ETV Bharat / bharat

ರಾಜಸ್ಥಾನ ಸಂಸದೆ ಮನೆ ಮೇಲೆ ಗುಂಡಿನ ದಾಳಿ ಪ್ರಕರಣ:ಅಪ್ರಾಪ್ತ ಪೊಲೀಸರ​ ವಶಕ್ಕೆ - ಅಪ್ರಾಪ್ತ ಪೊಲೀಸ್​ ವಶಕ್ಕೆ

ಅಪ್ರಾಪ್ತನೊಬ್ಬ ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿ, ಸಂಸದರ ಮನೆಗೆ ಗುಂಡಿನ ದಾಳಿ ತಾನೇ ನಡೆಸಿದ್ದಾಗಿ ತಿಳಿಸಿದ್ದಾನೆ. ಪರಿಣಾಮ ಆತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ರಾಜಸ್ಥಾನ ಸಂಸದೆ ಮನೆ ಮೇಲೆ ಗುಂಡಿನ ದಾಳಿ ಪ್ರಕರಣ

author img

By

Published : Nov 15, 2021, 6:46 AM IST

ಭರತ್‌ಪುರ: ಬಯಾನಾದಲ್ಲಿರುವ ಸಂಸದೆ ರಂಜಿತಾ ಕೋಲಿ (MP Ranjeeta Koli) ಅವರ ನಿವಾಸದ ಮೇಲೆ ನಡೆದ ಗುಂಡಿನ ದಾಳಿಯ ಹೊಣೆ ಹೊತ್ತಿರುವ ಅಪ್ರಾಪ್ತನನ್ನು ರಾಜಸ್ಥಾನ ಪೊಲೀಸರು (Rajasthan police) ವಶಕ್ಕೆ ತೆಗೆದುಕೊಂಡಿದ್ದಾರೆ.

ಬನ್ಯಾ ಸಿಒ ಅಜಯ್ ಶರ್ಮಾ, ಈ ಬಗ್ಗೆ (Banya CO Ajay Sharma)ಮಾತನಾಡಿ, ಭಾನುವಾರ, ಉಜ್ಜಯಿನಿ ಪ್ರದೇಶದ ಅಪ್ರಾಪ್ತನೊಬ್ಬ ಕಂಟ್ರೋಲ್ ರೂಂಗೆ ಕರೆ ಮಾಡಿದ್ದರು ಮತ್ತು ಸಂಸದ ರಂಜಿತಾ ಕೋಲಿ ಅವರ ನಿವಾಸದ ಮೇಲೆ ನಡೆದ ಗುಂಡಿನ ದಾಳಿ ಜೊತೆಗೆ ಬೆದರಿಕೆ ಪತ್ರವನ್ನು ಅಂಟಿಸಿದ ಬಗ್ಗೆ ಹೇಳಿದ್ದರು. ಈ ಸಂಬಧ ಮಾಹಿತಿ ಪಡೆದು ಪೊಲೀಸರು ಸ್ಥಳಕ್ಕಾಗಮಿಸಿ ಅಪ್ರಾಪ್ತನನ್ನು ವಶಕ್ಕೆ ಪಡೆದಿದ್ದಾರೆ ಎಂದಿದ್ದಾರೆ.

ಅಪ್ರಾಪ್ತ ವಯಸ್ಕನ ಮಾನಸಿಕ ಸ್ಥಿತಿ ಸ್ಥಿರವಾಗಿಲ್ಲ. ಮೇಲ್ನೋಟಕ್ಕೆ ಆತನ ಮಾತಿನಲ್ಲಿ ಯಾವುದೇ ಸತ್ಯವಿಲ್ಲ ಎಂದು ತೋರುತ್ತದೆ. ಆದರೆ, ಆತನನ್ನು ತನಿಖೆಗೆ ಒಳಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.

ರಾಜಸ್ಥಾನ ಸರ್ಕಾರವು ಈ ವಿಷಯದ ತನಿಖೆಗಾಗಿ SOG ಮತ್ತು SIT ತಂಡಗಳನ್ನು ರಚಿಸಿದೆ. ಇದರೊಂದಿಗೆ ಎಡಿಜಿ ಸುನೀಲ್ ದತ್ ಕೂಡ ಭರತ್‌ಪುರಕ್ಕೆ ಭೇಟಿ ನೀಡಿ ಪೊಲೀಸ್ ಅಧಿಕಾರಿಗಳನ್ನು ಭೇಟಿ ಮಾಡಿ ಪರಿಸ್ಥಿತಿಯ ಅವಲೋಕನ ನಡೆಸಿದ್ದರು.

ಮಂಗಳವಾರ ಮಧ್ಯರಾತ್ರಿ, ಬಯಾನಾದಲ್ಲಿರುವ ಸಂಸದ ರಂಜಿತಾ ಕೋಲಿ ಅವರ ನಿವಾಸದ ಮೇಲೆ ಶಸ್ತ್ರಸಜ್ಜಿತ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದರು. ದಾಳಿಯ ವೇಳೆ ಸಂಸದರು ಪ್ರಜ್ಞೆ ತಪ್ಪಿದ್ದರು. ಪೊಲೀಸರು ಸ್ಥಳಕ್ಕಾಗಮಿಸಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಸಂಸದೆ ರಂಜಿತಾ ಕೋಲಿ ಅವರನ್ನು ಬಯಾನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.