ETV Bharat / bharat

ದೆಹಲಿ ಸರ್ಕಾರದಿಂದ 50 ಕೇಂದ್ರಗಳಲ್ಲಿ ಸ್ಪೋಕನ್ ಇಂಗ್ಲಿಷ್ ಕೋರ್ಸ್​ ಆರಂಭ: ಸಿಎಂ ಕೇಜ್ರಿವಾಲ್​ - ದೆಹಲಿ ಸರ್ಕಾರದಿಂದ ಸ್ಪೋಕನ್ ಇಂಗ್ಲಿಷ್ ಕೋರ್ಸ್​ ಆರಂಭ

ಸ್ಪೋಕನ್ ಇಂಗ್ಲಿಷ್ ಕೋರ್ಸ್​ಗೆ 18 ರಿಂದ 35 ವರ್ಷ ವಯಸ್ಸಿನವರು ಮತ್ತು 12ನೇ ತರಗತಿ ಉತ್ತೀರ್ಣರಾದವರು ಇದರ ಈ ಕೋರ್ಸ್​ಗೆ ಸೇರಬಹುದು ಎಂದು ದೆಹಲಿ ಸಿಎಂ ಕೇಜ್ರಿವಾಲ್​ ತಿಳಿಸಿದ್ದಾರೆ.

Delhi govt to start spoken English course across 50 centres: CM Arvind Kejriwal
ದೆಹಲಿ ಸರ್ಕಾರದಿಂದ 50 ಕೇಂದ್ರಗಳಲ್ಲಿ ಸ್ಪೋಕನ್ ಇಂಗ್ಲಿಷ್ ಕೋರ್ಸ್​ ಆರಂಭ: ಸಿಎಂ ಕೇಜ್ರಿವಾಲ್​
author img

By

Published : Jul 23, 2022, 9:30 PM IST

ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷದ ಸರ್ಕಾರ ಮತ್ತೊಂದು ಹೊಸ ಯೋಜನೆಯನ್ನು ಘೋಷಿಸಿದೆ. ರಾಷ್ಟ್ರ ರಾಜಧಾನಿಯಲ್ಲಿ ಇಂಗ್ಲಿಷ್ ಕೌಶಲ್ಯ ಹೆಚ್ಚಿಸುವ ನಿಟ್ಟಿನಲ್ಲಿ 50 ಕೇಂದ್ರಗಳಲ್ಲಿ ಸ್ಪೋಕನ್ ಇಂಗ್ಲಿಷ್ ಕೋರ್ಸ್​ ಪ್ರಾರಂಭಿಸಲಾಗುವುದು ಎಂದು ಕೇಜ್ರಿವಾಲ್​ ಹೇಳಿದರು.

ಆನ್‌ಲೈನ್​ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ದೆಹಲಿ ಸಿಎಂ, ಮೊದಲ ಹಂತದಲ್ಲಿ ನಾವು ಸ್ಪೋಕನ್ ಇಂಗ್ಲಿಷ್ ಕೋರ್ಸ್​ ಅನ್ನು 50 ಕೇಂದ್ರಗಳಲ್ಲಿ ಪ್ರಾರಂಭಿಸುತ್ತೇವೆ. ಅಲ್ಲಿ ಒಂದು ಲಕ್ಷ ಜನರು ಪ್ರವೇಶ ನೀಡಲಾಗುತ್ತಿದ್ದು, 18ರಿಂದ 35 ವರ್ಷ ವಯಸ್ಸಿನವರು ಮತ್ತು 12ನೇ ತರಗತಿ ಉತ್ತೀರ್ಣರಾದವರು ಇದರ ಈ ಕೋರ್ಸ್​ಗೆ ಸೇರಬಹುದು. ಈ ಕೋರ್ಸ್ ಜನರ ಇಂಗ್ಲಿಷ್ ಸಂವಹನ ಕೌಶಲ್ಯ ಸುಧಾರಿಸುವುದರೊಂದಿಗೆ ಉದ್ಯೋಗ ಪಡೆಯಲು ಮತ್ತು ವ್ಯಕ್ತಿತ್ವವನ್ನು ಅಭಿವೃದ್ಧಿಪಡಿಸಲು ಅನುಕೂಲವಾಗಿದೆ ಎಂದು ತಿಳಿಸಿದರು.

950 ರೂ. ಠೇವಣಿ ಇಡಬೇಕು: ಈ ಕೋರ್ಸ್​ಗೆ ಯಾವುದೇ ಶುಲ್ಕ ಇರುವುದಿಲ್ಲ. ಆದರೆ, ಆರಂಭದಲ್ಲಿ 950 ರೂಪಾಯಿಗಳನ್ನು ಭದ್ರತಾ ಹಣವಾಗಿ ಠೇವಣಿ ಮಾಡಬೇಕಾಗುತ್ತದೆ ಎಂದೂ ಕೇಜ್ರಿವಾಲ್ ಮಾಹಿತಿ ನೀಡಿದರು. ಸಂಪೂರ್ಣ ಹಾಜರಾತಿಯೊಂದಿಗೆ ಕೋರ್ಸ್​ ಅನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ನಂತರ ಠೇವಣಿ ಹಣವನ್ನು ಮರುಪಾವತಿಸಲಾಗುತ್ತದೆ ಎಂದು ಸಿಎಂ ಕೇಜ್ರಿವಾಲ್​ ಸ್ಪಪ್ಟಪಡಿಸಿದರು.

ಸರ್ಕಾರದ ದೆಹಲಿ ಕೌಶಲ್ಯ ವಾಣಿಜ್ಯೋದ್ಯಮ ವಿಶ್ವವಿದ್ಯಾಲಯದ ಮೂಲಕ ಕೋರ್ಸ್ ನಡೆಸಲಾಗುವುದು. ಜೊತೆಗೆ ಮ್ಯಾಕ್‌ಮಿಲನ್ ಮತ್ತು ವರ್ಡ್ಸ್‌ವರ್ತ್ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗುವುದು. ಅಲ್ಲದೇ, ಕೇಂಬ್ರಿಡ್ಜ್ ವಿಶ್ವವಿದ್ಯಾಲಯವು ಈ ಕೋರ್ಸ್​ನ ಮೌಲ್ಯಮಾಪನ ಮಾಡಲಿದೆ. ಹೀಗಾಗಿ ಇದು ಅಂತಾರಾಷ್ಟ್ರೀಯ ಗುಣಮಟ್ಟದ ಕಾರ್ಯಕ್ರಮವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ದೆಹಲಿಯ ಯುವ ಜನರಿಗೆ ಕೋರ್ಸ್‌ನಿಂದ ಸಾಕಷ್ಟು ಪ್ರಯೋಜನವಾಗಲಿದೆ. ಶಿಕ್ಷಣಕ್ಕೆ ಸಂಬಂಧಿಸಿದಂತೆ ಹಿಂದುಳಿದ ವರ್ಗಗಳ ಮಕ್ಕಳು ಸಹ ಯಾವುದೇ ರೀತಿಯಲ್ಲಿ ಯಾವುದೇ ಕೊರತೆಯನ್ನು ಎದುರಿಸಬಾರದು. ಈ ನಿಟ್ಟಿನಲ್ಲಿ ಇದೊಂದು ಮಹತ್ವದ ದೊಡ್ಡ ಹೆಜ್ಜೆಯಾಗಿದೆ ಎಂದು ಹೇಳಿದರು.

ಇದನ್ನೂ ಓದಿ: ವಿಮಾನದಲ್ಲಿ ಸಹ ಪ್ರಯಾಣಿಕನಿಗೆ ಎದೆ ನೋವು: ಪ್ರಥಮ ಚಿಕಿತ್ಸೆ ನೀಡಿದ ರಾಜ್ಯಪಾಲರು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.