ETV Bharat / bharat

ದೆಹಲಿಯಲ್ಲಿ ಕಂಪಿಸಿದ ಭೂಮಿ: ನೇಪಾಳದಲ್ಲಿ ಕಂಪನದ ಕೇಂದ್ರ ಬಿಂದು - ದೆಹಲಿಯಲ್ಲಿ ಕಂಪಿಸಿದ ಭೂಮಿ

ದೆಹಲಿಯಲ್ಲಿ ಮಂಗಳವಾರ 5.8 ತೀವ್ರತೆಯ ಭೂಕಂಪ ಸಂಭವಿಸಿದ್ದು, ನೇಪಾಳ ಭೂಕಂಪನದ ಕೇಂದ್ರ ಬಿಂದು ಎಂದು ಹೇಳಲಾಗಿದೆ.

earthquake
ಭೂಕಂಪ
author img

By

Published : Jan 24, 2023, 3:37 PM IST

ನವದೆಹಲಿ: ದೆಹಲಿ ಮತ್ತು ನೆರೆಯ ಪ್ರದೇಶದಲ್ಲಿ ಮಂಗಳವಾರ ಪ್ರಬಲ ಭೂಕಂಪನದ ಅನುಭವವಾಗಿದೆ. ಕನಿಷ್ಠ 15 ಸೆಕೆಂಡುಗಳ ಕಾಲ ಭೂಕಂಪನ ಸಂಭವಿಸಿದ್ದು, ಜನರು ತಮ್ಮ ಮನೆಗಳು ಮತ್ತು ಕಚೇರಿಗಳಿಂದ ಹೊರಗೆ ಬಂದಿದ್ದಾರೆ.

ರಾಷ್ಟ್ರೀಯ ಭೂಕಂಪನ ಕೇಂದ್ರದ ಪ್ರಕಾರ, ನೇಪಾಳ ಭೂಕಂಪದ ಕೇಂದ್ರಬಿಂದುವಾಗಿದ್ದು, ಕಂಪನದ ತೀವ್ರತೆ 5.8 ರಷ್ಟು ದಾಖಲಾಗಿದೆ ಎನ್ನಲಾಗಿದೆ. ಯಾವುದೇ ಹಾನಿಯ ಬಗ್ಗೆ ವರದಿ ಆಗಿಲ್ಲ. ರಾಷ್ಟ್ರ ರಾಜಧಾನಿ ಮತ್ತು ಅದರ ಪಕ್ಕದ ಪ್ರದೇಶಗಳಲ್ಲಿ ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಬಲವಾದ ನಡುಕದ ಅನುಭವದ ಬಗ್ಗೆ ಹೇಳಿಕೊಂಡಿದ್ದಾರೆ. ಸಮಯ 14:28:31 IST ದ ವೇಳೆಗೆ ಭೂಕಂಪನ ಆಗಿದೆ ಎಂದು ತಿಳಿದು ಬಂದಿದೆ.

ಭೂ ಕಂಪದ ಬಗ್ಗೆ ಜನರು ಹೇಳುವುದು ಹೀಗೆ: ನೋಯ್ಡಾದ ಬಹುಮಹಡಿ ಗೋಪುರದಲ್ಲಿ ವಾಸಿಸುವ ಶಾಂತನು ಎಂಬುವರು ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, "ಕಂಪನದ ಹೊಡೆತ ಭಯಾನಕವಾಗಿದೆ" ಎಂದು ಹೇಳಿದ್ದಾರೆ. ದೆಹಲಿ ನಿವಾಸಿ ಅಮಿತ್ ಪಾಂಡೆ ಈ ಬಗ್ಗೆ ಮಾತನಾಡಿದ್ದು, "ನಾನು ಸಿವಿಕ್ ಸೆಂಟರ್‌ನಲ್ಲಿನ ಒಂದು ಬ್ಲಾಕ್‌ನ ಐದನೇ ಮಹಡಿಯಲ್ಲಿದ್ದೆ. ನನ್ನ ಕಾಲುಗಳ ಕೆಳಗೆ ಶಬ್ದ ಮತ್ತು ನಡುಕ ಉಂಟಾಯಿತು. ಲಘುವಾದ ಅಲುಗಾಡುವಿಕೆ ಅನುಭವ ಆಯಿತು‘‘ ಎಂದು ಹೇಳಿಕೊಂಡಿದ್ದಾರೆ. ದೆಹಲಿಯ ಮುನ್ಸಿಪಲ್ ಕಾರ್ಪೊರೇಷನ್‌ನ ಪ್ರಧಾನ ಕಚೇರಿಯ ಎತ್ತರದ ಸಿವಿಕ್ ಸೆಂಟರ್‌ನಲ್ಲಿ ಅನೇಕರು ಭೂಮಿ ಕಂಪಿಸಿದ ಅನುಭವ ಹಾಗೂ ಕಟ್ಟಡ ಅಲುಗಾಡಿದ ಅನುಭವವನ್ನು ಪಡೆದುಕೊಂಡಿದ್ದಾರೆ.

ಈ ನಡುವೆ ಭೂಕಂಪನದ ಕೇಂದ್ರ ಬಿಂದು ನೇಪಾಳದಲ್ಲಿ ಇದ್ದು, ಅಲ್ಲಿ ಯಾವುದೇ ಹಾನಿಯಾದ ಬಗ್ಗೆ ತಕ್ಷಣದ ವರದಿಗಳು ಬಂದಿಲ್ಲ. ದೆಹಲಿ ಹೊರತುಪಡಿಸಿ ಉತ್ತರ ಪ್ರದೇಶ, ರಾಜಸ್ಥಾನ ಮತ್ತು ಉತ್ತರಾಖಂಡದಲ್ಲಿ ಕಂಪನದ ಅನುಭವವಾಗಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಜನರು ಭೂಮಿ ಕಂಪಿಸಿದ ಅನುಭವವನ್ನು ಹಂಚಿಕೊಂಡಿದ್ದಾರೆ. ಈ ಬಗ್ಗೆ ಮಾಧ್ಯಮಗಳ ಮುಂದೆ ತಮ್ಮ ಅನುಭವವನ್ನೂ ಹಂಚಿಕೊಂಡಿದ್ದಾರೆ. ಕೆಲವರು ತಮ್ಮ ಕಟ್ಟಡಗಳಲ್ಲಿ, ಮನೆಗಳಲ್ಲಿ ವಸ್ತುಗಳ ಸ್ವಿಂಗ್ ಮತ್ತು ಸೀಲಿಂಗ್ ಫ್ಯಾನ್‌ಗಳನ್ನು ಅಲುಗಾಡಿರುವ ಅನೇಕ ವಿಡಿಯೋಗಳನ್ನು ಅಪ್‌ಲೋಡ್ ಮಾಡಿದ್ದಾರೆ. ಸೋಮವಾರ ಸಂಜೆ ಮಣಿಪುರದಲ್ಲಿ 4.8 ತೀವ್ರತೆಯ ಭೂಕಂಪ ಸಂಭವಿಸಿದ ಒಂದು ದಿನದ ನಂತರ, ದೆಹಲಿ ಹಾಗೂ ಇನ್ನಿತರ ಪ್ರದೇಶಗಳಲ್ಲಿ ಭೂಕಂಪ ಸಂಭವಿಸಿದೆ.

ಏನಿದು ಭೂಕಂಪ?: ಭೂಮಿಯ ಮೇಲ್ಮೈಯ ನಡುಕ ಮತ್ತು ಕಂಪನಗಳನ್ನು ಸೂಚಿಸುತ್ತದೆ. ಇದು ನೈಸರ್ಗಿಕ ಅಥವಾ ಕೃತಕ ಕಾರಣಗಳಿಂದ ಉಂಟಾಗುತ್ತದೆ. ಪ್ರತಿ ವರ್ಷ ಭೂಮಿಯ ಮೇಲೆ ಸುಮಾರು ಒಂದು ಮಿಲಿಯನ್ ಭೂಕಂಪಗಳು ಸಂಭವಿಸುತ್ತವೆ.

ಭೂಕಂಪವು ಬಂಡೆಗಳ ಚಲನೆಯಿಂದ ಅಥವಾ ಭೂಮಿಯ ಹೊರಪದರದ ಆಳದಲ್ಲಿನ ಅಂತರದಿಂದ ಪ್ರಾರಂಭವಾಗುತ್ತದೆ. ಈ ಸ್ಥಳವನ್ನು ಭೂಕಂಪದ ಕೇಂದ್ರ ಎಂದು ಕರೆಯಲಾಗುತ್ತದೆ. ಹೆಚ್ಚಾಗಿ ಇದು 100 ಕಿಲೋಮೀಟರ್ ಆಳದಲ್ಲಿದೆ. ಆದರೆ ಕೆಲವೊಮ್ಮೆ ಆಳವು 700 ಕಿಲೋಮೀಟರ್ ತಲುಪುತ್ತದೆ. ಭೂಕಂಪದ ಕೇಂದ್ರಬಿಂದುಕ್ಕಿಂತ ಮೇಲಿರುವ ಭೂಪ್ರದೇಶವನ್ನು ಅಧಿಕೇಂದ್ರ ಎಂದು ಕರೆಯಲಾಗುತ್ತದೆ.

ಇದನ್ನೂ ಓದಿ: ಉತ್ತರಾಖಂಡದಲ್ಲಿ ಕಂಪಿಸಿದ ಭೂಮಿ.. 3.8 ತೀವ್ರತೆ ದಾಖಲು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.