ETV Bharat / bharat

ಮದ್ಯ ನೀತಿ ಹಗರಣ: ಎಫ್​ಐಆರ್ ಪ್ರತಿ ಒದಗಿಸುವಂತೆ ಸಿಬಿಐಗೆ ಕೆಸಿಆರ್ ಪುತ್ರಿ ಕವಿತಾ ಪತ್ರ

ದೆಹಲಿ ಮದ್ಯ ನೀತಿ ಹಗರಣ ಪ್ರಕರಣದ ಎಫ್‌ಐಆರ್ ಮತ್ತು ಕೇಂದ್ರ ನೀಡಿರುವ ದೂರಿನ ಪ್ರತಿಗಳನ್ನು ಒದಗಿಸುವಂತೆ ಸಿಬಿಐಗೆ ತೆಲಂಗಾಣ ಸಿಎಂ ಕೆಸಿಆರ್ ಪುತ್ರಿ ಕವಿತಾ ಪತ್ರ ಬರೆದಿದ್ದಾರೆ.

delhi-liquor-scam-case-trs-mlc-kavitha-letter-to-cbi
ಮದ್ಯ ನೀತಿ ಹಗರಣ: ಎಫ್​ಐಆರ್ ಪ್ರತಿ ಒದಗಿಸುವಂತೆ ಸಿಬಿಐಗೆ ಕೆಸಿಆರ್ ಪುತ್ರಿ ಕವಿತಾ ಪತ್ರ
author img

By

Published : Dec 3, 2022, 10:50 PM IST

ಹೈದರಾಬಾದ್​ (ತೆಲಂಗಾಣ): ದೆಹಲಿ ಮದ್ಯ ನೀತಿ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರೀಯ ತನಿಖಾ ದಳ (ಸಿಬಿಐ)ಕ್ಕೆ ಟಿಆರ್‌ಎಸ್ ಎಂಎಲ್‌ಸಿ ಕೆ.ಕವಿತಾ ಪತ್ರ ಬರೆದಿದ್ದಾರೆ. ಎಫ್‌ಐಆರ್ ಮತ್ತು ಕೇಂದ್ರ ನೀಡಿರುವ ದೂರಿನ ಪ್ರತಿಗಳನ್ನು ಒದಗಿಸುವಂತೆ ಸಿಬಿಐಗೆ ಪತ್ರದ ಮೂಲಕ ಕೇಳಿಕೊಂಡಿದ್ದಾರೆ.

ದೆಹಲಿ ಅಬಕಾರಿ ನೀತಿ ಹಗರಣದ ತನಿಖೆ ನಡೆಸುತ್ತಿರುವ ಸಿಬಿಐ ಶುಕ್ರವಾರ ತೆಲಂಗಾಣ ಮುಖ್ಯಮಂತ್ರಿ ಚಂದ್ರಶೇಖರ್ ರಾವ್ ಅವರ ಪುತ್ರಿಯಾದ ಟಿಆರ್‌ಎಸ್ ಎಂಎಲ್‌ಸಿ ಕವಿತಾ ಅವರಿಗೆ ಡಿಸೆಂಬರ್ 6ರಂದು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿದೆ.

ಇದನ್ನೂ ಓದಿ: ದೆಹಲಿ ಲಿಕ್ಕರ್​ ಕೇಸ್​.. ತೆಲಂಗಾಣ ಮುಖ್ಯಮಂತ್ರಿ ಕೆಸಿಆರ್​ ಪುತ್ರಿಗೆ ಸಿಬಿಐ ನೋಟಿಸ್​

ಆದರೆ, ಇದರ ಬೆನ್ನಲ್ಲೇ ಸಿಬಿಐಗೆ ಪತ್ರ ಬರೆದಿರುವ ಕವಿತಾ, ಎಫ್‌ಐಆರ್ ಮತ್ತು ಕೇಂದ್ರ ನೀಡಿರುವ ದೂರಿನ ಪ್ರತಿಗಳನ್ನು ಒದಗಿಸಬೇಕು. ಆ ದಾಖಲೆಗಳನ್ನು ಪಡೆದ ನಂತರ ಹೈದರಾಬಾದ್‌ನಲ್ಲಿ ವಿಚಾರಣೆ ದಿನಾಂಕವನ್ನು ಅಂತಿಮಗೊಳಿಸಬಹುದು ಎಂದು ಉಲ್ಲೇಖಿಸಿದ್ದಾರೆ.

ಮದ್ಯ ನೀತಿ ಹಗರಣ: ಎಫ್​ಐಆರ್ ಪ್ರತಿ ಒದಗಿಸುವಂತೆ ಸಿಬಿಐಗೆ ಕೆಸಿಆರ್ ಪುತ್ರಿ ಕವಿತಾ ಪತ್ರ
ಮದ್ಯ ನೀತಿ ಹಗರಣ: ಎಫ್​ಐಆರ್ ಪ್ರತಿ ಒದಗಿಸುವಂತೆ ಸಿಬಿಐಗೆ ಕೆಸಿಆರ್ ಪುತ್ರಿ ಕವಿತಾ ಪತ್ರ

ಕ್ರಿಮಿನಲ್ ಪ್ರಕ್ರಿಯೆ ಸಂಹಿತೆಯ ಸೆಕ್ಷನ್ 160ರ ಅಡಿಯಲ್ಲಿ ಕವಿತಾ ಅವರಿಗೆ ಸಿಬಿಐ ನೋಟಿಸ್ ಜಾರಿಗೊಳಿಸಿತ್ತು. ಅಂದು ಬೆಳಗ್ಗೆ 11ಗಂಟೆಗೆ ವಿಚಾರಣೆಗೆ ಅವರ ಅನುಕೂಲಕ್ಕೆ ಅನುಗುಣವಾಗಿ ವಾಸಸ್ಥಳವನ್ನು ತಿಳಿಸುವಂತೆ ಕೇಳಿತ್ತು. ಇನ್ನು, ಸಿಆರ್​ಪಿಸಿ ಸೆಕ್ಷನ್ 160ರ ಅಡಿ ನಿರ್ದಿಷ್ಟ ಪ್ರಕರಣದಲ್ಲಿ ಯಾವುದೇ ವ್ಯಕ್ತಿಯನ್ನು ಸಾಕ್ಷಿಯಾಗಿ ತನಿಖಾಧಿಕಾರಿ ಕರೆಯಬಹುದಾಗಿದೆ.

ಇದನ್ನೂ ಓದಿ: ದೆಹಲಿ ಮದ್ಯ ಹಗರಣ: ವಿಚಾರಣೆ ಎದುರಿಸಲು ಸಿದ್ಧ ಎಂದ ಟಿಆರ್‌ಎಸ್ ಎಂಎಲ್‌ಸಿ ಕವಿತಾ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.