ETV Bharat / bharat

ಸಾರ್ವಜನಿಕ ನಲ್ಲಿಯಲ್ಲಿ ಬಟ್ಟೆ ಒಗೆಯುವ ವಿವಾದ, ಸೇನಾ ಯೋಧ ಬಲಿ - ಕೃಷ್ಣಗಿರಿ ಜಿಲ್ಲೆಯ ವೇಲಂಪಟ್ಟಿ

ಕೃಷ್ಣಗಿರಿ ಜಿಲ್ಲೆಯ ವೇಲಂಪಟ್ಟಿ ಪಟ್ಟಣದ ಸಾರ್ವಜನಿಕ ನಲ್ಲಿ ಸ್ಥಳದಲ್ಲಿ ಬಟ್ಟೆ ಒಗೆಯುವ ವಿಚಾರ -ಯೋಧನ ಪತ್ನಿ ಹಾಗೂ ಡಿಎಂಕೆ ನಗರಸಭೆ ಸದಸ್ಯನ ನಡುವೆ ನಡೆದ ಕ್ಷುಲ್ಲಕ ಜಗಳ - ಸೇನಾ ಯೋಧನ ಬಲಿ ಪಡೆಯುವದೊಂದಿಗೆ ಅಂತ್ಯ

Krishnagiri District Velampatti Police Station
ಕೃಷ್ಣಗಿರಿ ಜಿಲ್ಲೆಯ ವೇಲಂಪಟ್ಟಿ ಪೊಲೀಸ್ ಠಾಣೆ
author img

By

Published : Feb 15, 2023, 9:42 PM IST

ಕೃಷ್ಣಗಿರಿ(ತಮಿಳುನಾಡು): ಸಾರ್ವಜನಿಕ ನಲ್ಲಿ ಸ್ಥಳದಲ್ಲಿ ಬಟ್ಟೆ ಒಗೆಯುವ ವಿಚಾರಕ್ಕೆ ಸಂಬಂಧಿಸಿದಂತೆ ಕ್ಷುಲ್ಲಕ ಜಗಳ ಶುರುವಾಗಿ ಸೇನಾ ಯೋಧನ ಬಲಿಪಡೆಯುವದೊಂದಿಗೆ ಅಂತ್ಯಗೊಂಡಿದೆ. ಜಿಲ್ಲೆಯ ವೇಲಂಪಟ್ಟಿ ಸಾರ್ವಜನಿಕ ನಲ್ಲಿ ಸ್ಥಳದಲ್ಲಿ ಬಟ್ಟೆ ಒಗೆಯುವ ವಿಚಾರಕ್ಕೆ ಸಂಬಂಧಿಸಿದಂತೆ ಯೋಧನ ಪತ್ನಿ ಹಾಗೂ ಡಿಎಂಕೆ ನಗರಸಭೆ ಸದಸ್ಯನ ನಡುವೆ ಮಾತಿನ ಚಕಮಕಿ ಬೆಳೆದು ಜಗಳ ತಾರಕ್ಕೇರಿದೆ. ಅಲ್ಲಿದ್ದವರು ರಾಜಿ ಮಾಡಿ ಕಳುಹಿಸಿದ್ದರು.

ಮತ್ತೇ ಜಗಳ ಶುರುವಾಗಿದ್ದು, ಆಕ್ರೋಶಗೊಂಡ ಡಿಎಂಕೆ ಕೌನ್ಸಿಲರ್ ಚಿನ್ನಸ್ವಾಮಿ ಹಾಗೂ ಅವರ 10ಕ್ಕೂ ಹೆಚ್ಚು ಸಂಬಂಧಿಕರು ಸೇರಿ ಸೇನಾಯೋಧನ ಮೇಲೆ ತೀವ್ರ ಹಲ್ಲೆ ನಡೆಸಿ, ಗಾಯಗೊಳಿಸಿದ್ದರು. ತಕ್ಷಣ ತೀವ್ರವಾಗಿ ಗಾಯಗೊಂಡಿದ್ದ ಸೇನಾಯೋಧನನ್ನು ಹೊಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆ ಫಲಿಸಿದ ಪರಿಣಾಮ ಸಾವಿಗೀಡಾಗಿದ್ದಾರೆ. ವೆಲ್ಲಂಪಟ್ಟಿ ಪಟ್ಟಣದ ನಿವಾಸಿ ಸೇನಾಯೋಧ ಪ್ರಭಾಕರನ್ ಹಲ್ಲೆಯಿಂದ ಸಾವಿಗೀಡಾದ ದುರ್ದೈವಿ. ವೇಲಂಪಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆರು ಆರೋಪಿಗಳನ್ನು ಬಂಧಿಸಿದ ಪೊಲೀಸರು: ಸೇನಾಯೋಧನ ಕುಟುಂಬದ ಮೇಲೆ ದಾಳಿ ಮಾಡಿ ಹಲ್ಲೆ ಮಾಡಿದ 10 ಆರೋಪಿಗಳಲ್ಲಿ ಈಗ ಆರು ಜನರನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನುಳಿದ ಡಿಎಂಕೆ ಕೌನ್ಸಿಲರ್ ಚಿನ್ನಸ್ವಾಮಿ ಸೇರಿದಂತೆ ಪುಲಿಪಾಂಡಿ ಹಾಗೂ ಕಾಳಿಯುಪ್ಪನ್ ಮೂರು ಆರೋಪಿಗಳ ಪತ್ತೆಗೆ ಸ್ಥಳೀಯ ಪೊಲೀಸರು ವಿಶೇಷ ತಂಡ ರಚಿಸಿ ಬಂಧನಕ್ಕೆ ಜಾಲ ಬೀಸಿದ್ದಾರೆ. ಕೃಷ್ಣಗಿರಿ ಜಿಲ್ಲೆಯ ಬೋಚಂಪಳ್ಳಿ ಪಕ್ಕದ ವೆಲಂಪಟ್ಟಿ ನಿವಾಸಿ ಚಿನ್ನಸ್ವಾಮಿ (50) ಅವರು ನಾಗೋಜನಹಳ್ಳಿ ಪುರಸಭೆಯ ವಾರ್ಡ್ 1ರ ಡಿಎಂಕೆ ಕೌನ್ಸಿಲರ್. ವೆಲ್ಲಂಪಟ್ಟಿ ಪಟ್ಟಣದಲ್ಲಿ ವಾಸಿಸುತ್ತಿದ್ದ ಪ್ರಭಾಕರನ್ (30) ಮತ್ತು ಅವರ ಕಿರಿಯ ಸಹೋದರ ಪ್ರಭು (29) ಇಬ್ಬರೂ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ಕ್ಷುಲ್ಲಕ ಜಗಳ ತಂದ ಅಪತ್ತು: ಯೋಧ ಪ್ರಭಾಕರನ ಪತ್ನಿ ಪ್ರಿಯಾ ಅವರು ತಮ್ಮ ಮನೆ ಎದುರಿನ ಸಾರ್ವಜನಿಕ ನಲ್ಲಿ ಬಳಿ ಬಟ್ಟೆ ಒಗೆಯುತ್ತಿದ್ದರು. ಇದನ್ನು ಪುರಸಭಾ ಸದಸ್ಯ ಚಿನ್ನಸ್ವಾಮಿ ನೋಡಿ ವಿರೋಧಿಸಿದ್ದಾನೆ.ಇದಕ್ಕಾಗಿ ಇಬ್ಬರ ನಡುವೆ ತೀವ್ರ ಮಾತಿನ ಚಕಮಕಿ ಜರುಗಿದೆ. ಆದರೂ ಯೋಧನ ಪತ್ನಿ ವಾದಿಸಿದ್ದಕ್ಕೆ ಆಕ್ರೋಶಗೊಂಡಿದ್ದ ಡಿಎಂಕೆ ಕೌನ್ಸಿಲರ್ ತಾನು ಸೇರಿ,10ಕ್ಕೂ ಹೆಚ್ಚು ಸಂಬಂಧಿಕರು ಸೇರಿಕೊಂಡು ಯೋಧನ ಕುಟುಂಬದ ಮೇಲೆ ದಾಳಿ ಮಾಡಿದ್ದಾರೆ.

ಸೇನಾ ಯೋಧ ಪ್ರಭಾಕರನ್ ಹಾಗೂ ಆತನ ಕಿರಿಯ ಸಹೋದರ ಪ್ರಭು ಮೇಲೆ ಕಲ್ಲು, ಕಬ್ಬಿಣದ ಮಾರಕ ಆಯುಧಗಳಿಂದ ಹಲ್ಲೆ ನಡೆಸಿದ್ದಾರೆ. ಈ ವೇಳೆ ಪ್ರಭಾಕರನ್​ಗೆ ತೀವ್ರ ಪೆಟ್ಟು ಬಿದ್ದ ಪರಿಣಾಮ ಸ್ಥಳದಲ್ಲೇ ಅಸ್ತವ್ಯಸ್ತಗೊಂಡಿದ್ದಾರೆ. ಇವರನ್ನು ತಕ್ಷಣ ಸಮೀಪದ ಹೊಸೂರಿನ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದೆ. ಯೋಧನ ಜೀವ ಉಳಿಸಲೂ ವೈದ್ಯರೂ ಎಷ್ಟೇ ಪ್ರಯತ್ನಿಸಿದರೂ ,ಚಿಕಿತ್ಸೆ ಫಲಕಾರಿಯಾಗದ ಪರಿಣಾಮ ಫೆಬ್ರವರಿ 15 ರಂದು ಸಾವಿಗೀಡಾಗಿದ್ದಾರೆ.

ಮಡುಗಟ್ಟಿದ ಶೋಕ: ಸೇನಾ ಯೋಧ ಸಾವಿಗೀಡಾದ ಸುದ್ದಿಯೂ ವೇಲಂಪಟ್ಟಿ ಪ್ರದೇಶ ವ್ಯಾಪ್ತಿ ನಿವಾಸಿಗಳಲ್ಲಿ ಶೋಕ ಮಡುಗಟ್ಟಿದೆ. ಸಿಂಟೆಕ್ಸ್ ಟ್ಯಾಂಕ್ ಬಳಿ ಬಟ್ಟೆ ಒಗೆಯುವ ವಿಚಾರದಲ್ಲಿ ಜಗಳವಾಗಿ ಸೇನಾ ಯೋಧ ಸಾವಿಗೀಡಾಗಿರುವುದಕ್ಕೆ ಈ ಭಾಗದ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂಓದಿ:ಫುಟ್​ಬಾಲ್ ಆಟಗಾರ್ತಿಯ ಮೇಲೆ ಅತ್ಯಾಚಾರಕ್ಕೆ ಯತ್ನ: ದೂರು ದಾಖಲು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.