ನವದೆಹಲಿ: ರಾಷ್ಟ್ರ ರಾಜಧಾನಿ ನವದೆಹಲಿಯ ರೋಹಿಣಿ ಕೋರ್ಟ್ ಆವರಣದಲ್ಲಿ ನಡೆದ ಶೂಟೌಟ್ ಇಡೀ ದೇಶವನ್ನ ಬೆಚ್ಚಿಬೀಳಿಸಿದೆ. ವಕೀಲರ ಉಡುಪಿನಲ್ಲಿ ಬಂದಿದ್ದ ದುಷ್ಕರ್ಮಿಗಳು ಗ್ಯಾಂಗ್ಸ್ಟರ್ಗೆ ಗುಂಡು ಹಾರಿಸಿ ಹತ್ಯೆಗೈದಿದ್ದರು.
ಈ ಹತ್ಯೆಯ ಬಳಿಕ ಇದೀಗ ದೆಹಲಿಯ ಎಲ್ಲ ಜೈಲುಗಳಲ್ಲಿ ಗ್ಯಾಂಗ್ವಾರ್ ನಡೆಯುವ ಸಾಧ್ಯತೆ ಇದ್ದು, ಹೈಅಲರ್ಟ್ ಘೋಷಿಸಿ ಪೊಲೀಸರ ನಿಯೋಜನೆ ಹೆಚ್ಚಿಸಲಾಗಿದೆ. ಇಲ್ಲಿನ ತಿಹಾರ್ ಜೈಲು, ಮಂಡೋಲಿ ಜೈಲು ಮತ್ತು ರೋಹಿಣಿ ಜೈಲಿನ ಮೇಲೆ ಹದ್ದಿನ ಕಣ್ಣಿಡಲಾಗಿದೆ.
ನಿನ್ನೆಯ ಗ್ಯಾಂಗ್ವಾರ್ನಲ್ಲಿ ಮೃತಪಟ್ಟ ಗೋಗಿಯನ್ನು ತಿಹಾರ್ ಜೈಲಿನಲ್ಲಿರಸಲಾಗಿತ್ತು. ಜೊತೆಗೆ ಆತನ ಶತ್ರು ಎಂದು ಹೇಳಲಾಗುತ್ತಿರುವ ಟಿಲ್ಲು ಎಂಬಾತನನ್ನು ಮಂಡೋಲಿ ಜೈಲಿನಲ್ಲಿರಿಸಲಾಗಿದೆ. ಈ ಹಿನ್ನೆಲೆ ಎಲ್ಲಾ ಜೈಲಿನಲ್ಲಿ ಹೆಚ್ಚುವರಿ ಭದ್ರತೆ ಕಲ್ಪಿಸಲಾಗಿದೆ.
ಇದನ್ನೂ ಓದಿ: ದೆಹಲಿ ರೋಹಿಣಿ ಕೋರ್ಟ್ ಆವರಣದಲ್ಲೇ ಶೂಟೌಟ್; ಗ್ಯಾಂಗ್ಸ್ಟರ್ ಸೇರಿ ಮೂವರು ಸಾವು