ETV Bharat / bharat

ಕೇವಲ 500 ರೂಪಾಯಿಯಲ್ಲಿ ಮದುವೆಯಾದ ಆರ್ಮಿ ಮೇಜರ್, ಸಿಟಿ ಮ್ಯಾಜಿಸ್ಟ್ರೇಟ್​​

author img

By

Published : Jul 15, 2021, 5:08 PM IST

ಧಾರ್ ಜಿಲ್ಲೆಯ ನಗರ ಮ್ಯಾಜಿಸ್ಟ್ರೇಟ್​ ಶಿವಾಂಗಿ ಜೋಷಿ ಮತ್ತು ಭಾರತೀಯ ಸೇನೆಯ ಮೇಜರ್ ಅನಿಕೇತ್ ಚತುರ್ವೇದಿ ಕೇವಲ 500 ರೂಪಾಯಿಯಲ್ಲಿ ಮದುವೆಯಾಗಿ ಗಮನ ಸೆಳೆದಿದ್ದಾರೆ.

dhar-city-magistrate-and-army-major-got-married-by-spending-only-500-rupees
ಕೇವಲ 500 ರೂಪಾಯಿಯಲ್ಲಿ ಮದುವೆಯಾದ ಆರ್ಮಿ ಮೇಜರ್, ಸಿಟಿ ಮ್ಯಾಜಿಸ್ಟ್ರೇಟ್​​

ಭೋಪಾಲ್(ಮಧ್ಯಪ್ರದೇಶ): ಭಾರತೀಯ ಪರಂಪರೆಯಲ್ಲಿ ತುಂಬಾ ಅದ್ಧೂರಿಯಾಗಿ ವಿವಾಹಗಳನ್ನು ನಡೆಸಿಕೊಂಡು ಬರುವುದು ರೂಢಿಯಲ್ಲಿದೆ. ಮಧ್ಯಮಾದಾಯದ ಕುಟುಂಬಗಳೂ ಕೂಡಾ ಅದ್ಧೂರಿ ವಿವಾಹಗಳತ್ತ ಒಲವು ತೋರುವುದು ಸಾಮಾನ್ಯವಾಗಿದೆ. ಆದರೆ ಇಲ್ಲೊಂದು ಜೋಡಿ ಅತ್ಯಂತ ಸರಳ ವಿವಾಹವಾಗಿ ಗಮನ ಸೆಳೆದರು.

ಮಧ್ಯಪ್ರದೇಶದ ಧಾರ್ ಜಿಲ್ಲೆಯ ನಗರ ಮ್ಯಾಜಿಸ್ಟ್ರೇಟ್​ ಶಿವಾಂಗಿ ಜೋಷಿ ಮತ್ತು ಭಾರತೀಯ ಸೇನೆಯ ಮೇಜರ್ ಅನಿಕೇತ್ ಚತುರ್ವೇದಿ ಅವರ ವಿವಾಹ ತುಂಬಾ ಸರಳವಾಗಿ ನಡೆದಿದೆ. ಕೇವಲ ಐದು ನೂರು ರೂಪಾಯಿಗಳಲ್ಲಿ ಮದುವೆಯ ಕಾರ್ಯ ಪೂರ್ಣಗೊಂಡಿದೆ.

ಮ್ಯಾಜಿಸ್ಟ್ರೇಟ್​ ಶಿವಾಂಗಿ ಜೋಷಿ ಮತ್ತು ಭಾರತೀಯ ಸೇನೆಯ ಮೇಜರ್ ಅನಿಕೇತ್ ಚತುರ್ವೇದಿ ವಿವಾಹ

ಸಂಬಂಧಿಗಳನ್ನು ಮತ್ತು ಹೆಚ್ಚು ಮಂದಿ ಗೆಳೆಯರನ್ನು ಆಹ್ವಾನಿಸದೇ ವಿವಾಹ ನಡೆಸಲಾಗಿದೆ. ಎರಡೂ ಕುಟುಂಬಗಳಿಂದ ಕೇವಲ ಐದರಿಂದ 10 ಮಂದಿ ವಿವಾಹದಲ್ಲಿ ಪಾಲ್ಗೊಂಡಿದ್ದಾರೆ. ಈ ಇಬ್ಬರ ಸರಳತೆಗೆ ಜನಮೆಚ್ಚುಗೆ ವ್ಯಕ್ತವಾಗಿದೆ.

ಸದ್ಯಕ್ಕೆ ಮೇಜರ್ ಅನಿಕೇತ್ ಚತುರ್ವೇದಿ ಲಡಾಖ್​ನಲ್ಲಿ ಕಾರ್ಯನಿರ್ವಹಣೆ ಮಾಡುತ್ತಿದ್ದು, ನವದಂಪತಿ ಮೂಲತಃ ಭೋಪಾಲ್​ಗೆ ಸೇರಿದವರಾಗಿದ್ದಾರೆ. ಇವರ ಮದುವೆಯ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

ಇದನ್ನೂ ಓದಿ: ಕಷ್ಟದ ದಿನಗಳನ್ನು ತಂದವರು ಯಾರು ಎಂದು ದೇಶಕ್ಕೆ ಗೊತ್ತು: ರಾಹುಲ್​​​ ಗಾಂಧಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.