ETV Bharat / bharat

ಹಳ್ಳಿಗಳ ಡಿಜಿಟಲೀಕರಣ ಇಂದಿನ ಅಗತ್ಯ: ಪ್ರಧಾನಿ ನರೇಂದ್ರ ಮೋದಿ

author img

By

Published : Feb 23, 2022, 1:34 PM IST

ಗ್ರಾಮದಲ್ಲಿ ಬ್ರಾಡ್‌ಬ್ಯಾಂಡ್ ಸಂಪರ್ಕದೊಂದಿಗೆ ಸೇವಾ ವಲಯ ವಿಸ್ತಾರವಾಗುತ್ತದೆ. ಆಗ ದೇಶದ ಸಾಮರ್ಥ್ಯವೂ ಹೆಚ್ಚಾಗುತ್ತದೆ. ಆಪ್ಟಿಕಲ್ ಫೈಬರ್ ಸಂಪರ್ಕದಲ್ಲಿ ಸಮಸ್ಯೆಗಳಿದ್ದರೆ ಅವುಗಳನ್ನು ಗುರುತಿಸಿ ಪರಿಹಾರ ಕಂಡುಕೊಳ್ಳಬೇಕು. ಆಪ್ಟಿಕಲ್ ಫೈಬರ್ ನೆಟ್‌ವರ್ಕ್‌ಗಳ ಬಳಕೆಯ ಬಗ್ಗೆ ಗ್ರಾಮೀಣ ಜನರಿಗೆ ತಿಳಿಸಬೇಕಾಗಿದೆ..

PM Modi
ಪ್ರಧಾನಿ ನರೇಂದ್ರ ಮೋದಿ

ನವದೆಹಲಿ : ಹಳ್ಳಿಗಳನ್ನು ಡಿಜಿಟಲ್​ ಮಾಡುವುದು ಬರೀ ಮಹತ್ವಾಕಾಂಕ್ಷಿಯಗಷ್ಟೇ ಉಳಿಯಬಾರದು. ಅವು ಡಿಜಿಟಲೀಕರಣಗೊಳ್ಳುವುದು ಇಂದಿನ ಅಗತ್ಯವಾಗಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.

ಕೇಂದ್ರ ಬಜೆಟ್​ ಮೇಲೆ ನಡೆದ ವರ್ಚುಯಲ್​ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬ್ರಾಡ್‌ಬ್ಯಾಂಡ್ ಸಂಪರ್ಕವು ಹಳ್ಳಿಗಳಲ್ಲಿ ಸೌಲಭ್ಯಗಳನ್ನು ಒದಗಿಸುವುದಲ್ಲದೆ, ಇದು ನುರಿತ ಯುವಕರ ದೊಡ್ಡ ಸಮೂಹವನ್ನು ರೂಪಿಸಲು ಸಹಾಯ ಮಾಡುತ್ತದೆ ಎಂದು ಮೋದಿ ಹೇಳಿದರು.

ಗ್ರಾಮದಲ್ಲಿ ಬ್ರಾಡ್‌ಬ್ಯಾಂಡ್ ಸಂಪರ್ಕದೊಂದಿಗೆ ಸೇವಾ ವಲಯ ವಿಸ್ತಾರವಾಗುತ್ತದೆ. ಆಗ ದೇಶದ ಸಾಮರ್ಥ್ಯವೂ ಹೆಚ್ಚಾಗುತ್ತದೆ. ಆಪ್ಟಿಕಲ್ ಫೈಬರ್ ಸಂಪರ್ಕದಲ್ಲಿ ಸಮಸ್ಯೆಗಳಿದ್ದರೆ ಅವುಗಳನ್ನು ಗುರುತಿಸಿ ಪರಿಹಾರ ಕಂಡುಕೊಳ್ಳಬೇಕು. ಆಪ್ಟಿಕಲ್ ಫೈಬರ್ ನೆಟ್‌ವರ್ಕ್‌ಗಳ ಬಳಕೆಯ ಬಗ್ಗೆ ಗ್ರಾಮೀಣ ಜನರಿಗೆ ತಿಳಿಸಬೇಕಾಗಿದೆ ಎಂದರು.

  • For developing villages, proper demarcation of houses & land essential. Swamitva Yojana is facilitating this. Under this, over 40 lakh property cards issued so far. For registration of land records, a national system & a unique land identification PIN will be a major facility: PM pic.twitter.com/4PShISh8fr

    — ANI (@ANI) February 23, 2022 " class="align-text-top noRightClick twitterSection" data="

For developing villages, proper demarcation of houses & land essential. Swamitva Yojana is facilitating this. Under this, over 40 lakh property cards issued so far. For registration of land records, a national system & a unique land identification PIN will be a major facility: PM pic.twitter.com/4PShISh8fr

— ANI (@ANI) February 23, 2022 ">

40 ಲಕ್ಷ ಭೂ ದಾಖಲೆ ಕಾರ್ಡ್​ ವಿತರಣೆ : ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಸ್ವಾಮಿತ್ವ ಯೋಜನೆಯಡಿ 40 ಲಕ್ಷಕ್ಕೂ ಅಧಿಕ ಅರ್ಹ ಫಲಾನುಭವಿಗಳಿಗೆ ಭೂ ದಾಖಲೆ ಕಾರ್ಡ್​ಗಳನ್ನು ವಿತರಿಸಲಾಗಿದೆ.

ವಿಶಿಷ್ಟವಾದ ಭೂ ಗುರುತಿನ ಸಂಖ್ಯೆ ಮತ್ತು ಭೂ ದಾಖಲೆ ನೋಂದಣಿ ಪ್ರಕ್ರಿಯೆಯನ್ನು ಮತ್ತಷ್ಟು ಚುರುಕುಗೊಳಿಸಲಾಗಿದೆ ಎಂದು ಪ್ರಧಾನಿ ಮೋದಿ ತಿಳಿಸಿದರು.

ಓದಿ: ಭಾರತದ ಜನಪ್ರಿಯ ಹಾಡುಗಳಿಗೆ ಲಿಪ್‌ಸಿಂಕ್‌, ಡ್ಯಾನ್ಸ್‌: ತಾಂಜಾನಿಯಾ ಪ್ರಜೆಗೆ ಅಭಿನಂದನೆ

ನವದೆಹಲಿ : ಹಳ್ಳಿಗಳನ್ನು ಡಿಜಿಟಲ್​ ಮಾಡುವುದು ಬರೀ ಮಹತ್ವಾಕಾಂಕ್ಷಿಯಗಷ್ಟೇ ಉಳಿಯಬಾರದು. ಅವು ಡಿಜಿಟಲೀಕರಣಗೊಳ್ಳುವುದು ಇಂದಿನ ಅಗತ್ಯವಾಗಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.

ಕೇಂದ್ರ ಬಜೆಟ್​ ಮೇಲೆ ನಡೆದ ವರ್ಚುಯಲ್​ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬ್ರಾಡ್‌ಬ್ಯಾಂಡ್ ಸಂಪರ್ಕವು ಹಳ್ಳಿಗಳಲ್ಲಿ ಸೌಲಭ್ಯಗಳನ್ನು ಒದಗಿಸುವುದಲ್ಲದೆ, ಇದು ನುರಿತ ಯುವಕರ ದೊಡ್ಡ ಸಮೂಹವನ್ನು ರೂಪಿಸಲು ಸಹಾಯ ಮಾಡುತ್ತದೆ ಎಂದು ಮೋದಿ ಹೇಳಿದರು.

ಗ್ರಾಮದಲ್ಲಿ ಬ್ರಾಡ್‌ಬ್ಯಾಂಡ್ ಸಂಪರ್ಕದೊಂದಿಗೆ ಸೇವಾ ವಲಯ ವಿಸ್ತಾರವಾಗುತ್ತದೆ. ಆಗ ದೇಶದ ಸಾಮರ್ಥ್ಯವೂ ಹೆಚ್ಚಾಗುತ್ತದೆ. ಆಪ್ಟಿಕಲ್ ಫೈಬರ್ ಸಂಪರ್ಕದಲ್ಲಿ ಸಮಸ್ಯೆಗಳಿದ್ದರೆ ಅವುಗಳನ್ನು ಗುರುತಿಸಿ ಪರಿಹಾರ ಕಂಡುಕೊಳ್ಳಬೇಕು. ಆಪ್ಟಿಕಲ್ ಫೈಬರ್ ನೆಟ್‌ವರ್ಕ್‌ಗಳ ಬಳಕೆಯ ಬಗ್ಗೆ ಗ್ರಾಮೀಣ ಜನರಿಗೆ ತಿಳಿಸಬೇಕಾಗಿದೆ ಎಂದರು.

  • For developing villages, proper demarcation of houses & land essential. Swamitva Yojana is facilitating this. Under this, over 40 lakh property cards issued so far. For registration of land records, a national system & a unique land identification PIN will be a major facility: PM pic.twitter.com/4PShISh8fr

    — ANI (@ANI) February 23, 2022 " class="align-text-top noRightClick twitterSection" data=" ">

40 ಲಕ್ಷ ಭೂ ದಾಖಲೆ ಕಾರ್ಡ್​ ವಿತರಣೆ : ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಸ್ವಾಮಿತ್ವ ಯೋಜನೆಯಡಿ 40 ಲಕ್ಷಕ್ಕೂ ಅಧಿಕ ಅರ್ಹ ಫಲಾನುಭವಿಗಳಿಗೆ ಭೂ ದಾಖಲೆ ಕಾರ್ಡ್​ಗಳನ್ನು ವಿತರಿಸಲಾಗಿದೆ.

ವಿಶಿಷ್ಟವಾದ ಭೂ ಗುರುತಿನ ಸಂಖ್ಯೆ ಮತ್ತು ಭೂ ದಾಖಲೆ ನೋಂದಣಿ ಪ್ರಕ್ರಿಯೆಯನ್ನು ಮತ್ತಷ್ಟು ಚುರುಕುಗೊಳಿಸಲಾಗಿದೆ ಎಂದು ಪ್ರಧಾನಿ ಮೋದಿ ತಿಳಿಸಿದರು.

ಓದಿ: ಭಾರತದ ಜನಪ್ರಿಯ ಹಾಡುಗಳಿಗೆ ಲಿಪ್‌ಸಿಂಕ್‌, ಡ್ಯಾನ್ಸ್‌: ತಾಂಜಾನಿಯಾ ಪ್ರಜೆಗೆ ಅಭಿನಂದನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.