ETV Bharat / bharat

ಮಾಜಿ ರಾಜ್ಯಸಭಾ ಸದಸ್ಯನ ಉಸಿರುಗಟ್ಟಿಸಿ ಕೊಲೆ: ಹಣಕ್ಕಾಗಿ ಅಳಿಯನಿಂದ ಕೃತ್ಯ - ಹಣದ ವಿಚಾರವಾಗಿ ಕೊಲೆ

ತಮಿಳುನಾಡಿನಲ್ಲಿ ಹಿರಿಯ ರಾಜಕಾರಣಿ ಮಸ್ತಾನ್ ಸಾವಿನ ರಹಸ್ಯ ಬಯಲಾಗಿದೆ. ಕಾರಿನಲ್ಲಿ ಸ್ವತಃ ಅವರ ಸಂಬಂಧಿಯೇ ಉಸಿರುಗಟ್ಟಿಸಿ ಕೊಲೆ ಮಾಡಿರುವ ಮಾಹಿತಿಯನ್ನು ಪೊಲೀಸರು ಹೊರ ಹಾಕಿದ್ಧಾರೆ

dmk-ex-rajya-sabha-mp-masthan-murdered-by-his-son-in-law
ಮಾಜಿ ರಾಜ್ಯಸಭಾ ಸದಸ್ಯನ ಉಸಿರುಗಟ್ಟಿಸಿ ಕೊಲೆ: ಹಣಕ್ಕಾಗಿ ಅಳಿಯನಿಂದ ಕೃತ್ಯ
author img

By

Published : Dec 30, 2022, 7:01 PM IST

ಚನ್ನೈ (ತಮಿಳುನಾಡು): ತಮಿಳುನಾಡಿನ ಮಾಜಿ ರಾಜಸಭಾ ಸದಸ್ಯ ಮಸ್ತಾನ್ (66) ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ. ಅವರ ಸಾವಿನ ಒಂದು ವಾರದ ನಂತರ ಇದೊಂದು ಕೊಲೆ ಎಂಬುವುದನ್ನು ಪೊಲೀಸರು ಪತ್ತೆ ಹಚ್ಚಿದ್ದು, ಅಳಿಯ ಸೇರಿದಂತೆ ಐವರು ಆರೋಪಿಗಳನ್ನು ಬಂಧಿಸಲಾಗಿದೆ.

ಮಸ್ತಾನ್ ಅವರು ತಮಿಳುನಾಡಿನ ಡಿಎಂಕೆ ಪಕ್ಷದ ನಾಯಕ. ಸದ್ಯ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಉಪಾಧ್ಯಕ್ಷರಾಗಿದ್ದರು. 1995ರಿಂದ 2001ರ ಅವಧಿಯವರೆಗೆ ರಾಜ್ಯಸಭಾ ಸಂಸದರಾಗಿ ಸೇವೆ ಸಲ್ಲಿಸಿದ್ದರು. ರಾಯಪೇಟೆಯ ಬಾಲಾಜಿ ನಗರದಲ್ಲಿ ವಾಸವಿದ್ದು ಡಿ.22ರಂದು ರಾತ್ರಿ ಎಂದು ಸಂಶಯಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದರು.

ಅಂದು ನಡೆದ್ದೇನು?: ಡಿ.22ರಂದು ರಾತ್ರಿ ಮಸ್ತಾನ್ ತಿರುಚ್ಚಿಗೆ ತೆರಳುತ್ತಿದ್ದರು. ಚೆನ್ನೈ ಪಕ್ಕದ ಉರ್ಪಾಕ್ಕಂನಲ್ಲಿ ಕಾರಿನಲ್ಲಿ ಪ್ರಜ್ಞೆ ತಪ್ಪಿ ಬಿದ್ದಿದ್ದರು. ಈ ಹಿನ್ನೆಲೆಯಲ್ಲಿ ಅವರನ್ನು ಚಿಕಿತ್ಸೆಗಾಗಿ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಅಷ್ಟರಲ್ಲೇ ಅವರು ಕೊನೆಯುಸಿರೆಳೆದಿದ್ದರು. ಇದಾದ ನಂತರ ಕುಟುಂಬಸ್ಥರು ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು. ಮಸ್ತಾನ್​ ಮುಖ ಹಾಗೂ ಕೈಗಳ ಮೇಲೆ ಗಾಯಗಳಾಗಿದ್ದು, ಇದು ನಮಗೆ ಅನುಮಾನ ಮೂಡಿಸಿದೆ ಎಂದು ಪೊಲೀಸರಿಗೆ ದೂರು ನೀಡಿದ್ದರು.

ಇದನ್ನೂ ಓದಿ: ಕ್ರಿಕೆಟಿಗ ರಿಷಭ್​​​ ಪಂತ್​ ಕಾರು ಅಪಘಾತ : ವಾಹನ ಸಂಪೂರ್ಣ ಭಸ್ಮ.. ಡೆಹ್ರಾಡೂನ್​ ಆಸ್ಪತ್ರೆಗೆ ಶಿಫ್ಟ್​

ಆದ್ದರಿಂದ ಪೊಲೀಸರು ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿದ್ದರು. ಆಗ ಆತಂಕಕಾರಿ ಅಂಶ ಬಯಲಾಗಿದೆ. ಉಸಿರುಗಟ್ಟುವಿಕೆಯಿಂದ ಮಸ್ತಾನ್ ಸಾವನ್ನಪ್ಪಿದ್ದಾರೆ ಎಂದು ಮರಣೋತ್ತರ ಪರೀಕ್ಷೆ ವರದಿ ದೃಢಪಡಿಸಿದೆ. ಇದರಿಂದ ಪೊಲೀಸರು ಆಳವಾದ ತನಿಖೆ ನಡೆಸಿದ್ದು, ಅಂದು ಕಾರಿನಲ್ಲಿ ಮಸ್ತಾನ್​ ಅವರೊಂದಿಗೆ ಪ್ರಯಾಣಿಸುತ್ತಿದ್ದ ಆತನ ಕಿರಿಯ ಸಹೋದರನ ಅಳಿಯ ಇಮ್ರಾನ್ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ.

ವ್ಯತಿರಿಕ್ತ ಹೇಳಿಕೆ ನೀಡಿದ್ದ ಆರೋಪಿ: ಆರೋಪಿ ಇಮ್ರಾನ್​ನನ್ನು ವಿಚಾರಣೆ ನಡೆಸಿದಾಗ ಆತ ಪೊಲೀಸರು ಮುಂದೆ ವ್ಯತಿರಿಕ್ತ ಹೇಳಿಕೆ ನೀಡಿದ್ದಾನೆ. ಕಾರಿನಲ್ಲಿ ಬರುವಾಗ ಮಸ್ತಾನ್ ಅವರಿಗೆ ಎದೆನೋವು ಕಾಣಿಸಿಕೊಂಡಿತ್ತು ಎಂಬುದಾಗಿ ಆರೋಪಿ ಹೇಳಿದ್ದಾನೆ. ಆದರೆ, ಮರಣೋತ್ತರ ಪರೀಕ್ಷೆ ವರದಿಯಲ್ಲಿ ಉಸಿರುಗಟ್ಟಿ ಸಾವನ್ನಪ್ಪಿರುವುದು ಖಚಿತವಾಗಿತ್ತು. ಹೀಗಾಗಿಯೇ ಪೊಲೀಸರು ಮೂರು ವಿಶೇಷ ತಂಡಗಳನ್ನು ರಚಿಸಿ, ಆರೋಪಿಯನ್ನು ಹೆಚ್ಚಿನ ವಿಚಾರಣೆ ಮಾಡಿದ್ದಾರೆ. ಆಗ ಮಸ್ತಾನ್​ ಸಾವಿನ ಹಿಂದಿನ ನಿಜವಾದ ಸತ್ಯವನ್ನು ಆರೋಪಿ ಬಾಯ್ಬಿಟ್ಟಿದ್ದಾನೆ.

ಹಣದ ವಿಚಾರವಾಗಿ ಕೊಲೆ: ಇದೇ ವೇಳೆ ಇಮ್ರಾನ್ ಹಾಗೂ ಮಸ್ತಾನ್ ನಡುವೆ ಹಣದ ವಿಚಾರವಾಗಿ ಜಗಳ ನಡೆದಿತ್ತು ಎಂಬ ವಿಷಯವೂ ಸಂಬಂಧಿಕರ ಮೂಲಕ ಪೊಲೀಸರಿಗೆ ಗೊತ್ತಾಗಿದೆ. ಆದ್ದರಿಂದ ಮಸ್ತಾನ್ ಸಾವಿನ ದಿನ ಇಮ್ರಾನ್ ಫೋನ್ ಮೂಲಕ ಮಾತನಾಡಿದ್ದ ವ್ಯಕ್ತಿಗಳು ಮತ್ತು ಆತನ ಚಲನವಲನಗಳ ಕುರಿತ ಮಾಹಿತಿಯನ್ನೂ ಪೊಲೀಸರು ಸಂಗ್ರಹಿಸಿದ್ದಾರೆ.

ಇದನ್ನೂ ಓದಿ: ಅಮ್ಮನ ಪಾರ್ಥಿವ ಶರೀರಕ್ಕೆ ಹೆಗಲುಕೊಟ್ಟ ಪ್ರಧಾನಿ ಮೋದಿ: ಪಂಚಭೂತಗಳಲ್ಲಿ ಹೀರಾಬೆನ್​ ಲೀನ

ಇದೇ ಮಾಹಿತಿಯ ಆಧಾರದ ಮೇಲೆ ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ಆರೋಪಿ ಇಮ್ರಾನ್, ತಾನು ಮಸ್ತಾನ್ ಅವರಿಂದ ಲಕ್ಷಾಂತರ ರೂಪಾಯಿ ಸಾಲ ಪಡೆದುಕೊಂಡಿದ್ದೆ. ಅದನ್ನು ವಾಪಸ್ ಕೊಡುವಂತೆ ಮಸ್ತಾನ್​ ಕೇಳಿದ್ದರಿಂದ ಜಗಳ ಮಾಡಿಕೊಂಡಿದ್ದೆ. ಇದೇ ಕಾರಣದಿಂದ ನನ್ನ ಸ್ನೇಹಿತರ ನೆರವಿನಿಂದ ನಿರ್ಜನ ಪ್ರದೇಶದಲ್ಲಿ ಕಾರನ್ನು ನಿಲ್ಲಿಸಿ ಪಾರ್ಕ್ ಮಾಡಿ ಮೂಗು ಮತ್ತು ಬಾಯಿ ಬಟ್ಟೆ ತುರುಕಿ ಮಸ್ತಾನ್​ನನ್ನು ಉಸಿರುಗಟ್ಟಿಸಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಸದ್ಯ ಈ ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿ ಇಮ್ರಾನ್ ಮತ್ತು ಸುಲ್ತಾನ್ ಸೇರಿದಂತೆ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿ, ಇನ್ನೂ ಹೆಚ್ಚಿನ ತನಿಖೆಯನ್ನು ಕೈಗೊಂಡಿದ್ದಾರೆ. ಈ ಕೊಲೆಯಲ್ಲಿ ಕಾರಿನ ಚಾಲಕ ಕೂಡ ಭಾಗಿಯಾಗಿದ್ದೇನೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ಪುಣೆ: ಕಾಲೇಜು ಆವರಣದಲ್ಲಿ ಮಾರಕಾಸ್ತ್ರಗಳಿಂದ ಜನರನ್ನು ಭಯಗೊಳಿಸಲು ಯತ್ನಿಸಿದ ದುಷ್ಕರ್ಮಿಗಳು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.