ETV Bharat / bharat

ವೈಕುಂಠ ಏಕಾದಶಿ ಸಂಭ್ರಮ: ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ನಿವೃತ್ತ ಸಿಜೆಐ ರಮಣ, ರಾಜ್ಯಪಾಲ ಗೆಹ್ಲೋಟ್​

ವೈಕುಂಠ ಏಕಾದಶಿ ನಿಮಿತ್ತ ದೇಶದ ಬಹುತೇಕ ದೇವಾಲಯಗಳು ಭಕ್ತರಿಂದ ತುಂಬಿ ತುಳುಕುತ್ತಿವೆ.

vaikunta ekadashi  ವೈಕುಂಠ ಏಕಾದಶಿ  ಈಟಿವಿ ಭಾರತ ಕನ್ನಡ  etv bharat kannada  Devotees thronged to temple  occasion of Vaikunta Ekadasi  ವೈಕುಂಠ ಏಕಾದಶಿ ಮಹೋತ್ಸವ  ತಿರುಪತಿ ತಿಮ್ಮಪ್ಪನ ದರ್ಶನ  ರಾಜ್ಯಪಾಲ ಗೆಹ್ಲೋಟ್​ ದೇವಾಲಯಗಳು ಭಕ್ತರಿಂದ ತುಂಬಿ  ತಿರುಮಲದಲ್ಲಿ ವೈಕುಂಠ ಏಕಾದಶಿ  ತಿರುಮಲಕ್ಕೆ ಗಣ್ಯರ ಆಗಮನ  ಬೆಂಗಳೂರಿನ ದೇವಸ್ಥಾನಗಳಲ್ಲಿ ಜನಜಂಗುಳಿ
ವೈಕುಂಠ ಏಕಾದಶಿ
author img

By ETV Bharat Karnataka Team

Published : Dec 23, 2023, 8:35 AM IST

Updated : Dec 23, 2023, 3:20 PM IST

ವೈಕುಂಠ ಏಕಾದಶಿ ಸಂಭ್ರಮ

ಹೈದರಾಬಾದ್​: ಇಂದು ವೈಕುಂಠ ಏಕಾದಶಿ. ಶ್ರೀ ವಿಷ್ಣು ದೇವರಿಗೆ ಪ್ರಿಯವಾದ ದಿನ. ಧನುರ್ಮಾಸ ಶುಕ್ಲ ಪಕ್ಷದಲ್ಲಿ ಬರುವ ಈ ವೈಕುಂಠ ಏಕಾದಶಿಯಂದು ದೇವತೆಗಳು ಭೂ ಲೋಕಕ್ಕೆ ಬಂದು ಜಗದೊಡೆಯ ಶ್ರೀವಿಷ್ಣು ದೇವರನ್ನು ಪೂಜಿಸುತ್ತಾರೆ ಎಂದು ಪುರಾಣಗಳು ಹೇಳುತ್ತವೆ. ಆದುದರಿಂದಲೇ ಈ ದಿನದಂದು ದೇವಾಲಯದ ಉತ್ತರ ದ್ವಾರದ ಮೂಲಕ ವಿಷ್ಣುವಿನ ದರ್ಶನ ಮಾಡಿದರೆ ಸಕಲ ಪುಣ್ಯಗಳು ಪ್ರಾಪ್ತಿಯಾಗುತ್ತವೆ ಎಂಬುದು ನಂಬಿಕೆ.

ವಿಷ್ಣು ದೇವರಿಗೆ ಪ್ರಿಯವಾದ ಈ ಪವಿತ್ರ ದಿನದಂದು ಬಹುತೇಕ ದೇವಾಲಯಗಳು ಭಕ್ತರಿಂದ ತುಂಬಿ ತುಳುಕುತ್ತಿವೆ. ಅದರಲ್ಲೂ ತಮಿಳುನಾಡಿನ ತಿರುಚನಪಲ್ಲಿಯ ಶ್ರೀರಂಗನಾಥ ದೇವಸ್ಥಾನದಲ್ಲಿ ಬೆಳಗ್ಗೆಯಿಂದಲೇ ವೈಕುಂಠ ದ್ವಾರದ ಮೂಲಕ ಸಾಗಿ ದೇವರ ದರ್ಶನ ಪಡೆಯಲು ಭಕ್ತರು ಸಾಲುಗಟ್ಟಿ ನಿಂತಿದ್ದಾರೆ.

  • #WATCH | Tamil Nadu: Devotees thronged to Sri Vaikunta Perumal Temple in Kanchipuram, on the occasion of Vaikunta Ekadasi today.

    Vaikunta Ekadasi is observed annually on the eleventh lunar day of Shukla Paksha or Margazhi month of the Hindu calendar. pic.twitter.com/3n87S5LKEc

    — ANI (@ANI) December 23, 2023 " class="align-text-top noRightClick twitterSection" data=" ">

ತಿರುಮಲದಲ್ಲಿ ವೈಕುಂಠ ಏಕಾದಶಿ: ತಿರುಪತಿಯ ತಿರುಮಲದಲ್ಲೂ ವೈಕುಂಠ ಏಕಾದಶಿ ಕಳೆಗಟ್ಟಿದೆ. ಲಕ್ಷಾಂತರ ಭಕ್ತರು ತಿರಮಲಕ್ಕೆ ಆಗಮಿಸಿದ್ದು ವೈಕುಂಠ ದ್ವಾರದ ಮೂಲಕ ಸಾಗಿ ಏಳು ಬೆಟ್ಟಗಳ ಒಡೆಯ ಶ್ರೀ ವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆಯಲು ಬೆಳಗಿನಿಂದಲೇ ಸರತಿ ಸಾಲಿನಲ್ಲಿ ನಿಂತಿದ್ದಾರೆ. ಇಂದು ಬೆಳಗಿನ ಜಾವ 1.45ಕ್ಕೆ ತಿರುಮಲದಲ್ಲಿ ವೈಕುಂಠ ದ್ವಾರ ತೆರೆಯಲಾಗಿದೆ.

ತಿರುಮಲಕ್ಕೆ ಗಣ್ಯರ ಆಗಮನ: ವೈಕುಂಠ ದ್ವಾರದ ಮೂಲಕ ವೆಂಕಟೇಶ್ವರ ಸ್ವಾಮಿಯ ದರ್ಶನಕ್ಕಾಗಿ ಅನೇಕ ಗಣ್ಯರು ತಿರುಮಲಕ್ಕೆ ಆಗಮಿಸಿದ್ದಾರೆ. ನಿವೃತ್ತ ಸಿಜೆಐ ನ್ಯಾಯಮೂರ್ತಿ ಎನ್‌ವಿ ರಮಣ, ಹೈಕೋರ್ಟ್ ನ್ಯಾಯಮೂರ್ತಿ ರವೀಂದ್ರ ಬಾಬು, ನ್ಯಾಯಮೂರ್ತಿ ಹಿಮಾ ಕೊಹ್ಲಿ, ನ್ಯಾಯಮೂರ್ತಿ ಎಸ್.ಎಲ್. ಭಟ್ಟಿ, ನ್ಯಾಯಮೂರ್ತಿ ಶ್ಯಾಮ್ ಸುಂದರ್, ನ್ಯಾಯಮೂರ್ತಿ ತರಳ ರಾಜಶೇಖರ್, ಕರ್ನಾಟಕ ರಾಜ್ಯಪಾಲ ಧವರ್ ಚಂದ್ ಗೆಹ್ಲೋಟ್ ಸೇರಿದಂತೆ ಅನೇಕ ಗಣ್ಯರು ತಿರುಮಲನ ದರ್ಶನಕ್ಕೆ ಆಗಮಿಸಿದ್ದಾರೆ.

ಬೆಂಗಳೂರಿನ ದೇವಸ್ಥಾನಗಳಲ್ಲಿ ಜನಜಂಗುಳಿ: ರಾಜಧಾನಿ ಬೆಂಗಳೂರಲ್ಲೂ ಬೆಳಗ್ಗೆಯಿಂದಲ್ಲೆ ನಗರದ ಪ್ರಮುಖ ದೇವಾಲಯಗಳಿಗೆ ಭಕ್ತರು ತೆರಳಿ ದೇವರ ದರ್ಶನ ಪಡೆಯುತ್ತಿದ್ದಾರೆ. ಅದರಲ್ಲೂ ವೈಯಲಿ ಕವಲಿಯ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನ ಭಕ್ತರಿಂದ ತುಂಬಿ ತುಳುಕುತ್ತಿದೆ.

  • #WATCH | Tamil Nadu: Devotees thronged to Sri Ranganathaswamy temple in Srirangam, Trichy on the occasion of Vaikunta Ekadasi today; Paramapada Vasal (the seventh gate of heaven) was opened.

    Vaikunta Ekadasi is observed annually on the eleventh lunar day of Shukla Paksha or… pic.twitter.com/sbT84e750o

ಯಾದಾದ್ರಿ ವೈಕುಂಠ ಏಕಾದಶಿ ಮಹೋತ್ಸವ: ಪ್ರಸಿದ್ಧ ಪುಣ್ಯಕ್ಷೇತ್ರ ಯಾದಾದ್ರಿ ವೈಕುಂಠ ಏಕಾದಶಿ ಮಹೋತ್ಸವ ಅದ್ಧೂರಿಯಾಗಿ ನಡೆಯುತ್ತಿದೆ. ಬೆಳಗ್ಗೆ 6.42ಕ್ಕೆ ಉತ್ತರರಾಜ ಗೋಪುರದ ದೇವಸ್ಥಾನದಲ್ಲಿ ನರಸಿಂಹ ದೇವರು ಮಹಾವಿಷ್ಣುವಿನ ರೂಪದಲ್ಲಿ ಭಕ್ತರಿಗೆ ದರ್ಶನ ನೀಡಿದರು. ರಾಜ್ಯ ಸಚಿವ ತುಮ್ಮಲ ನಾಗೇಶ್ವರ ರಾವ್, ಸರ್ಕಾರಿ ಸಚೇತಕ, ಆಲೇರು ಶಾಸಕ ಬಿರ್ಲಾ ಐಲಯ್ಯ ಈ ಸಮಾರಂಭದಲ್ಲಿ ಪಾಲ್ಗೊಂಡು ದೇವರ ದರ್ಶನ ಪಡೆದರು.

ತೆಲಂಗಾಣದ ಧರ್ಮಪುರಿ ಲಕ್ಷ್ಮೀನರಸಿಂಹ ಸ್ವಾಮಿ ದೇವಸ್ಥಾನದಲ್ಲಿ ಮುಕ್ಕೋಟಿ ಏಕಾದಶಿ ಆಚರಣೆ ಅದ್ಧೂರಿಯಾಗಿ ನಡೆಯುತ್ತಿದೆ. ಬೆಳಗಿನ ಜಾವ 2.30ಕ್ಕೆ ಸ್ವಾಮಿಯ ಮೂಲ ವಿರಾಟಕ್ಕೆ ಮಹಾ ಕ್ಷೀರಾಭಿಷೇಕ ನೆರವೇರಿತು. ಬೆಳಗ್ಗೆ 5 ಗಂಟೆಯಿಂದಲೇ ಭಕ್ತರಿಗೆ ವೈಕುಂಠದಲ್ಲಿ ದರ್ಶನ ನೀಡಲಾಗುತ್ತದೆ. ಯಾದಾದ್ರಿ ಲಕ್ಷ್ಮೀನರಸಿಂಹಸ್ವಾಮಿ ಕ್ಷೇತ್ರ, ಭದ್ರಾದ್ರಿ ರಾಮಾಲಯ, ವೇಮುಲವಾಡ ಶ್ರೀ ರಾಜರಾಜೇಶ್ವರ ಸ್ವಾಮಿ ದೇವಸ್ಥಾನಗಳಲ್ಲಿ ಉತ್ತರ ದ್ವಾರದಲ್ಲಿ ಸ್ವಾಮಿ ಭಕ್ತರಿಗೆ ದರ್ಶನ ನೀಡುತ್ತಿದ್ದಾರೆ.

ಇದನ್ನೂ ಓದಿ: ಕಿಷ್ಕಿಂಧೆ ಅಂಜನಾದ್ರಿ ಸಮಗ್ರ ಅಭಿವೃದ್ಧಿ ನನ್ನ ಸಂಕಲ್ಪ : ಶಾಸಕ ಜನಾರ್ದನರೆಡ್ಡಿ

Last Updated : Dec 23, 2023, 3:20 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.