ETV Bharat / bharat

ಸತ್ತಿದ್ದಾನೆಂದು ಅಂತ್ಯಸಂಸ್ಕಾರ ಮಾಡಿದ ವ್ಯಕ್ತಿ 3 ತಿಂಗಳ ಬಳಿಕ ಮನೆಗೆ ವಾಪಸ್​!

ರಸ್ತೆ ಅಪಘಾತದಲ್ಲಿ ತೀರಿಕೊಂಡ ಶವವನ್ನು ತಂದು ತಮ್ಮ ಮನೆಯ ಸದಸ್ಯ ಎಂದು ಗುರುತಿಸಿ ಅಂತ್ಯಸಂಸ್ಕಾರ ಮಾಡಿದ ಮೂರು ತಿಂಗಳ ಬಳಿಕ ಸತ್ತನೆಂದು ತಿಳಿಸಿದ್ದ ವ್ಯಕ್ತಿ ಮನೆಗೆ ಮರಳಿದ್ದು, ಕುಟುಂಬಸ್ಥರು ಶಾಕ್​ ಆಗಿದ್ದಾರೆ.

dead man returns home
ಸತ್ತ ವ್ಯಕ್ತಿ ಮನೆಗೆ ವಾಪಸ್​
author img

By

Published : Mar 29, 2021, 9:15 AM IST

ಪಥನಮ್​ತಿಟ್ಟ: ಮೃತಪಟ್ಟಿದ್ದ ವ್ಯಕ್ತಿ ಅಂತ್ಯಸಂಸ್ಕಾರ ಮುಗಿದ ಮೂರು ತಿಂಗಳ ಬಳಿಕ ದಿಢೀರ್​​ ಪ್ರತ್ಯಕ್ಷವಾಗಿದ್ದಾನೆ.

35 ವರ್ಷದ ಸಕ್ಕಾಯಿ ಅಲಿಯಾಸ್​ ಸಬು ಎಂಬಾತ ಕೆಲಸದ ಮೇಲೆ ಹೊರಗೆ ಇದ್ದು, ವರ್ಷಕೊಮ್ಮೆ ಮಾತ್ರ ಮನೆಗೆ ಬರುತ್ತಿದ್ದ. ಹೋಟೆಲ್​ ಕೆಲಸ, ಗಾಡಿ ಕ್ಲೀನರ್​ ಕೆಲಸ ಮಾಡಿಕೊಂಡಿದ್ದ ಈತ ಯಾವಾಗಲೋ ಒಮ್ಮೆ ಮನೆ ಕಡೆ ತಿರುಗಿ ನೋಡುತ್ತಿದ್ದ. ಈ ಮಧ್ಯೆ ಕೊಟ್ಟಾಯಂ ಜಿಲ್ಲೆಯ ಇಡಪ್ಪಡಿ ಬಳಿ ನಡೆದ ಅಪಘಾತದಲ್ಲಿ ವ್ಯಕ್ತಿಯೊಬ್ಬ ಸ್ಥಳದಲ್ಲೇ ಸಾವನ್ನಪ್ಪಿದ್ದ. ಶವವನ್ನು ಪೋಸ್ಟ್​ ಮಾರ್ಟಮ್​ಗೆ ಕಳುಹಿಸಿದ್ದ ಪೊಲೀಸರು ಶವ ಗುರುತಿಸಲು ಸಬುನ ಸಹೋದರ ಹಾಗೂ ಸಂಬಂಧಿಕರನ್ನು ಕರೆಸಿದ್ದರು. ಈ ವೇಳೆ ಮೃತ ವ್ಯಕ್ತಿಗೆ ಮೂರು ಹಲ್ಲುಗಳು ಇರಲಿಲ್ಲ. ಕಾಕತಾಳೀಯ ಎಂಬಂತೆ ಸಬುಗೆ ಕೂಡ ಮುಂದಿನ ಮೂರು ಹಲ್ಲುಗಳು ಇರಲಿಲ್ಲವಾದ್ದರಿಂದ ಆತನ ಕುಟುಂಬಸ್ಥರು ಶವ ಸಬುನದೇ ಎಂದು ತೆಗೆದುಕೊಂಡು ಹೋಗಿ ಹೆಣದ ಅಂತ್ಯಸಂಸ್ಕಾರ ನೆರವೇರಿಸಿದ್ದರು.

ಹೋಟೆಲ್​ವೊಂದರಲ್ಲಿ ನಡೆದ ಕಳ್ಳತನ ಪ್ರಕರಣ ಸಂಬಂಧ ತಿರುವನಂತಪುರಂ ಪೊಲೀಸರು ಸಬುವನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಈ ಹಿನ್ನೆಲೆ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ ವ್ಯಕ್ತಿ ಸಬು ಎಂದು ಶಂಕಿಸಿ ಕುಟುಂಬಸ್ಥರಿಗೆ ಕರೆ ಮಾಡಿದ್ದರು. ಇದೀಗ ಸತ್ತಿದ್ದಾನೆ ಎಂದುಕೊಂಡಿದ್ದ ಸಬು ವಾಪಸ್​ ಮನೆಗೆ ಮರಳಿದ್ದಾನೆ. ಆದರೆ ಸಬುನದು ಎಂದು ಹೇಳಲಾಗಿದ್ದ ಶವ ಯಾರದು ಎಂಬುದು ಇನ್ನು ತಿಳಿದು ಬಂದಿಲ್ಲ. ಹೀಗಾಗಿ ಆ ವ್ಯಕ್ತಿಯ ಪತ್ತೆಗೆ ತನಿಖೆ ಮುಂದುವರಿಸಿರುವುದಾಗಿ ತಿರುವನಂತಪುರಂ ಪೊಲೀಸರು ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.