ದೇಗಂಗಾ(ಪಶ್ಚಿಮಬಂಗಾಳ): ಅಚ್ಚರಿಯ ಘಟನೆಯೊಂದರಲ್ಲಿ ಕೃಷಿ ಕೂಲಿಕಾರರೊಬ್ಬರ ಖಾತೆಗೆ ಸುಮಾರು 100 ಕೋಟಿ ರೂ. ಜಮಾ ಆಗಿದೆ. ಆದರೆ ಆ ಕಾರ್ಮಿಕ ಇದಕ್ಕೆ ಸಂತಸ ಪಡಬೇಕಾ ಅಥವಾ ಆತಂಕ ಪಡಬೇಕಾ ಎಂದು ತಿಳಿಯದೇ ಕಂಗಾಲಾಗಿ ಕುಳಿತುಕೊಳ್ಳುವಂತೆ ಮಾಡಿದೆ.
ಮೊಹಮ್ಮದ್ ನಾಸಿರುಲ್ಲಾ ಮೊಂಡಲ್ ಇತರರ ಭೂಮಿಯಲ್ಲಿ ಕೆಲಸ ಮಾಡುವ ಒಬ್ಬ ಕಾರ್ಮಿಕ. ಆದರೆ ಇವರ ಖಾತೆಯೆ 100 ಕೋಟಿ ರೂ ಜಮಾ ಆಗಿದೆ. ಇದು ಅಚ್ಚರಿ ಎನಿಸಿದರೂ ವಾಸ್ತವ ಮೊಹಮ್ಮದ್ ನಾಸಿರುಲ್ಲಾ ತನ್ನ ಖಾತೆಗೆ ಇಷ್ಟು ಹಣ ಹೇಗೆ ಹರಿದು ಬಂತು ಎಂದು ಯೋಚಿಸುತ್ತಾ ನಿದ್ದೆಯಿಲ್ಲದ ರಾತ್ರಿಗಳನ್ನು ಕಳೆಯುತ್ತಿದ್ದಾನೆ. ಆತನ ಖಾತೆಗೆ ಇಷ್ಟೊಂದು ಹಣ ಹೇಗೆ ಜಮೆಯಾಗಿದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಅವರಿಗೆ ಸಾಧ್ಯವಾಗುತ್ತಿಲ್ಲ.
ಇನ್ನೊಂದು ಕಡೆ ಪೊಲೀಸರು ಇವರಿಗೆ ನೋಟಿಸ್ ನೀಡಿದ್ದಾರೆ. ಇದರಿಂದಾಗಿ ಇವರು ಈಗ ಕಂಗಾಲಾಗಿದ್ದಾರೆ. ಇವರ ಖಾತೆಯಲ್ಲಿ ಇಷ್ಟೊಂದು ವ್ಯವಹಾರ ನಡೆದಿರುವ ಹಿನ್ನೆಲೆಯಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಈ ಖಾತೆಯನ್ನು ಬ್ಲಾಕ್ ಕೂಡಾ ಮಾಡಿದೆ.
ಯಾರು ಈ ನಾಸಿರುಲ್ಲಾ?: ಸ್ಥಳೀಯ ಮೂಲಗಳ ಪ್ರಕಾರ 26 ವರ್ಷದ ಮೊಹಮ್ಮದ್ ನಾಸಿರುಲ್ಲಾ ಮಂಡಲ್ ದೇಗಂಗಾದ ಚೌರಾಶಿ ಪಂಚಾಯತ್‌ನ ವಾಸುದೇವಪುರ ಗ್ರಾಮದ ನಿವಾಸಿ. ತಂದೆ - ತಾಯಿಯಲ್ಲದೆ, ಪತ್ನಿ, ಮಗ ಮತ್ತು ಮಗಳೊಂದಿಗೆ ವಾಸವಾಗಿದ್ದಾರೆ. ನಸಿರುಲ್ಲಾನ ಆದಾಯದಿಂದ ಆರು ಜನರ ಕುಟುಂಬ ಬದುಕುತ್ತಿದೆ. ಅವನು ಈಗ ಬಳಸಲಾಗದ ಸ್ವಲ್ಪ ಹಣವನ್ನು ತನ್ನ ಬ್ಯಾಂಕ್ ಖಾತೆಯಲ್ಲಿ ಉಳಿಸಿರಬಹುದು. ಅಗತ್ಯವಿದ್ದರೆ, ಅವರು ಆಗಾಗ್ಗೆ ಖಾತೆಯಿಂದ ಸ್ವಲ್ಪ ಹಣವನ್ನು ಹಿಂತೆಗೆದುಕೊಳ್ಳುತ್ತಾರೆ. ನಾಸಿರುಲ್ಲಾ ಬ್ಯಾಂಕ್ ಖಾತೆಗೆ ಸಾವಿರ ಸಾವಿರ ಹಣ ಜಮಾ ಮಾಡಲು ಆಗಿಲ್ಲ.
ಆದರೆ ಅವರ ಎಸ್‌ಬಿಐ ಖಾತೆಗೆ 100 ಕೋಟಿ ರೂ.ಗಳ ಬೃಹತ್ ಮೊತ್ತವನ್ನು ಜಮಾ ಮಾಡಲಾಗಿದೆ. ಅವರ ಅಕೌಂಟ್ನಲ್ಲಿ ಇದ್ದದ್ದು ಕೇವಲ 17 ರೂಪಾಯಿಗಳಷ್ಟೇ.. ಆದರೆ ರಾತ್ರೋ ರಾತ್ರಿ ಅವರು ಕೋಟ್ಯಧಿಪತಿ ಆಗಿದ್ದಾರೆ.
ಗೊತ್ತಾಗಿದ್ದು ಹೇಗೆ?: ಮೂಲಗಳ ಪ್ರಕಾರ, ಇತ್ತೀಚೆಗೆ ಮುರ್ಷಿದಾಬಾದ್‌ನ ಜಂಗೀಪುರ ಪೊಲೀಸ್ ಜಿಲ್ಲೆಯ ಸೈಬರ್ ಕ್ರೈಂ ಪೊಲೀಸ್ ಠಾಣೆಯಿಂದ ಉತ್ತರ 24 ಪರಗಣ ದೇಗಂಗಾ ಪೊಲೀಸ್ ಠಾಣೆಗೆ ಅಸಂಬದ್ಧ ವಹಿವಾಟಿನ ಕುರಿತು ಸೂಚನೆ ನೀಡಲಾಗಿತ್ತು. ಹೀಗಾಗಿ ನಕಲಿ ಹಣ ವರ್ಗಾವಣೆ ಹಿನ್ನೆಲೆಯಲ್ಲಿ ಖಾತೆದಾರ ನಾಸಿರುಲ್ಲಾಗೆ ನೋಟಿಸ್ ಕೂಡಾ ನೀಡಲಾಗಿದೆ. ಇದಾದ ಬಳಿಕವೇ ತಮ್ಮ ಅಕೌಂಟ್ನಲ್ಲಿ ಇಂತಹದ್ದೊಂದು ವ್ಯವಹಾರ ನಡೆದಿದೆ ಎಂಬುದು ನಾಸಿರುಲ್ಲಾಗೆ ಗೊತ್ತಾಗಿದೆ.
ಇದೇ ವೇಳೆ ಜಂಗೀಪುರ ಸೈಬರ್ ಕ್ರೈಂ ಪೊಲೀಸ್ ಠಾಣೆಯಿಂದ ಕಳುಹಿಸಲಾದ ನೋಟಿಸ್ ಅನ್ನು ನಾಸಿರುಲ್ಲಾ ಅವರಿಗೆ ಹಸ್ತಾಂತರಿಸಲಾಗಿದೆ. ಮೇ 30ರೊಳಗೆ ಅಗತ್ಯ ದಾಖಲೆಗಳನ್ನು ಒದಗಿಸಬೇಕು ಎಂದು ಈ ನೋಟಿಸ್ನಲ್ಲಿ ಸೂಚನೆ ನೀಡಲಾಗಿದೆ.
ಪೊಲೀಸರು ನೀಡಿದ ನೋಟಿಸ್ ಹಿನ್ನೆಲೆಯಲ್ಲಿ ನಾಸಿರುಲ್ಲಾ, ದೇಗಂಗಾದ ಎಸ್‌ಬಿಐ ಶಾಖೆಯಲ್ಲಿ ಕಾಣಿಸಿಕೊಂಡರು. ತಮಗೆ ಈ ಬಗ್ಗೆ ಗೊತ್ತಿಲ್ಲ ಎಂದು ನಾಸಿರುಲ್ಲಾ ತಿಳಿಸಿದ್ದಾರೆ. ’’ನಾನು ದಿನಗೂಲಿ ಮಾಡುವವ, ಬೇರೆಯವರ ಜಮೀನಿನಲ್ಲಿ ದುಡಿದು ಜೀವನ ಸಾಗಿಸುತ್ತಿದ್ದೇನೆ. ಮೊದಲು ವಿಷಯ ಅರ್ಥವಾಗಲಿಲ್ಲ. ನಂತರ ವಿದ್ಯಾವಂತರೊಬ್ಬರು ನೋಟಿಸ್ ಓದಿ ಇಡೀ ಕಥೆಯನ್ನು ಹೇಳಿದ್ದರು. ನನ್ನ ಬ್ಯಾಂಕ್ ಖಾತೆಗೆ 100 ಕೋಟಿಗಿಂತ ಒಂದು ಪೈಸೆ ಕಡಿಮೆಯಾಗಿದೆ ಎಂದು ಹೇಳಿದ್ದರು. ಅಷ್ಟೇ. ಟೆನ್ಷನ್ ಹೆಚ್ಚಿದೆ. ಏನು ಮಾಡಬೇಕೆಂದು ನನಗೆ ತಿಳಿದಿಲ್ಲ‘‘ ಎಂದು ನಾಸಿರುಲ್ಲಾ ಈಟಿವಿ ಭಾರತ್ ಜತೆ ಮಾತನಾಡಿ ತಮ್ಮ ಅಳಲು ತೋಡಿಕೊಂಡಿದ್ದಾರೆ.
ಈ ಬಗ್ಗೆ ಸೈಬರ್ ಕ್ರೈಂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ತನಿಖೆ ಬಳಿಕ ಈ ಬಗ್ಗೆ ಸಂಪೂರ್ಣ ಮಾಹಿತಿ ಗೊತ್ತಾಗಲಿದೆ.
ಇದನ್ನು ಓದಿ: ತಂದೆ, ಚಿಕ್ಕಪ್ಪನನ್ನು ಕಳೆದುಕೊಂಡರೂ ಯುಪಿಎಸ್ಸಿ ಹಠ ಬಿಡದ ಚತುರೆ: ಕರ್ನಾಟಕದ ಅಗ್ರ ರ್‍ಯಾಂಕರ್ ಮನದಾಳವಿದು!