲದ ಪಿಡಿಎಫ್ ಬೆಂಬಲಿಸಿದೆ: ಎಂಪಿಸಿಸಿ ಅಧ್ಯಕ್ಷ ಆರೋಪ

ಸರ್ಜಿಕಲ್​ ಬ್ಲೇಡ್​, ಚಿಕಿತ್ಸೆಗೆ ಬಳಸುವ ಸಲಕರಣೆಗಳಿಂದ ದಾಳಿ ಮಾಡಿದ್ದಾನೆ. ಇದರಿಂದ ವೈದ್ಯೆ ಗಂಭೀರವಾಗಿ ಗಾಯಗೊಂಡಿದ್ದರು. ತಕ್ಷಣ ಅವರಿಗೆ ತುರ್ತು ಚಿಕಿತ್ಸೆ ನೀಡಲಾಯಿತು. ಬಳಿಕ ಪ್ರಮುಖ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಆದರೆ, ತೀವ್ರ ರಕ್ತಸ್ರಾವದಿಂದ ವೈದ್ಯೆ ಸಾವನ್ನಪ್ಪಿದ್ದಾರೆ.

ಪ್ರತ್ಯಕ್ಷದರ್ಶಿಗಳ ಪ್ರಕಾರ, ಕೊಲ್ಲಂ ಜಿಲ್ಲೆಯ ಪೂಯಪಲ್ಲಿಯ ಶಾಲಾ ಶಿಕ್ಷಕನಾಗಿರುವ ಸಂದೀಪ್ ಮನೆಯಲ್ಲಿ ಗಲಾಟೆ ನಡೆದಿದೆ. ಈ ವೇಳೆ ಸಂದೀಪ್​ ಗಾಯಗೊಂಡಿದ್ದ. ನಂತರ ಪೊಲೀಸರು ಆತನನ್ನು ಆಸ್ಪತ್ರೆಗೆ ಕರೆತಂದಿದ್ದರು. ವ್ಯಕ್ತಿಗೆ ಮಹಿಳಾ ಸರ್ಜನ್​ ಚಿಕಿತ್ಸೆ ನೀಡುತ್ತಿದ್ದರು. ಈ ವೇಳೆ ಆರೋಪಿ ಸಂದೀಪ್​ ವೈದ್ಯೆಯನ್ನು ಸರ್ಜಿಕಲ್​ ಬ್ಲೇಡ್​, ಚಾಕುವಿನಿಂದ ಇರಿದ ಎಂದು ಮಾಹಿತಿ ನೀಡಿದರು.

ದಾಳಿಯಲ್ಲಿ ವೈದ್ಯೆಯ ಕುತ್ತಿಗೆಗೆ ತೀವ್ರ ಗಾಯವಾಗಿತ್ತು. ದಾಳಿಯಲ್ಲಿ ಓರ್ವ ವೈದ್ಯ, ಓರ್ವ ಪೊಲೀಸ್ ಅಧಿಕಾರಿ ಸೇರಿದಂತೆ ಐವರಿಗೆ ಚೂರಿ ಇರಿತವಾಗಿದೆ.

ಇದನ್ನು ಓದಿ: ಇ ಸಿಗರೇಟ್​ಗಳ ಬಳಕೆ ಉತ್ತೇಜನ ಬೇಡ: ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ

ಘಟನೆಗಳಿಗೆ ಬ್ರೇಕ್​ ಇಲ್ಲ: ವೈದ್ಯರ ಮೇಲೆ ಹಲ್ಲೆಯಂತಹ ಘಟನೆಗಳು ಪದೇ ಪದೇ ನಡೆಯುತ್ತಿದ್ದರೂ, ತನಿಖೆ ನಡೆಸಿ ಯಾವುದೇ ಕ್ರಮ ಕೈಗೊಳ್ಳದಿರುವುದು ಬೇಸರದ ಸಂಗತಿಯಾಗಿದೆ. ಇಂತಹ ಪ್ರಕರಣಗಳಲ್ಲಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ವೈದ್ಯರು ಆಗ್ರಹಿಸಿದರು.

ಹಲ್ಲೆಗೊಳಗಾದ ಮಹಿಳಾ ಸರ್ಜನ್​ರಿಗೆ ತುರ್ತು ಚಿಕಿತ್ಸೆ ನೀಡಿ, ಬೇರೆ ಆಸ್ಪತ್ರೆಗೆ ಸೇರಿಸಲಾಯಿತಾದರೂ, ಬದುಕುಳಿಯಲಿಲ್ಲ ಎಂದು ಭಾರತೀಯ ವೈದ್ಯಕೀಯ ಸಂಘದ ಹಿರಿಯ ಪದಾಧಿಕಾರಿಯೊಬ್ಬರು ತಿಳಿಸಿದರು.

ವೈದ್ಯೆಯ ಮೇಲೆ ದಾಳಿ ನಡೆದಾಗ ಆಸ್ಪತ್ರೆಯಲ್ಲಿ ಕೆಲ ಪೊಲೀಸ್ ಅಧಿಕಾರಿಗಳು ಇದ್ದರು. ಈ ವೇಳೆಯೇ ಘಟನೆ ನಡೆದಿರುವುದು ಅಚ್ಚರಿ ಉಂಟು ಮಾಡಿದೆ. ಸುದ್ದಿ ಹರಡುತ್ತಿದ್ದಂತೆ ನೂರಾರು ವೈದ್ಯರು ಆಸ್ಪತ್ರೆಗೆ ಧಾವಿಸಿ, ಮುಷ್ಕರ ನಡೆಸುತ್ತಿದ್ದಾರೆ.

ಇಂತಹ ಘಟನೆಗಳ ವಿರುದ್ಧ ಯಾವುದೇ ಕಠಿಣ ಕ್ರಮ ಕೈಗೊಳ್ಳುತ್ತಿಲ್ಲ. ಹೀಗಾಗಿ ಮುಷ್ಕರ ನಡೆಸುತ್ತಿದ್ದೇವೆ. ಪೊಳ್ಳು ಭರವಸೆ ನೀಡದೆ ಮೊದಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾನಿರತ ವೈದ್ಯರು ಆಗ್ರಹಿಸಿದರು. ಸರ್ಕಾರ ಕಠಿಣ ಕ್ರಮ ತೆಗೆದುಕೊಳ್ಳದಿದ್ದರೆ ಪ್ರತಿಭಟನೆ ತೀವ್ರಗೊಳಿಸುವುದಾಗಿ ವೈದ್ಯರು ಎಚ್ಚರಿಕೆ ಕೂಡಾ ನೀಡಿದ್ದಾರೆ.

ರಾಜ್ಯಪಾಲ, ಸಿಎಂ ಭೇಟಿ: ಆರೋಪಿಯೊಬ್ಬನಿಂದ ಹತ್ಯೆಯಾದ ಯುವ ವೈದ್ಯೆ ವಂದನಾ ಅವರ ಪಾರ್ಥಿವ ಶರೀರ ಇಡಲಾದ ಕಿಮ್ಸ್​ ಆಸ್ಪತ್ರೆಗೆ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಮತ್ತು ಸಿಎಂ ಪಿಣರಾಯಿ ವಿಜಯನ್ ಅವರು ಆಗಮಿಸಿ ಅಂತಿಮ ದರ್ಶನ ಪಡೆದರು.

Last Updated : May 10, 2023, 1:07 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.