ETV Bharat / bharat

ಬಿಹಾರದಲ್ಲೊಬ್ಬ 'ಡಿಜಿಟಲ್​ ಭಿಕ್ಷುಕ'.. ಕೊರಳಿನಲ್ಲಿ ಕ್ಯೂಆರ್​ ಕೋಡ್​ ಫಲಕ, ಕೈಯಲ್ಲಿ ಟ್ಯಾಬ್​​ ಹಿಡಿದು ಭಿಕ್ಷಾಟನೆ!! - ಬಿಹಾರದ ಬೆಟ್ಟಿಯಾ ರೈಲ್ವೆ ನಿಲ್ದಾಣದಲ್ಲಿ ಡಿಜಿಟಲ್​ ಭಿಕ್ಷಾಟನೆ

ರಾಜುವಿಗೆ ಯಾರಾದರೂ ಚಿಲ್ಲರೆ ಹಣ ಇಲ್ಲ ಎಂದರೆ ತಮ್ಮಲ್ಲಿರುವ ಕ್ಯೂ ಆರ್​ ಕೋಡ್​ ಸ್ಕ್ಯಾನ್​ ಮಾಡಿ ಹಣವನ್ನು ತಮ್ಮ ಖಾತೆಗೆ ವರ್ಗಾಯಿಸಲು ಕೇಳಿಕೊಳ್ಳುತ್ತಾರಂತೆ. ಮೊದಲಿಗಿಂತಲೂ 'ಡಿಜಿಟಲ್​ ಭಿಕ್ಷೆ'ಯಿಂದಲೇ ಗಳಿಕೆ ಹೆಚ್ಚಿದೆಯಂತೆ.

digital-beggar
ಡಿಜಿಟಲ್​ ಭಿಕ್ಷುಕ
author img

By

Published : Feb 7, 2022, 4:28 PM IST

Updated : Feb 7, 2022, 4:41 PM IST

ಬಿಹಾರ: ಭಾರತದಲ್ಲಿ ಡಿಜಿಟಲ್​ ವ್ಯವಹಾರ ಹೆಚ್ಚಾಗುತ್ತಿದೆ. ವಿದ್ಯಾವಂತರು ಮಾತ್ರವಲ್ಲದೇ, ಅಶಿಕ್ಷಿತರು ಕೂಡ ಇದಕ್ಕೆ ಒಗ್ಗಿಕೊಂಡಿದ್ದಾರೆ. ಇಲ್ಲೊಬ್ಬ ವ್ಯಕ್ತಿ ಇದೆಲ್ಲದಕ್ಕೂ ಒಂದು ಹೆಜ್ಜೆ ಮುಂದೆ ಹೋಗಿ ಭಿಕ್ಷಾಟನೆಯನ್ನೂ ಡಿಜಿಟಲೀಕರಣ ಮಾಡಿದ್ದಾನೆ. ಈ ಡಿಜಿಟಲ್​ ಭಿಕ್ಷುಕನ ಹೆಸರು ರಾಜು. ಬಿಹಾರದ ಬೆಟ್ಟಿಯಾ ರೈಲ್ವೆ ನಿಲ್ದಾಣದಲ್ಲಿ ಭಿಕ್ಷಾಟನೆ ಮಾಡುತ್ತಿರುತ್ತಾನೆ. ಕೊರಳಿನಲ್ಲಿ ಕ್ಯೂಆರ್​ ಕೋಡ್ ಫಲಕ ಮತ್ತು ಟ್ಯಾಬ್​​ ಹಿಡಿದುಕೊಂಡು ಭಿಕ್ಷಾಟನೆ ಮಾಡುತ್ತಿದ್ದಾನೆ.

ಕೊರಳಿನಲ್ಲಿ ಕ್ಯೂಆರ್​ ಕೋಡ್​ ಫಲಕ, ಕೈಯಲ್ಲಿ ಟ್ಯಾಬ್​​ ಹಿಡಿದು ಭಿಕ್ಷಾಟನೆ

ಪ್ರಧಾನಿ ಮೋದಿ, ಲಾಲು ಪ್ರಸಾದ್​​ರ ಅಭಿಮಾನಿ: ಡಿಜಿಟಲ್​ ಭಿಕ್ಷುಕ ರಾಜು ಪ್ರಧಾನಿ ನರೇಂದ್ರ ಮೋದಿ, ಬಿಹಾರದ ಮಾಜಿ ಸಿಎಂ ಲಾಲು ಪ್ರಸಾದ್​ ಯಾದವ್​ ಅವರ ಅಭಿಮಾನಿಯಾಗಿದ್ದಾರೆ. ಕೇಂದ್ರ ಸರ್ಕಾರ ಡಿಜಿಟಲ್​ ಇಂಡಿಯಾ ಘೋಷಿಸಿದ ಬಳಿಕ ಎಲ್ಲರಿಗೂ ಬ್ಯಾಂಕ್​​ ಖಾತೆ ಸಿಕ್ಕಿದ್ದರಿಂದ ನಾನು ಈ ರೀತಿ ಭಿಕ್ಷೆ ಬೇಡಲು ಸಹಾಯವಾಯಿತು ಎಂದು ರಾಜು ಹೇಳಿಕೊಂಡಿದ್ದಾರೆ.

ಬಿಹಾರದಲ್ಲೊಬ್ಬ ಡಿಜಿಟಲ್​ ಭಿಕ್ಷುಕ
ಬಿಹಾರದಲ್ಲೊಬ್ಬ ಡಿಜಿಟಲ್​ ಭಿಕ್ಷುಕ

ಅಲ್ಲದೇ, ಲಾಲು ಪ್ರಸಾದ್​ ಯಾದವ್​ ಅವರನ್ನು ರಾಜು ಅನುಕರಣೆ ಕೂಡ ಮಾಡುತ್ತಿದ್ದರಂತೆ. ಲಾಲು ಅವರ ಕಾರ್ಯಕ್ರಮಗಳು ಎಲ್ಲೇ ನಡೆದರೂ ರಾಜು ಅಲ್ಲಿ ಹಾಜರಾಗುತ್ತಿದ್ದರಂತೆ. ಈ ವಿಷಯ ತಿಳಿದ ಲಾಲು ಪ್ರಸಾದ್​ ಯಾದವ್​ ಅವರು ಎರಡು ಹೊತ್ತಿನ ಊಟಕ್ಕೆ ರೈಲ್ವೆ ಕ್ಯಾಂಟೀನ್​ನಲ್ಲಿ ಪಾಸ್​ ಮಾಡಿಸಿಕೊಟ್ಟಿದ್ದರು ಎಂದು ಡಿಜಿಟಲ್​ ಭಿಕ್ಷುಕ ರಾಜು ತಿಳಿಸಿದ್ದಾರೆ.

ಕ್ಯೂಆರ್​ ಕೋಡ್​ ಸ್ಕ್ಯಾನ್​ ಮಾಡುತ್ತಿರುವ ಜನರು

ಡಿಜಿಟಲ್​ ಕ್ಯೂಆರ್​ ಕೋಡ್​ ಪಡೆದಿದ್ದೇಗೆ?: ಕಳೆದ 30 ವರ್ಷಗಳಿಂದ ಭಿಕ್ಷಾಟನೆ ಮಾಡುತ್ತಿರುವ ರಾಜುವಿಗೆ ಜನರು 'ಚಿಲ್ಲರೆ ಇಲ್ಲ' ಎಂದು ಹೇಳಿ ಸಾಗ ಹಾಕುತ್ತಿದ್ದರಂತೆ. ಇದರಿಂದ ಹಣ ಸಿಗದೇ ತೊಂದರೆಗೀಡಾದ ರಾಜುವಿಗೆ ಈ ವೇಳೆ ಹೊಳೆದಿದ್ದೇ ಡಿಜಿಟಲ್​ ಉಪಾಯ.

ಕೊರಳಿನಲ್ಲಿ ಕ್ಯೂಆರ್​ ಕೋಡ್​ ಸ್ಕ್ಯಾನರ್​
ಕೊರಳಿನಲ್ಲಿ ಕ್ಯೂಆರ್​ ಕೋಡ್​ ಸ್ಕ್ಯಾನರ್​

ಬೆಟ್ಟಿಯಾದ ಸ್ಟೇಟ್​ ಬ್ಯಾಂಕ್​ ಆಫ್​ ಇಂಡಿಯಾದಲ್ಲಿ ಖಾತೆ ಆರಂಭಿಸಲು ಹೋದ ರಾಜುವಿಗೆ ಬ್ಯಾಂಕ್​ ಸಿಬ್ಬಂದಿ ಆಧಾರ್​, ಪ್ಯಾನ್​ ಕಾರ್ಡ್​ ಕೇಳಿದ್ದಾರೆ. ಆಧಾರ್​ ಹೊಂದಿದ್ದ ರಾಜು 6 ತಿಂಗಳ ಬಳಿಕ ಪ್ಯಾನ್​ ಕಾರ್ಡ್​ ಮಾಡಿಸಿಕೊಂಡು ಬ್ಯಾಂಕ್​ ಖಾತೆ ಪಡೆದುಕೊಂಡಿದ್ದಾರೆ. ಅಲ್ಲದೇ, ಇ-ವ್ಯಾಲೆಟ್​(ಕ್ಯೂಆರ್​ ಕೋಡ್​) ಅನ್ನೂ ಇದೇ ಶಾಖೆಯಿಂದಲೇ ಪಡೆದಿದ್ದಾರೆ.

ಡಿಜಿಟಲ್​ ಭಿಕ್ಷುಕ ರಾಜು
ಡಿಜಿಟಲ್​ ಭಿಕ್ಷುಕ ರಾಜು

ಆಗಿನಿಂದ ಬೆಟ್ಟಿಯಾ ರೈಲ್ವೆ ನಿಲ್ದಾಣ ಸೇರಿ ಹಲವೆಡೆ ಭಿಕ್ಷಾಟನೆ ಮಾಡುವಾಗ ಯಾರಾದರೂ ಚಿಲ್ಲರೆ ಹಣ ಇಲ್ಲ ಎಂದರೆ ತಮ್ಮಲ್ಲಿರುವ ಕ್ಯೂ ಆರ್​ ಕೋಡ್​ ಸ್ಕ್ಯಾನ್​ ಮಾಡಿ ಹಣವನ್ನು ತಮ್ಮ ಖಾತೆಗೆ ವರ್ಗಾಯಿಸಲು ಕೇಳಿಕೊಳ್ಳುತ್ತಾರಂತೆ. ಮೊದಲಿಗಿಂತಲೂ 'ಡಿಜಿಟಲ್​ ಭಿಕ್ಷೆ'ಯಿಂದಲೇ ಗಳಿಕೆ ಹೆಚ್ಚಿದೆ ಎಂದು ರಾಜು ತಿಳಿಸಿದ್ದಾರೆ.

ಓದಿ: ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್​ಗೆ ಟ್ವಿಟರ್​ನಲ್ಲಿ ಕೊಲೆ ಬೆದರಿಕೆ.. ಎಫ್​ಐಆರ್​ ದಾಖಲು

Last Updated : Feb 7, 2022, 4:41 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.