ETV Bharat / bharat

18 ವರ್ಷಗಳ ದಾಂಪತ್ಯ ಜೀವನಕ್ಕೆ ತೆರೆ ಎಳೆದ ಧನುಷ್!​ - ದಾಂಪತ್ಯ ಜೀವನಕ್ಕೆ ವಿದಾಯ ಹೇಳಿದ ಧನುಷ್​

ಇಂದು ನಾವು ನಮ್ಮ ಮಾರ್ಗಗಳು ಪ್ರತ್ಯೇಕಗೊಳ್ಳುವ ಸ್ಥಳದಲ್ಲಿ ನಿಂತಿದ್ದೇವೆ. ಐಶ್ವರ್ಯ ಮತ್ತು ನಾನು ದಂಪತಿಗಳಾಗಿ ಬೇರೆಯಾಗಲು ನಿರ್ಧರಿಸಿದ್ದೇವೆ ಎಂದಿರುವ ಅವರು ನಮ್ಮನ್ನು ಉತ್ತಮ ವ್ಯಕ್ತಿಗಳಾಗಿ ಅರ್ಥಮಾಡಿಕೊಳ್ಳಲು ಸಮಯ ತೆಗೆದುಕೊಳ್ಳಿ ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.

18 ವರ್ಷಗಳ ದಾಂಪತ್ಯ ಜೀವನಕ್ಕೆ ತೆರೆ ಎಳೆದ ಧನುಷ್​

author img

By

Published : Jan 17, 2022, 11:57 PM IST

Updated : Jan 18, 2022, 12:45 AM IST

ಚೆನ್ನೈ: ನಟ ಧನುಷ್ ಅವರು ಅಭಿಮಾನಿಗಳಿಗೆ ಶಾಕಿಂಗ್​ ಸುದ್ದಿ ಕೊಟ್ಟಿದ್ದಾರೆ. ಬರೋಬ್ಬರಿ 18 ವರ್ಷಗಳ ಅವರ ವಿವಾಹದ ಪಯಣಕ್ಕೆ ಫುಲ್​ಸ್ಟಾಪ್​ ಇಟ್ಟಿದ್ದಾರೆ. ಈ ಮೂಲಕ ರಜನಿಕಾಂತ್​ ಅವರ ಪುತ್ರಿಯಾದ ಐಶ್ವರ್ಯ ಅವರಿಂದ ಪ್ರತ್ಯೇಕಗೊಂಡಿದ್ದಾರೆ.

ಈ ಸಂಬಂಧ ಟ್ವಿಟರ್​ನಲ್ಲಿ ಧನುಷ್ ಅವರು ಬರೆದುಕೊಂಡಿದ್ದು, ಸ್ನೇಹಿತರು, ದಂಪತಿಗಳು, ಪೋಷಕರಾಗಿ ಮತ್ತು ಪರಸ್ಪರ ಹಿತೈಷಿಗಳಾಗಿ 18 ವರ್ಷಗಳ ಕಾಲ ಜೀವನ ಮಾಡಿದೆವು. ಈ ಪ್ರಯಾಣವು ಬೆಳವಣಿಗೆ, ತಿಳುವಳಿಕೆ, ಹೊಂದಾಣಿಕೆ ಮತ್ತು ಹೊಂದಿಕೊಳ್ಳುವಿಕೆಯಿಂದ ಕೂಡಿದೆ ಎಂದು ಬರೆದಿದ್ದಾರೆ.

ಇಂದು ನಾವು ನಮ್ಮ ಮಾರ್ಗಗಳು ಪ್ರತ್ಯೇಕಗೊಳ್ಳುವ ಸ್ಥಳದಲ್ಲಿ ನಿಂತಿದ್ದೇವೆ. ಐಶ್ವರ್ಯ ಮತ್ತು ನಾನು ದಂಪತಿಗಳಾಗಿ ಬೇರೆಯಾಗಲು ನಿರ್ಧರಿಸಿದ್ದೇವೆ ಎಂದಿರುವ ಅವರು, ದಯವಿಟ್ಟು ನಮ್ಮ ನಿರ್ಧಾರವನ್ನು ಗೌರವಿಸಿ ಮತ್ತು ಇದನ್ನು ನಿಭಾಯಿಸಲು ನಮಗೆ ಗೌಪ್ಯತೆಯನ್ನು ನೀಡಿ ಎಂದು ಮನವಿ ಮಾಡಿಕೊಂಡಿದ್ದಾರೆ.

ಧನುಷ್ ಅವರು ಸೂಪರ್ ಸ್ಟಾರ್ ರಜನಿಕಾಂತ್ ಅವರ ಹಿರಿಯ ಮಗಳು ಐಶ್ವರ್ಯ ಅವರನ್ನು 18 ನವೆಂಬರ್ 2004 ರಂದು ವಿವಾಹವಾಗಿದ್ದರು. ಈ ದಂಪತಿಗೆ 2006 ಮತ್ತು 2010 ರಲ್ಲಿ ಇಬ್ಬರು ಮಕ್ಕಳು ಜನಿಸಿದ್ದಾರೆ.

ಐಶ್ವರ್ಯ ಅವರ ಮೊದಲ ನಿರ್ದೇಶನದ '3' ನಲ್ಲಿ ಧನುಷ್ ಕೆಲಸ ಮಾಡಿದ್ದರು ಮತ್ತು ಚಿತ್ರದ 'ಕೊಲವೆರಿ ಡಿ' ಹಾಡು ತಕ್ಷಣವೇ ಹಿಟ್ ಆಗಿ ಎಲ್ಲಾ ಕಡೆ ಸದ್ದು ಮಾಡಿತ್ತು.

Last Updated : Jan 18, 2022, 12:45 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.