ETV Bharat / bharat

16 ವರ್ಷಗಳ ಬಳಿಕ ಸಿಕ್ತು ಯೋಧನ ಶವ; ವೀರಪುತ್ರನ ಕೊನೆಯ ಬಾರಿ ನೋಡಲು ಪೋಷಕರೇ ಇಲ್ಲ - dead body of a soldier found after 16 years in uttarakhand

ಸಿಯಾಚಿನ್ ಬೆಟ್ಟದ ಮೇಲೆ ತ್ರಿವರ್ಣ ಹಾರಿಸಿದ ಸೈನಿಕ ಅಮರೀಶ್ ತ್ಯಾಗಿ ಗಾಜಿಯಾಬಾದ್‌ನ ಮುರಾದನಗರ ಪ್ರದೇಶದ ಹಿಸಾಲಿ ಗ್ರಾಮದ ನಿವಾಸಿ. 2005ರಲ್ಲಿ ಅವರು ತಮ್ಮ ತಂಡದೊಂದಿಗೆ ಧ್ವಜ ಹಾರಿಸಲು ಸಿಯಾಚಿನ್‌ನ ಮೇಲ್ಭಾಗಕ್ಕೆ ಹೋಗಿದ್ದರು. ಆದರೆ ಹಿಂದಿರುಗುವಾಗ ಉತ್ತರಾಖಂಡದಲ್ಲಿ ಒಂದು ಅಪಘಾತ ಸಂಭವಿಸಿತ್ತು.

ಹುತಾತ್ಮ ಯೋಧ
ಹುತಾತ್ಮ ಯೋಧ
author img

By

Published : Sep 26, 2021, 10:33 PM IST

ಗಾಜಿಯಾಬಾದ್: ಒಂದಲ್ಲ, ಎರಡಲ್ಲ ಬರೋಬ್ಬರಿ 16 ವರ್ಷಗಳ ಬಳಿಕ ಯೋಧನ ಪಾರ್ಥಿವ ಶರೀರ ಆತನ ಹುಟ್ಟೂರಿಗೆ ಆಗಮಿಸುತ್ತಿದೆ. ಸೆಪ್ಟೆಂಬರ್ 2005ರಲ್ಲಿ ಉತ್ತರಾಖಂಡದ ಪರ್ವತದಲ್ಲಿ ಕಮರಿಗೆ ಬಿದ್ದು ಯೋಧ ಹುತಾತ್ಮರಾಗಿದ್ದರು.

ಸಿಯಾಚಿನ್ ಬೆಟ್ಟದ ಮೇಲೆ ತ್ರಿವರ್ಣ ಹಾರಿಸಿದ ಸೈನಿಕ ಅಮರೀಶ್ ತ್ಯಾಗಿ ಗಾಜಿಯಾಬಾದ್‌ನ ಮುರಾದನಗರ ಪ್ರದೇಶದ ಹಿಸಾಲಿ ಗ್ರಾಮದ ನಿವಾಸಿ. ಗಂಡೆದೆಯ ಈ ವೀರ ಯೋಧನನ್ನು ಮೊದಲು ಕಾರ್ಗಿಲ್‌ನಲ್ಲಿ ಕರ್ತವ್ಯಕ್ಕೆ ನೇಮಿಸಲಾಗಿತ್ತು. ಅವರು ಧೈರ್ಯಶಾಲಿ ಪರ್ವತಾರೋಹಿ ಕೂಡ ಆಗಿದ್ದರು. ಹಿಮಾಲಯ ಮತ್ತು ಸಿಯಾಚಿನ್ ಮೂಲಕ ಹಾದುಹೋಗುವ ಅತ್ಯುನ್ನತ ಶಿಖರದ ಮೇಲೆ ಹಲವಾರು ಬಾರಿ ತ್ರಿವರ್ಣ ಧ್ವಜ ಹಾರಿಸಿದ್ದರು.

ಹುತಾತ್ಮ ಯೋಧ ಅಮರೀಶ್ ತ್ಯಾಗಿ
ಹುತಾತ್ಮ ಯೋಧ ಅಮರೀಶ್ ತ್ಯಾಗಿ

2005ರಲ್ಲಿ ಅವರು ತಮ್ಮ ತಂಡದೊಂದಿಗೆ ಧ್ವಜ ಹಾರಿಸಲು ಸಿಯಾಚಿನ್‌ನ ಮೇಲ್ಭಾಗಕ್ಕೆ ಹೋಗಿದ್ದಾರೆ. ಆದರೆ ಹಿಂದಿರುಗುವಾಗ ಉತ್ತರಾಖಂಡದಲ್ಲಿ ಒಂದು ಅಪಘಾತ ಸಂಭವಿಸಿದೆ. ಎಲ್ಲಾ ಸೈನಿಕರು ಹಿಮದಲ್ಲಿ ಹೂತೇ ಹೋಗಿದ್ದರು. ಶೋಧ ಕಾರ್ಯದಲ್ಲಿ ಮೂವರು ಸೈನಿಕರ ಮೃತದೇಹವನ್ನು ಹೊರತೆಗೆಯಲಾಗಿತ್ತು. ಆದರೆ ಅಮರೀಶ್ ಶವ ಪತ್ತೆಯಾಗಲೇ ಇಲ್ಲ. ಅವರ ದೇಹವು ಆಳವಾದ ಕಮರಿಗೆ ಬಿದ್ದಿದೆ ಎಂದೇ ಅಂದಾಜಿಸಲಾಗಿತ್ತು.

16 ವರ್ಷಗಳ ನಂತರ ಸೇನೆಯು ಇದೀಗ ಅಮರೀಶ್​ ಮೃತದೇಹವನ್ನು ಪತ್ತೆ ಹಚ್ಚಿದೆ. ಅಮರೀಶ್ ಅವರ ಪಾರ್ಥಿವ ಶರೀರ ಮಂಗಳವಾರ ಅವರ ಸ್ವಗ್ರಾಮಕ್ಕೆ ತಲುಪಲಿದೆ. 16 ವರ್ಷಗಳಿಂದ ಕುಟುಂಬಕ್ಕೆ ಅಮರೀಶ್ ಬದುಕಿದ್ದಾರೆಯೇ ಅಥವಾ ಸತ್ತಿದ್ದಾರೆಯೇ ಎಂಬುದೇ ತಿಳಿದಿರಲಿಲ್ಲ. ಇದೀ ಹದಿನಾರು ವರ್ಷಗಳ ನಂತರ ಅವರ ಅಂತ್ಯಕ್ರಿಯೆಗೆ ಸಿದ್ಧತೆ ನಡೆಯುತ್ತಿದೆ. ಸಕಲ ಸರ್ಕಾರಿ ಗೌರವಗಳೊಂದಿಗೆ ವೀರಯೋಧನ ಅಂತ್ಯಕ್ರಿಯೆ ನಡೆಯಲಿದೆ. ಅವರ ಕುಟುಂಬದ ಸದಸ್ಯರು ಅದೆಷ್ಟೋ ವರ್ಷಗಳ ನಂತರ ಮತ್ತೆ ಭಾವುಕರಾಗಿದ್ದಾರೆ.

ಹುತಾತ್ಮ ಯೋಧ ಅಮರೀಶ್ ತ್ಯಾಗಿ ಸ್ವಗೃಹ
ಹುತಾತ್ಮ ಯೋಧ ಅಮರೀಶ್ ತ್ಯಾಗಿ ಸ್ವಗೃಹ

ಅಮರೀಶ್ ಅವರ ತಂದೆ ಕೂಡ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. 1962 ಮತ್ತು 1965 ರ ಯುದ್ಧಗಳಲ್ಲಿ ಅವರು ಕೊಡುಗೆ ನೀಡಿದ್ದಾರೆ. ಆದ್ರೆ ಈಗ ಅಮರೀಶ್ ತಂದೆ ಮತ್ತು ತಾಯಿ ತೀರಿಕೊಂಡಿದ್ದಾರೆ. ದುಃಖದ ಸಂಗತಿ ಎಂದರೆ ಮಗನನ್ನು ಕೊನೆಯ ಬಾರಿ ನೋಡಲು ಸಹ ಪೋಷಕರಿಲ್ಲ.

ಇದನ್ನೂ ಓದಿ: 34 ಗಂಟೆಯಲ್ಲಿ 472 KM ಸೈಕ್ಲಿಂಗ್... ಲೆಫ್ಟಿನೆಂಟ್ ಕರ್ನಲ್ ಗಿನ್ನಿಸ್ ದಾಖಲೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.