ETV Bharat / bharat

ಕೆಂಪುಕೋಟೆ ಬಳಿ ಹಿಂಸಾಚಾರ ಪ್ರಕರಣ: ಆರೋಪಿ ಸುಖ್​ದೇವ್ ಸಿಂಗ್ ಬಂಧನ - ದೆಹಲಿ ಕೆಂಪುಕೋಟೆ ಬಳಿ ಹಿಂಸಾಚಾರ ಪ್ರಕರಣ

ಜನವರಿ 26ರಂದು ಕೆಂಪುಕೋಟೆ ಬಳಿ ನಡೆದ ಹಿಂಸಾಚಾರ ಪ್ರಕರಣದ ಪ್ರಮುಖ ಆರೋಪಿಗಳಲ್ಲಿ ಓರ್ವನನ್ನು ಪೊಲೀಸರು ಬಂಧಿಸಿದ್ದಾರೆ.

Delhi Police arrests Sukhdev Singh
ಆರೋಪಿ ಸುಖ್​ದೇವ್ ಸಿಂಗ್ ಬಂಧನ
author img

By

Published : Feb 7, 2021, 10:56 PM IST

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಗಣರಾಜ್ಯೋತ್ಸವದಂದು ರೈತರ ಟ್ರ್ಯಾಕ್ಟರ್ ರ್ಯಾಲಿ ವೇಳೆ ಹಿಂಸಾಚಾರ ಪ್ರಕರಣದ ಆರೋಪಿ ಸುಖದೇವ್ ಸಿಂಗ್​ನನ್ನು ದೆಹಲಿ ಪೊಲೀಸ್ ಅಪರಾಧ ವಿಭಾಗ ಬಂಧಿಸಿದೆ.

ಹರಿಯಾಣದ ಕರ್ನಾಲ್ ನಿವಾಸಿ ಸಿಂಗ್​ನನ್ನು ಚಂಡೀಗಢದ ಸೆಂಟೆರಾ ಮಾಲ್ ಬಳಿಯ ಕೈಗಾರಿಕಾ ಪ್ರದೇಶದಲ್ಲಿ ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ.

ಓದಿ : ನಕ್ಸಲರು ಹೂತಿಟ್ಟಿದ್ದ ಐಇಡಿ ಸ್ಫೋಟ: ಎಸ್‌ಟಿಎಫ್ ಯೋಧ ಸಾವು

ಆರೋಪಿ ಸುಖ್​ದೇವ್ ಸಿಂಗ್​​ ಬಗ್ಗೆ ಮಾಹಿತಿ ನೀಡಿದವರಿಗೆ 50 ಸಾವಿರ ರೂ. ಬಹುಮಾನ ನೀಡುವುದಾಗಿ ಈ ಹಿಂದೆ ಪೊಲೀಸರು ಘೋಷಿಸಿದ್ದರು. ಹಿಂಸಾಚಾರ ಪ್ರಕರಣದಲ್ಲಿ ಪೊಲೀಸರು ಈವರೆಗೆ 124ಕ್ಕೂ ಹೆಚ್ಚು ಜನರನ್ನು ಬಂಧಿಸಿದ್ದು, 44 ಎಫ್‌ಐಆರ್ ದಾಖಲಿಸಲಾಗಿದೆ. ಅಪರಾಧ ವಿಭಾಗದ ಎಸ್‌ಐಟಿ 44 ಪ್ರಕರಣಗಳಲ್ಲಿ 14 ಪ್ರಕರಣಗಳ ತನಿಖೆ ನಡೆಸುತ್ತಿದೆ. ಅಷ್ಟೇ ಅಲ್ಲದೆ ಈವರೆಗೆ 70ಕ್ಕೂ ಹೆಚ್ಚು ಆರೋಪಿಗಳ ಫೋಟೋಗಳನ್ನು ಪೊಲೀಸರು ಬಿಡುಗಡೆ ಮಾಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.