ETV Bharat / bharat

ಅವಳಿ ಮಕ್ಕಳೊಂದಿಗೆ ಆಟವಾಡುತ್ತಲೇ ಪ್ರಾಣಬಿಟ್ಟ ತಂದೆ..ಅರಿವಿಲ್ಲದೇ ಮೃತ ತಂದೆಯ ಜೊತೆ ಆಟವಾಡುತ್ತಿದ್ದ ಕಂದಮ್ಮಗಳು!

author img

By

Published : Jul 30, 2022, 12:11 PM IST

ಉತ್ತರ ಪ್ರದೇಶದ ಲಖಿಂಪುರ ಖೇರಿಯಲ್ಲಿ ಆಘಾತಕಾರಿ ಪ್ರಕರಣವೊಂದು ಬೆಳಕಿಗೆ ಬಂದಿದೆ. ಇಲ್ಲಿ ವೈದ್ಯರೊಬ್ಬರು ತಮ್ಮ ಹೆಣ್ಣು ಮಕ್ಕಳೊಂದಿಗೆ ಆಟವಾಡುತ್ತಿದ್ದಾಗ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಅಪ್ಪನ ಸಾವಿನ ಅರಿವಿಲ್ಲದೇ ಮುಗ್ಧ ಹೆಣ್ಣುಮಕ್ಕಳು ಮೃತ ತಂದೆಯೊಂದಿಗೆ ಆಟವಾಡುತ್ತಿರುವ ಘಟನೆ ಮನಕಲುವಂತಿದೆ.

Lakhimpur Kheri latest news  twin daughters dead father  Doctor dies of heart attack at home  Daughters applying vermilion to dead father  ಉತ್ತರಪ್ರದೇಶದಲ್ಲಿ ಅವಳಿ ಮಕ್ಕಳೊಂದಿಗೆ ಆಟವಾಡುತ್ತಲೇ ಪ್ರಾಣಬಿಟ್ಟ ತಂದೆ  ಲಖಿಂಪುರಿ ಖೇರಿಯಲ್ಲಿ ಅರಿವಿಲ್ಲದೇ ಮೃತ ತಂದೆಯ ಜೊತೆ ಆಟವಾಡುತ್ತಿದ್ದ ಕಂದಮ್ಮಗಳು  ಉತ್ತರಪ್ರದೇಶದಲ್ಲಿ ಮಕ್ಕಳೊಂದಿಗೆ ಆಟವಾಡುತ್ತಲೇ ಪ್ರಾಣಬಿಟ್ಟ ವೈದ್ಯ  ಉತ್ತರಪ್ರದೇಶ ಸುದ್ದಿ
ಅವಳಿ ಮಕ್ಕಳೊಂದಿಗೆ ಆಟವಾಡುತ್ತಲೇ ಪ್ರಾಣಬಿಟ್ಟ ತಂದೆ

ಲಖಿಂಪುರ ಖೇರಿ(ಉತ್ತರಪ್ರದೇಶ): ನಗರದಲ್ಲಿ ಮನಕಲುಕುವ ಘಟನೆಯೊಂದು ಬೆಳಕಿಗೆ ಬಂದಿದೆ. ವೈದ್ಯನೊಬ್ಬ ತನ್ನ ಮಕ್ಕಳೊಂದಿಗೆ ಆಟವಾಡುತ್ತಲೇ ಪ್ರಾಣಬಿಟ್ಟಿದ್ದಾರೆ. ಇದರ ಅರಿವಿಲ್ಲದೇ ಅವಳಿ ಮಕ್ಕಳಿಬ್ಬರು ತನ್ನ ಮೃತ ತಂದೆಗೆ ಕುಂಕುಮ ಹಚ್ಚುವುದು, ಮೈಮೇಲೆ ಕುಳಿತುಕೊಳ್ಳುವುದು ಹೀಗೆ ಆಟವಾಡಿರುವ ಘಟನೆ ಕಂಡು ಬಂದಿದೆ.

ಏನಿದು ಪ್ರಕರಣ: ವಾರಾಣಸಿಯ ನಿವಾಸಿ ಡಾ.ರಾಜೇಶ್ ಮೋಹನ್ ಗುಪ್ತಾ ಅವರು ತಮ್ಮ ಪತ್ನಿ ಮತ್ತು ಇಬ್ಬರು ಅವಳಿ ಹೆಣ್ಣು ಮಕ್ಕಳೊಂದಿಗೆ ಸುಮಾರು 5 ವರ್ಷಗಳಿಂದ ಇಲ್ಲಿನ ಕಾಶಿನಗರದಲ್ಲಿ ವಾಸಿಸುತ್ತಿದ್ದರು. ಅವರ ಪತ್ನಿ ವೀಣಾ ಗುಪ್ತಾ ಕೂಡ ವೃತ್ತಿಯಲ್ಲಿ ವೈದ್ಯೆ. ಇಬ್ಬರೂ ಸರ್ಕಾರಿ ವೈದ್ಯರು. ಮಾಧ್ಯಮ ವರದಿಗಳ ಪ್ರಕಾರ, ಡಾ. ರಾಜೇಶ್ ಅವರನ್ನು ಬಾಜುಡಿಹಾ ಗ್ರಾಮದ ಪಟ್ಟಣದಲ್ಲಿ ನಿಯೋಜಿಸಲಾಗಿದ್ದು, ಅವರ ಪತ್ನಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ (CHC) ನಿಯೋಜಿಸಲ್ಪಟ್ಟಿದ್ದಾರೆ.

ಜುಲೈ 26ರಂದು ಎಂದಿನಂತೆ ಕರ್ತವ್ಯಕ್ಕೆ ಎಂದು ಮನೆಯಿಂದ ಹೊರ ಹೋಗಿದ್ದೆ. ವಾಪಸ್​ ಆದಾಗ ಮನೆಯ ಬಾಗಿಲು ಮುಚ್ಚಿರುವುದನ್ನು ಕಂಡು ಪತಿಗೆ ಹಲವಾರು ಬಾರಿ ಕರೆ ಮಾಡಿದೆ. ಆದರೂ ಯಾವುದೇ ಉತ್ತರ ಸಿಗಲಿಲ್ಲ. ಕೂಡಲೇ ನೆರೆಹೊರೆಯವರ ಸಹಾಯ ಪಡೆದು ಬಾಗಿಲು ಒಡೆದು ಒಳಗೆ ಹೋದಾಗ ಪತಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದನ್ನು ಕಂಡು ಎಲ್ಲರೂ ದಿಗ್ಭ್ರಮೆಗೊಂಡೆವು.

ಗಂಡನ ಶವದ ಮೇಲೆ ಹೆಣ್ಣುಮಕ್ಕಳಿಬ್ಬರೂ ಸಿಂಧೂರದಿಂದ ಆಟವಾಡುತ್ತಿದ್ದರು. ತಮ್ಮ ತಂದೆ ತಮ್ಮನ್ನು ಬಿಟ್ಟು ಶಾಶ್ವತವಾಗಿ ಹೋದರು ಎಂಬುದು ಹೆಣ್ಣುಮಕ್ಕಳಿಗೆ ತಿಳಿದಿರಲಿಲ್ಲ. ನಾನು ಸಿಪಿಆರ್​ ಮೂಲಕ ನನ್ನ ಗಂಡನನ್ನು ಬದುಕಿಸಲು ಪ್ರಯತ್ನಿಸಿದೆ. ಆದರೂ ಅದು ಸಾಧ್ಯವಾಗಲಿಲ್ಲ ಎಂದು ಮೃತನ ಪತ್ನಿ ವೀಣಾ ಹೇಳಿ ದುಃಖಿತರಾದರು.

ಈ ಘಟನೆ ಕುರಿತು ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್ ಆಗ್ತಿದೆ.

ಓದಿ: ಸರಕು ಸಾಗಾಣೆ ರೀತಿ ತಳ್ಳುಗಾಡಿಯಲ್ಲಿ ಶವ ಸಾಗಾಟ: ಅಥಣಿಯಲ್ಲಿ ಮನಕಲುಕುವ ದೃಶ್ಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.