ETV Bharat / bharat

ವಿಡಿಯೋ ವೈರಲ್​: ಹಳಿ ಮೇಲೆ ವಿಡಿಯೋ ಮಾಡ್ತಿದ್ದಾಗ ಅವಘಡ.. ರೈಲಿಗೆ ಸಿಲುಕಿ ಯುವಕ ದುರ್ಮರಣ

ರೈಲ್ವೆ ಹಳಿ ಮೇಲೆ ನಿಂತುಕೊಂಡು ವಿಡಿಯೋ ಮಾಡ್ತಿದ್ದಾಗ ಯುವಕನ ಪ್ರಾಣವೇ ಹಾರಿಹೋಗಿರುವ(deadly passion youth making video on railway track) ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

Man died in Railway track
Man died in Railway track
author img

By

Published : Nov 22, 2021, 5:56 PM IST

ಹೋಶಂಗಾಬಾದ್​​(ಮಧ್ಯಪ್ರದೇಶ): ಕೆಲವೊಂದು ಸಂದರ್ಭಗಳಲ್ಲಿ ನಾವು ಮಾಡುವ ಎಡವಟ್ಟಿನ ಹವ್ಯಾಸಗಳೇ ನಮ್ಮ ಜೀವನಕ್ಕೆ ಕುತ್ತು ತಂದುಬಿಡುತ್ತವೆ. ಇದಕ್ಕೆ ಸಾಕ್ಷಿಯಂತಿದೆ ಮಧ್ಯಪ್ರದೇಶದ ಹೋಶಂಗಾಬಾದ್​​ನಲ್ಲಿ ಭಾನುವಾರ ನಡೆದಿರುವ ಘಟನೆ.

ಹೋಶಂಗಾಬಾದ್​​​ನ ಇಟಾರ್ಸಿಯಲ್ಲಿ ಯುವಕನೋರ್ವನಿಗೆ ರೈಲು ಡಿಕ್ಕಿ(Man died in Railway track) ಹೊಡೆದು ಪ್ರಾಣ ಕಳೆದುಕೊಂಡಿದ್ದಾನೆ. ಈ ಘಟನೆಯ ವಿಡಿಯೋ ಎಲ್ಲೆಡೆ ವೈರಲ್(Video Viral)​​ ಆಗುತ್ತಿದೆ. 22 ವರ್ಷದ ಸಂಜು ಎಂಬ ಯುವಕ ತನ್ನ ಸ್ನೇಹಿತನೊಂದಿಗೆ ಇಟಾರ್ಸಿಯಲ್ಲಿರುವ ಶರದ್ದೇವರ ಭೇಟಿಗೆ ಬಂದಿದ್ದನು. ದೇಗುಲಕ್ಕೆ ತೆರಳಿ ಅಲ್ಲಿಂದ ವಾಪಸ್​​ ಬಂದಿರುವ ಇಬ್ಬರು ಅಲ್ಲಿನ ರೈಲ್ವೆ ಹಳಿ ಬಳಿ ಮೊಬೈಲ್​ನಲ್ಲಿ ವಿಡಿಯೋ ಮಾಡುತ್ತಿದ್ದರು. ಈ ವೇಳೆ ರೈಲಿಗೆ ಸಿಲುಕಿ ಸಂಜು ತನ್ನ ಪ್ರಾಣ ಕಳೆದುಕೊಂಡಿದ್ದಾನೆ.

ರೈಲ್ವೆ ಹಳಿ ಮೇಲೆ ವಿಡಿಯೋ ಮಾಡ್ತಿದ್ದಾಗ ಅವಘಡ

ಇದನ್ನೂ ಓದಿರಿ: ದಾಂಪತ್ಯ ಜೀವನಕ್ಕೆ ಕಾಲಿಟ್ಟ U-19 ವಿಶ್ವಕಪ್ ವಿಜೇತ ಹೀರೋ ಉನ್ಮುಕ್ತ್​ ಚಾಂದ್​

ಹಳಿ ಮೇಲೆ ರೈಲು ಬರುತ್ತಿದ್ದಾಗ ಸಂಜು ಅದರ ಮುಂದೆ ನಿಂತುಕೊಂಡಿದ್ದು, ತನ್ನ ಸ್ನೇಹಿತನಿಗೆ ವಿಡಿಯೋ ಮಾಡುವಂತೆ ತಿಳಿಸಿದ್ದಾನೆ. ಈ ವೇಳೆ ರೈಲು ಬಡಿದು ಸಾವನ್ನಪ್ಪಿದ್ದಾನೆ. ಶವದ ಮರಣೋತ್ತರ ಪರೀಕ್ಷೆ ನಡೆಸಿ, ಈಗಾಗಲೇ ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಆತನ ಸ್ನೇಹಿತನ ವಿಚಾರಣೆ ನಡೆಸಲಾಗಿದೆ ಎಂದು ಪೊಲೀಸ್​ ವರಿಷ್ಠಾಧಿಕಾರಿ ನಾಗೇಶ್ ವರ್ಮಾ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.