ಸೇಲಂ/ತಮಿಳುನಾಡು: ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಪಕ್ಷವನ್ನು "ಹಿಂದೂ ವಿರೋಧಿ" ಎಂದು ಕರೆದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ, ಎಂಕೆ ಸ್ಟಾಲಿನ್ ಅವರ ಪಕ್ಷವನ್ನು ಸೋಲಿಸುವಂತೆ ಜನರಲ್ಲಿ ಮನವಿ ಮಾಡಿದ್ದಾರೆ.
ಇದೇ ವೇಳೆ ಬಿಜೆಪಿ ಮಾತ್ರ ಭಾರತದ ಎಲ್ಲಾ ಪ್ರಾದೇಶಿಕ ಭಾಷೆಗಳನ್ನು ಗೌರವಿಸುತ್ತದೆ ಮತ್ತು ಅವುಗಳ ಅಭಿವೃದ್ಧಿಯನ್ನು ಉತ್ತೇಜಿಸುತ್ತದೆ ಎಂದ್ರು. ಡಿಎಂಕೆ ಪಕ್ಷ ಮತ್ತು ಅದರ ಸಿದ್ಧಾಂತಗಳು ಹಿಂದುತ್ವ ವಿರೋಧಿಯಾಗಿವೆ ಎಂದು ತೇಜಸ್ವಿ ಸೂರ್ಯ ಹೇಳಿದ್ರು.
ದೇಶದಲ್ಲಿ ಅತಿ ಹೆಚ್ಚು ದೇವಾಲಯಗಳನ್ನು ಹೊಂದಿರುವ ಪವಿತ್ರ ಭೂಮಿ ಇದಾಗಿದೆ. ತಮಿಳುನಾಡಿನ ಪ್ರತಿ ಜಾಗ ಸಹ ಪವಿತ್ರವಾದುದು, ಆದರೆ ಡಿಎಂಕೆ ಹಿಂದೂ ವಿರೋಧಿಯಾಗಿರುವುದರಿಂದ ನಾವು ಅದನ್ನು ಸೋಲಿಸಬೇಕು. ಸ್ಟಾಲಿನ್ ಪಕ್ಷವನ್ನು ಸೋಲಿಸಿ ಎಂದು ಬಿಜೆವೈಎಂ ರಾಜ್ಯ ಸಮಾವೇಶದಲ್ಲಿ ಸಂಸದ ತೇಜಸ್ವಿ ಸೂರ್ಯ ಹೇಳಿದರು. ತಮಿಳು ಭಾಷೆ ಬದುಕಬೇಕಾದರೆ ಹಿಂದುತ್ವ ಗೆಲ್ಲಬೇಕು. ಕನ್ನಡ ಗೆಲ್ಲಬೇಕಾದರೆ ಹಿಂದುತ್ವ ಗೆಲ್ಲಬೇಕು ಎಂದು ಬಿಜೆಪಿ ಯುವ ಮೋರ್ಚಾ ಮುಖ್ಯಸ್ಥ ತೇಜಸ್ವಿ ಸೂರ್ಯ ಹೇಳಿದ್ರು. ಡಿಎಂಕೆಯದು ಕುಟುಂಬ ಪಕ್ಷವಾದರೆ ಬಿಜೆಪಿ ಪಕ್ಷವೇ ಒಂದು ಕುಟುಂಬ ಎಂದ್ರು.