ETV Bharat / bharat

20 ಸಾವಿರ ಕೋಟಿ ಮೊತ್ತದಲ್ಲಿ ಅಮೆರಿಕದ ಅತ್ಯಾಧುನಿಕ ಪ್ರಿಡೇಟರ್​ ಡ್ರೋನ್​ ಖರೀದಿಗೆ ರಕ್ಷಣಾ ಸಚಿವಾಲಯ ಚಿಂತನೆ

ಭಾರತೀಯ ನೌಕಾಪಡೆಯು ಹಿಂದೂ ಮಹಾಸಾಗರ ಪ್ರದೇಶದಲ್ಲಿ ಈ ಡ್ರೋನ್‌ಗಳನ್ನು ಹಾರಿಸಲಿದೆ. ಡ್ರೋನ್​ಗಳು 30 ಗಂಟೆಗಳ ನಿರಂತರ ಕಾರ್ಯಾಚರಣೆ ನಡೆಸುವ ಶಕ್ತಿ ಹೊಂದಿದ್ದು, ಚೀನಾ ನೌಕಾಪಡೆಯ ಯುದ್ಧನೌಕೆಗಳು, ಜಲಾಂತರ್ಗಾಮಿ ನೌಕೆಗಳು ಮತ್ತು ವ್ಯಾಪಾರಿ ಹಡಗುಗಳ ಮೇಲೆ ನಿಗಾ ಇಡಲಿವೆ..

american predator drones
ಪ್ರಿಡೇಟರ್​ ಡ್ರೋನ್​ ಖರೀದಿಗೆ ರಕ್ಷಣಾ ಸಚಿವಾಲಯ ಚಿಂತನೆ
author img

By

Published : Nov 15, 2021, 7:24 PM IST

ನವದೆಹಲಿ : ಅಮೆರಿಕಾ ನಿರ್ಮಿತ 'ಪ್ರಿಡೇಟರ್​ ಡ್ರೋನ್​'ಗಳನ್ನು (America's Predator drones) ಭಾರತ ಖರೀದಿಸಲು ಮುಂದಾಗಿದೆ. ಈ ಬಗ್ಗೆ ಅಮೆರಿಕಾ ಮತ್ತು ಭಾರತದ ಮಧ್ಯೆ ನಡೆಯಲಿರುವ ಉನ್ನತ ಮಟ್ಟದ ಸಭೆಯಲ್ಲಿ ಚರ್ಚೆ ನಡೆಯಲಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ.

20 ಸಾವಿರ ಕೋಟಿಗೂ(20,000 crores Contract)ಅಧಿಕ ಮೊತ್ತದ ಡ್ರೋನ್ ಖರೀದಿ ಬಗ್ಗೆ ಒಪ್ಪಂದ ಮಾಡಿಕೊಳ್ಳುವ ಕುರಿತು ಸಭೆಯಲ್ಲಿ ಪ್ರಸ್ತಾಪಿಸಲಾಗುವುದು ಎಂದು ತಿಳಿದು ಬಂದಿದೆ.

ಉನ್ನತ ಮಟ್ಟದ ಸಭೆಯಲ್ಲಿ ಡ್ರೋನ್​ಗಳನ್ನು ನೀಡಲು ಅಮೆರಿಕಾ ಒಪ್ಪಿಕೊಂಡರೆ ರಕ್ಷಣಾ ಸಚಿವಾಲಯದ ಅಂತಿಮ ಅನುಮೋದನೆಗಾಗಿ ರಕ್ಷಣಾ ಸ್ವಾಧೀನ ಮಂಡಳಿಗೆ ಪ್ರಸ್ತಾಪವನ್ನು ರವಾನಿಸಲಾಗುತ್ತದೆ. ಒಪ್ಪಂದಕ್ಕೆ ಸಹಿ ಹಾಕುವ ಮೊದಲು ಕ್ಯಾಬಿನೆಟ್ ಸಮಿತಿಯು ಅಂತಿಮ ಅನುಮೋದನೆಯನ್ನು ನೀಡಬೇಕಿದೆ.

ಭಾರತ ಮತ್ತು ಅಮೆರಿಕಾ ಮಧ್ಯೆ 2 ವರ್ಷಗಳಿಂದ ಈ ಬಗ್ಗೆ ಮಾತುಕತೆ ನಡೆಯುತ್ತಿದೆ. ಇದೀಗ ಕೇಂದ್ರ ಸರ್ಕಾರದಿಂದ ಅಂತಿಮ ಅನುಮತಿ ಸಿಗಲಿದೆ ಎಂದು ಮೂಲಗಳು ತಿಳಿಸಿವೆ. ಒಂದು ವೇಳೆ ಡ್ರೋನ್​ಗಳ ಖರೀದಿಗೆ ಕೇಂದ್ರ ಸರ್ಕಾರ ಅನಮೋದಿಸಿದರೆ, ಭಾರತೀಯ ಸೇನೆಯ ಮೂರೂ ಪಡೆಗಳು ತಲಾ 10 ಡ್ರೋನ್​ಗಳನ್ನು ಪಡೆಯಲಿವೆ. ಇವುಗಳನ್ನು ಕಣ್ಗಾವಲಿಗೆ ಮತ್ತು ಅಗತ್ಯವಿದ್ದಾಗ ದಾಳಿ ನಡೆಸಲು ಬಳಸಲಾಗುತ್ತದೆ.

ಪ್ರಿಡೇಟರ್ ಡ್ರೋನ್‌ಗಳನ್ನು ಭಾರತೀಯ ನೌಕಾಪಡೆಯು ತುರ್ತು ಸೇವೆಯ ಅಡಿಯಲ್ಲಿ ಪಡೆದುಕೊಳ್ಳಲಿದ್ದು, ಅವುಗಳನ್ನು ಗುತ್ತಿಗೆಯ ಆಧಾರದ ಮೇಲೆ ಸೇನಾಪಡೆಗೆ ಸೇರಿಕೊಳ್ಳಲಾಗುವುದು ಎಂದು ಪತ್ರಿಕೆಯೊಂದು ವರದಿ ಮಾಡಿದೆ.

ಭಾರತೀಯ ನೌಕಾಪಡೆಯು ಹಿಂದೂ ಮಹಾಸಾಗರ ಪ್ರದೇಶದಲ್ಲಿ ಈ ಡ್ರೋನ್‌ಗಳನ್ನು ಹಾರಿಸಲಿದೆ. ಡ್ರೋನ್​ಗಳು 30 ಗಂಟೆಗಳ ನಿರಂತರ ಕಾರ್ಯಾಚರಣೆ ನಡೆಸುವ ಶಕ್ತಿ ಹೊಂದಿದ್ದು, ಚೀನಾ ನೌಕಾಪಡೆಯ ಯುದ್ಧನೌಕೆಗಳು, ಜಲಾಂತರ್ಗಾಮಿ ನೌಕೆಗಳು ಮತ್ತು ವ್ಯಾಪಾರಿ ಹಡಗುಗಳ ಮೇಲೆ ನಿಗಾ ಇಡಲಿವೆ.

ಈವರೆಗೂ ಭಾರತ ಸೇನಾಪಡೆಗಳಲ್ಲಿ ಬಳಸಲಾಗುತ್ತಿರುವ ಡ್ರೋನ್​ಗಳು ಇಸ್ರೇಲ್​ ನಿರ್ಮಿತವಾಗಿವೆ. ಎತ್ತರದ ಪ್ರದೇಶಗಳಲ್ಲೂ ಇವು ಕಾರ್ಯನಿರ್ವಹಿಸುತ್ತಿವೆ. ಇದೀಗ ಅಮೆರಿಕಾ ನಿರ್ಮಿತ ಪ್ರಿಡೇಟರ್​ ಡ್ರೋನ್​ಗಳು ಅತ್ಯಾಧುನಿಕವಾಗಿವೆ. ಇವುಗಳನ್ನು ಖರೀದಿಸಲು ಸೇನಾಪಡೆ ಮುಂದಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.