ETV Bharat / bharat

''ಕಾಂಗ್ರೆಸ್​​​ ಇಲ್ಲದೇ ಪ್ರತಿಪಕ್ಷವಿಲ್ಲ'', UPA ಸೇರುವ ಬಗ್ಗೆ ಶಿವಸೇನೆ ಶೀಘ್ರದಲ್ಲೇ ನಿರ್ಧಾರ ಎಂದ ರಾವತ್​ - ರಾಹುಲ್​-ರಾವತ್​ ಭೇಟಿ

ಈ ಹಿಂದೆ ಎನ್​​ಡಿಎ ಮಿತ್ರಕೂಟದಲ್ಲಿ ಗುರುತಿಸಿಕೊಂಡಿದ್ದ ಶಿವಸೇನೆಯು ಬದಲಾದ ರಾಜಕೀಯ ಬೆಳವಣಿಗೆಯಿಂದ ಮಹಾರಾಷ್ಟ್ರದಲ್ಲಿ ಎನ್​ಸಿಪಿ, ಕಾಂಗ್ರೆಸ್​ ಜೊತೆ ಸೇರಿ ಮೈತ್ರಿ ಸರ್ಕಾರ ರಚಿಸಿತು. ಅಲ್ಲಿಂದ ಎನ್​ಡಿಎ ಮಿತ್ರಕೂಟದಿಂದ ಅಂತರ ಕಾಯ್ದುಕೊಂಡು ಬಂದಿದೆ. ಇದೀಗ ಯುಪಿಎ ಸೇರಿಕೊಳ್ಳುವ ಬಗ್ಗೆ ಗಂಭೀರವಾದ ಚರ್ಚೆ ನಡೆಸುತ್ತಿದ್ದು, ಮುಂದಿನ ಕೆಲ ದಿನಗಳಲ್ಲಿ ಈ ಬಗ್ಗೆ ಅಂತಿಮ ನಿರ್ಧಾರ ಹೊರಬೀಳುವ ಸಾಧ್ಯತೆ ಇದೆ.

Sanjay Raut Shiv Sena decision on joining UPA

author img

By

Published : Dec 7, 2021, 9:23 PM IST

ನವದೆಹಲಿ: 'ಯುಪಿಎ ಎಂಬುದು ಈಗ ಉಳಿದಿಲ್ಲ' ಎಂಬ ಹೇಳಿಕೆ ನೀಡುವ ಮೂಲಕ ಕಾಂಗ್ರೆಸ್​​ಗೆ ಟಾಂಗ್​​ ನೀಡಿದ್ದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಗೆ ಇದೀಗ ಶಿವಸೇನೆಯ ಸಂಜಯ್​ ರಾವತ್​ ತಿರುಗೇಟು ನೀಡಿದ್ದಾರೆ. ಈ ನಿಟ್ಟಿನಲ್ಲಿಂದು ದೆಹಲಿಯಲ್ಲಿ ಶಿವಸೇನೆ ಮುಖ್ಯಸ್ಥ ಸಂಜಯ್​ ರಾವತ್​​​​​​ ಹಾಗೂ ರಾಹುಲ್​ ಗಾಂಧಿ ಸುದೀರ್ಘ ಚರ್ಚೆ ನಡೆಸಿದರು.

ಈ ವೇಳೆ, ಮಹಾರಾಷ್ಟ್ರದಲ್ಲಿನ ಮೈತ್ರಿ ಸರ್ಕಾರ ಹಾಗೂ ಯುಪಿಎ ಸೇರುವ ವಿಚಾರವಾಗಿ ಮಹತ್ವದ ಮಾತುಕತೆ ನಡೆಯಿತು. ಇದರ ಬೆನ್ನಲ್ಲೇ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ರಾಹುಲ್​ ಜೊತೆಗಿನ ಚರ್ಚೆ ಬಳಿಕ ಸಂಜಯ್​ ರಾವತ್​​ ಮಾತು

ಕಾಂಗ್ರೆಸ್​​ ಇಲ್ಲದೇ ಯಾವುದೇ ಪ್ರತಿಪಕ್ಷ ಇಲ್ಲ ಎಂದಿರುವ ರಾವತ್​​, ಆದಷ್ಟು ಬೇಗ ಯುಪಿಎ ಸೇರಿಕೊಳ್ಳುವ ಬಗ್ಗೆ ಶಿವಸೇನೆ ನಿರ್ಧಾರ ಕೈಗೊಳ್ಳಲಿದೆ ಎಂದಿದ್ದಾರೆ. ಆಡಳಿತ ಪಕ್ಷ ಬಿಜೆಪಿ ವಿರುದ್ಧ ಒಂದೇ ಪ್ರತಿಪಕ್ಷ ಇರಬೇಕು. ಆದರೆ, ಕಾಂಗ್ರೆಸ್​​ ಇಲ್ಲದೇ ಪ್ರತಿಪಕ್ಷ ಇರಲು ಸಾಧ್ಯವಿಲ್ಲ ಎಂದರು. ಮೂರರಿಂದ ನಾಲ್ಕು ವಿಪಕ್ಷಗಳನ್ನು ಕಟ್ಟಿಕೊಂಡು ಏನು ಮಾಡಲು ಸಾಧ್ಯ ಎಂದು ಅವರು ಪ್ರಶ್ನೆ ಮಾಡಿದರು.

ಇದನ್ನೂ ಓದಿರಿ: "No UPA" ಎಂದ ಮಮತಾ.. ಕುತೂಹಲ ಕೆರಳಿಸಿದ ಸಂಜಯ್​ ರಾವತ್​​-ರಾಹುಲ್ ಗಾಂಧಿ ಭೇಟಿ

ರಾಹುಲ್​ ಗಾಂಧಿ ಮುಂದಿನ ದಿನಗಳಲ್ಲಿ ಮಹಾರಾಷ್ಟ್ರಕ್ಕೆ ಬರಲಿದ್ದು, ಈ ವೇಳೆ ಯುಪಿಎ ಮೈತ್ರಿಕೂಟ ಸೇರಿಕೊಳ್ಳುವ ಬಗ್ಗೆ ಶಿವಸೇನೆ ಅಂತಿಮ ನಿರ್ಧಾರ ತಿಳಿಸಲಿದೆ ಎಂದು ರಾವತ್​ ಹೇಳಿದರು.

ರಾಹುಲ್​ ಗಾಂಧಿ ಅವರೊಂದಿಗೆ ಸುದೀರ್ಘವಾದ ಚರ್ಚೆ ನಡೆಸಲಾಗಿದ್ದು, ಇದರ ಬಗ್ಗೆ ಮುಖ್ಯಮಂತ್ರಿ ಉದ್ಧವ್​ ಠಾಕ್ರೆ ಅವರಿಗೆ ಮೊದಲು ಮಾಹಿತಿ ನೀಡುತ್ತೇನೆ. ಇದಾದ ಬಳಿಕ ಶಿವಸೇನೆಯ ಉಳಿದ ನಾಯಕರೊಂದಿಗೆ ಮಾಹಿತಿ ಹಂಚಿಕೊಳ್ಳುವುದಾಗಿ ರಾವತ್​ ತಿಳಿಸಿದರು. ಮಹಾರಾಷ್ಟ್ರದಲ್ಲಿ ಈಗಾಗಲೇ ಕಾಂಗ್ರೆಸ್, ಎನ್​ಸಿಪಿ ಮತ್ತು ಶಿವಸೇನೆ ಮೈತ್ರಿ ಸರ್ಕಾರವಿದ್ದು, ಇದೊಂದು ಮಿನಿ ಯುಪಿಎ ಆಗಿದೆ ಎಂದರು.

ಮುಂದಿನ ವರ್ಷ ಮಹಾರಾಷ್ಟ್ರದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಮೂರು ಪಕ್ಷಗಳು ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸುವ ಬಗ್ಗೆ ಇಂದಿನ ಸಭೆಯಲ್ಲಿ ಪ್ರಸ್ತಾಪವಾಗಿರುವ ಸಾಧ್ಯತೆ ಇದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.