ಚೆನ್ನೈ: ದೇಶಿ ಮತ್ತು ವಿದೇಶಿ ಪ್ರಯಾಣಿಕರನ್ನು ಆಕರ್ಷಿಸುವ ಸಲುವಾಗಿ ಕಾರ್ಡೆಲಿಯಾ ಕ್ರೂಸಸ್ ಐಷಾರಾಮಿ ಕ್ರೂಸ್ ಲೈನರ್ನನ್ನು ಅಭಿವೃದ್ಧಿಪಡಿಸಿದೆ. ಕಾರ್ಡೆಲಿಯಾ ಕ್ರೂಸ್ ಐಷಾರಾಮಿ ಕ್ರೂಸ್ ಲೌಂಜ್, ರೆಸ್ಟೋರೆಂಟ್, ಈಜುಕೊಳ, ಬಾರ್, ಓಪನ್-ಏರ್ ಸಿನಿಮಾ, ಮಕ್ಕಳ ಆಟದ ಮೈದಾನ ಮತ್ತು ಜಿಮ್‌ನಂತಹ ಹಲವಾರು ಮನರಂಜನಾ ವೈಶಿಷ್ಟ್ಯಗಳೊಂದಿಗೆ ಸಜ್ಜುಗೊಂಡಿದೆ.
ಮೊದಲ ಹಂತದ ಸೇವೆಯಲ್ಲಿ ವಾರದಲ್ಲಿ ಎರಡು ದಿನ ಚೆನ್ನೈ ಬಂದರಿನಿಂದ ಸಮುದ್ರದ ಮಧ್ಯಕ್ಕೆ ಪ್ರಯಾಣಿಕರನ್ನು ಕರೆದುಕೊಂಡು ಹೋಗಲು ಯೋಜಿಸಲಾಗಿದೆ. ಪ್ರಯಾಣಿಕರ ಸಂಖ್ಯೆ ಆಧರಿಸಿ ಪ್ರಯಾಣ ದರ ನಿರ್ಧಾರವಾಗಲಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ: ಒಂದೇ ಕಾಲಲ್ಲಿ ಶಾಲೆಗೆ ಬರುವ ಪುಟಾಣಿ.. ವಿಡಿಯೋ ನೋಡಿ ನೆರವಿಗೆ ಮುಂದಾದ ಸೋನು ಸೂದ್!
ತಮಿಳುನಾಡಿನ ಪ್ರವಾಸೋದ್ಯಮ ಇಲಾಖೆಯೂ ಈ ಯೋಜನೆಗೆ ಸಹ - ಪ್ರಾಯೋಜಕತ್ವವನ್ನು ನೀಡುತ್ತಿದೆ. ಇದನ್ನು ಖಾಸಗಿ ಐಷಾರಾಮಿ ಕ್ರೂಸ್ ಹಡಗು ನಡೆಸಲಿದೆ. ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಜೂನ್ 4 ರಂದು ಚೆನ್ನೈ ಬಂದರಿನಿಂದ ಹಡಗಿನ ಮೊದಲ ಪ್ರಯಾಣವನ್ನು ಪ್ರಾರಂಭಿಸಲಿದ್ದಾರೆ.